ಕೈಕಂಬ : ಗುರುಪುರ ಶ್ರೀ ಕ್ಷೇತ್ರ ಜಂಗಮ ಸಸ್ಥಾನ ಮಠಕ್ಕೆ ಸಂಬoಧಿಸಿದ ಗುರುಪುರ ಚಿಲಿಂಬಿಯಲ್ಲಿ ಜಂಗಮ ಮಠದ ಶ್ರೀ ರುದ್ರಮುನಿ ಮಹಾಸ್ವಾಮಿಯವರ ಉಪಸ್ಥಿಯಲ್ಲಿ ಶ್ರೀ ಸಿದ್ಧೇಶ್ವರ ಶಿವಯೋಗಿಗಳ `ತೋರುಗದ್ದುಗೆ’ ಸ್ಥಾಪನೆಯು ಸೋಮವಾರ ನಡೆಯಿತು.
ತೋರುಗದ್ದುಗೆಯಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಗುರುಗಳಿಗೆ ರುದ್ರಾಭಿಷೇಕ, ಕಲಶ ಸ್ಥಾಪನೆ, ಬಿಲ್ವಾರ್ಪಣೆ, ಶ್ರೀ ಸಿದ್ದೇಶ್ವರ ಶಿವಯೋಗಿಗಳಿಗೆ ಮಹಾಪೂಜೆ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.

