ಕೈಕಂಬ: ಪೆರಾರ ಬ್ರಹ್ಮ ಬಲವಾಂಡಿ ದೈವಸ್ಥಾನದ ಬಂಟ ಕಂಬ ಮರದ ಬೃಹತ್ ಮೆರವಣಿಗೆಗೆ ನ.೭ರಂದು ಗಂಜಿಮಠ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ದೇವಳದ ಅರ್ಚಕ ಗಣೇಶ್ ಭಟ್ ಚಾಲನೆ ನೀಡಿದರು.
ಜೀರ್ಣೋದ್ದಾರದ ಪ್ರಯುಕ್ತ ನೂತನವಾಗಿ ಪ್ರತಿಷ್ಠಾಪಿಸಲ್ಪಡುವ ಬಂಟಕಂಬ ಮರದ ಮೆರವಣಿಗೆಯು ಗಂಜಿಮಠ ಮಹಾಗಣಪತಿ ದೇವಸ್ಥಾನದಿಂದ ಹೊರಟು ಕೈಕಂಬ ಮಾರ್ಗವಾಗಿ ಕಿನ್ನಿಕಂಬಳ ಮಾರ್ಗವಾಗಿ ಪೆರಾರ ಶ್ರೀ ಬಲವಾಂಡಿ ಕ್ಷೇತ್ರಕ್ಕೆ ಸಾಗಿತ್ತು.
ಮೆರವಣಿಗೆಯುದ್ದಕ್ಕೂ ನಾನಾ ಸಂಘ ಸಂಸ್ಥೆಗಳಿದ ಭಜನೆಗಳು, ಕುಣಿತ ಭಜನೆ, ಚೆಂಡೆ, ಕೊಂಬು ವಾದ್ಯದೊಂದಿಗೆ ವಿಜೃಂಭಣೆಯಿಂದ ಸಾಗಿತು. ದೈವಸ್ಥಾನದ ಆಡಳಿತಧಿಕಾರಿ ಸಂಬಂದಪಟ್ಟ ಗುತ್ತಿನ ಮನೆಯವರು ಗ್ರಾಮಸ್ತರು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಂಗಳೂರು ಉತ್ತರ ಶಾಸಕ ಹಾಗೂ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಹಾಗೂ ಡಾ.ವೈ ಭರತ್ ಶೆಟ್ಟಿ,ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಶಿವಾಜಿ ಶೆಟ್ಟಿ ಕೊಳಕೆಬೈಲ್, ಕ್ಷೇತ್ರದ ಪೆರ್ಗಡೆಯವರಾದ ಮುಂಡಬೆಟ್ಟು ಗುತ್ತು ಗಂಗಾಧರ ರೈ, ವಿಜಯ ಪ್ರಕಾಶ್ ಮಲ್ಲಿ ಪ್ರಾಣಿಬೆಟ್ಟು ಗುತ್ತು, ಕಾರ್ಯದರ್ಶಿ ಸುರೇಶ್ ಅಂಚನ್, ಡಾ. ಮೋಹನ್ ದಾಸ್ ರೈ, ಶೇಖರ ಸಪಲಿಗ, ವಿದ್ಯಾ ಜೋಗಿ, ಕಾಶಿನಾಥ ಕಾಮತ್, ಹರೀಶ್ ಶೆಟ್ಟಿ, ಪ್ರತೋಷ್ ಮಲ್ಲಿ, ಶಾಂತಿ ಭವನ ರಾಘವೇಂದ್ರ ಭಟ್ ಬಜಪೆ , ಶ್ರೀ ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ದೋಣಿಂಜೆಗುತ್ತು ಪ್ರಮೋದ್ ಕುಮಾರ್ ರೈ, ಶ್ರೀ ಕ್ಷೇತ್ರದ ಆಡಳಿತಧಿಕಾರಿ ಸಾಯಿ ಚೌಟ, ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಮಿತ, ಬಾಲಕೃಷ್ಣ ಶೆಟ್ಟಿ, ಮೋಹನ್ ಶೆಟ್ಟಿ, ಗುತ್ತಿನ ಮನೆಯವರು, ಮತ್ತು ಸ್ಥಳೀಯ ಮುಂದಾಳುಗಳು, ಸಿಬ್ಬಂದಿವರ್ಗ ಕ್ಷೇತ್ರಕ್ಕೆ ಸಂಭದಪಟ್ಟ ಭಕ್ತಾಧಿಗಳು ಇದ್ದರು.


