ಕಲ್ಲಡ್ಕ: ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕ ಇಲ್ಲಿ ‘ಕಣಾದ’, ಎಂಬ ಹೆಸರಿನ ೬೦ ಕಂಪ್ಯೂಟರ್‌ಗಳನ್ನು ಇಡುವುದಕ್ಕೆ ವ್ಯವಸ್ಥೆ ಇರುವ ನೂತನ ಗಣಕ ವಿಜ್ಞಾನ ಕೊಠಡಿಯನ್ನು ಮಂಗಳೂರಿನ ಇನ್ಫೋಸಿಸ್ ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾದ ಶ್ರೀ ವಾಸುದೇವ ಕಾಮತ್‌ ಇವರು ದೀಪ ಬೆಳಗಿಸಿ, ವಿಶ್ವದ ಪ್ರಪ್ರಥಮ ಅಣು ವಿಜ್ಞಾನಿ ಕಣಾದ ಇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು.DSC_1877

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರುಇದರ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್‌ಕಲ್ಲಡ್ಕ, ವಿಶ್ವದ ಪ್ರಪ್ರಥಮ ವಿಜ್ಞಾನಿ ಕಣಾದ ಇವರ ಬಗ್ಗೆ ಮಾಹಿತಿಯನ್ನು ನೀಡಿದರು ನಂತರ ಎಲ್ಲಾಗಣ್ಯರು ಶಾಲಾ ಪರಿಚಯದ ವೀಡಿಯೋವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.DSC_1890

ಈ ಸಂದರ್ಭದಲ್ಲಿ ಮಂಗಳೂರು ಇನ್ಫೋಸಿಸ್‌ನ ಹಿರಿಯ ಪ್ರಾದೇಶಿಕ ಮುಖ್ಯಸ್ಥರಾದ ಹರೀಶ್, ಶ್ರೀ ವಿಶ್ವಶ್ರೀ ಕ್ಷೇತ್ರ ಮಹಾಸಂಸ್ಥಾನ ಬೆಂಗಳೂರು ಇಲ್ಲಿನ ಸಂಸ್ಥಾಪಕ ಧರ್ಮಾಧಿಕಾರಿಗಳಾದ ಶ್ರೀ ಉಮೇಶ್ ಶರ್ಮ, ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹ ಸಂಚಾಲಕರಾದ ರಮೇಶ್‌ಎನ್, ರಾಷ್ಟçಸೇವಿಕಾ ಸಮಿತಿಯ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಕಮಲ ಪ್ರಭಾಕರ ಭಟ್, ಪದವಿ ವಿಭಾಗದ ಪ್ರಾಂಶುಪಾಲರಾದ ಕೃಷ್ಣಪ್ರಸಾದ್, ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರಾದ ವಸಂತ ಬಲ್ಲಾಳ್, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ರವಿರಾಜ್‌ ಕಣಂತೂರು, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶಾಂಭವಿ ಮಾತಾಜಿ ಉಪಸ್ಥಿತರಿದ್ದರು. ಕರ‍್ಯಕ್ರಮವನ್ನು ಕುಶಾಲಪ್ಪಶ್ರೀಮಾನ್ ಅಮ್ಟೂರು, ಶರಣ್ಯ ಮಾತಾಜಿ, ಅಕ್ಷತಾ ಮಾತಾಜಿ, ಕವಿತಾ ಮಾತಾಜಿ ಸಂಯೋಜಿಸಿದರು.

By suddi9

Leave a Reply

Your email address will not be published. Required fields are marked *