ತಿರುವನಂತಪುರ: ನೈತಿಕ ಪೊಲೀಸ್ ಗಿರಿ ವಿರೋಧಿಸಿ ಯುವಕರ ಪಡೆಯೊಂದು ಆಯೋಜಿಸಲುದ್ದೇಶಿಸಿದ್ದ  `ಕಿಸ್ ಡೇ’ಗೆ ಪೊಲೀಸರೇ ಅಡ್ಪೊಡಿಪಡಿಸಿದ  ಘಟನೆ ಕೇರಳದ ತಿರುವನಂಥಪುರಂನಲ್ಲಿ ನಡೆದಿದೆ. 

kiiss

ಘಟನೆಯ ವಿವರ: ಅ.23ರಂದು ಕೋಜಿಕೊಡೆ ಎಂಬಲ್ಲಿ ಬಹಿರಂಗವಾಗಿ ಕಿಸ್ ಕೊಟ್ಟು ಕುಲಗೆಟ್ಟುಹೋಗಿದ್ದ ಪ್ರೇಮಿಗಳ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದರು. ಇದು ದೃಶ್ಯ ಮಾಧ್ಯಮವೊಂದರಲ್ಲಿ ಪ್ರಸಾರಕಂಡಿತ್ತು. ಇದರಿಂದ ಕೆಂಡಾಮಂಡಲವಾದ ಕಿಸ್ಸರ್ ಗಳು ಇದೊಂದು ನೈತಿಕ ಪೊಲೀಸ್ ಗಿರಿ ಎಂದು ಬಗೆದು ಅದಕ್ಕೆ ಸೆಡ್ಡು ಹೊಡೆಯಲು ಮುಂದಾಗಿದ್ದರು.

 

‘ಕಿಸ್ ಆಫ್ ಲವ್’ ಎಂಬ ಹೆಸರಿನಲ್ಲಿ ಕಿರುಚಿತ್ರ ತಯಾರಕ ರಾಹುಲ್ ಪಶುಪಾಲನ್ ಎಂಬುವರು ಕಿಸ್ ಕೊಡಲೆಂದೇ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ನವೆಂಬರ್ 2ಕ್ಕೆ ಸಾವಿರಾರು ಪ್ರೇಮಿಗಳು ಒಂದೆಡೆ ಸೇರಿ ಚುಂಬಿಸಿಕೊಳ್ಳಲು ವೇದಿಕೆ ಸಿದ್ಧಮಾಡಿಸಿದ್ದರು. ಅಲ್ಲದೇ ‘ಕಿಸ್ ಡೆ’ ಕುರಿತಾಗಿ ಫೇಸ್ ಬುಕ್ ಪೇಜ್ ವೊಂದನ್ನು ತೆರೆದು ಕಿಸ್ಸರ್ ಗಳನ್ನು ಹುಯಿಲೆಬ್ಬಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ  4,500ಕ್ಕೂ ಹೆಚ್ಚು ಜನ ನಾವು ಭಾಗವಹಿಸಲಿದ್ದೇವೆ ಎಂಬ ಸಂದೇಶ ರವಾನಿಸಿದ್ದರು. ಆದರೆ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಕೊನೆಗೂ ಈ ಅನೈತಿಕ ಕಾರ್ಯಕ್ರಮ ರದ್ದುಗೊಂಡಿದೆ ಎಂದು ಕೆಲವರು ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕೇರಳದ ಮಹಿಳಾ ಆಯೋಗವೂ ಸಹ ಇಂಥಾ ನೀಚ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿತ್ತು.

By Suddi9

Leave a Reply

Your email address will not be published. Required fields are marked *