ಕೈಕಂಬ: ಪೆರಾರ ಗ್ರಾಮದ ಶ್ರೀ ಬ್ರಹ್ಮದೇವರು, ಇಷ್ಟದೇವತೆ, ಬಲವಾಂಡಿ, ವ್ಯಾಪ ಚಾಮುಂಡಿ ದೈವಸ್ಥಾನದಲ್ಲಿ ನೂತನವಾಗಿ ಪ್ರತಿಷ್ಠಾಪನೆಗೊಳ್ಳಲಿರುವ ಪವಿತ್ರ ಬಂಟ ಕಂಬ ಮರದ ಮೆರವಣಿಗೆ ನ.೭ ರಂದು ಮಧ್ಯಾಹ್ನ ೨ ಗಂಟೆಗೆ ಗಂಜಿಮಠ ಮಹಾಗಣಪತಿ ದೇವಸ್ಥಾನದಿಂದ ಶ್ರೀ ಕ್ಷೇತ್ರ ಪೆರಾರಕ್ಕೆ ಸಾಗಲಿದೆ.
ಭಕ್ತರು ಪವಿತ್ರ ಬಂಟ ಕಂಬ ಮರಕ್ಕೆ ಹೂ ಹಾಗೂ ತೆಂಗಿನಕಾಯಿ ಅರ್ಪಿಸಬಹುದು. ಮೆರವಣಿಗೆಯಲ್ಲಿ ಭಜನಾ ತಂಡಗಳ ಭಾಗವಹಿಸುವಿಕೆಗೆ ಅವಕಾಶವಿದೆ
