ಬಂಟ್ವಾಳ ತಾಲ್ಲೂಕಿನ ಮಂಚಿ ಬೊಲ್ಪು ಕ್ರಿಯೇಶನ್ ವತಿಯಿಂದ ದೂರದರ್ಶನ ಚಂದನವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ‘ಪಾಪದ ಪಿರಾವು ತುಳು ಧಾರಾವಾಹಿ’ಗೆ ಧರ್ಮಸ್ಥಳ ಕ್ಷೇತ್ರ ವತಿಯಿಂದ ಮಂಜೂರಾದ ರೂ ಒಂದು ಲಕ್ಷ ಮೊತ್ತದ ಚೆಕ್ಕನ್ನು ಯೋಜನಾಧಿಕಾರಿ ಸುನಿತಾ ನಾಯಕ್ ಅವರು ನಿರ್ಧೇಶಕ ಕೊರಗಪ್ಪ ಶಿಂಗಾರಕೋಡಿ ಇವರಿಗೆ ಬುಧವಾರ ಹಸ್ತಾಂತರಿಸಿದರು. ಮೇಲ್ವೀಚಾರಕ ನವೀನ್ ಶೆಟ್ಟಿ ಮತ್ತಿತರರು ಇದ್ದರು.

