ಮೂಡುಬಿದಿರೆ: ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥೀಗಳು ಅತ್ಯುತ್ತಮ ಸಾಧನೆ ಮಾಡಿದ್ದು, ಕೆಟಗರಿ ವಿಭಾಗದಲ್ಲಿ ಹರ್ಷಿತಾ ಗಂಗಾಧರಪ್ಪ ನೆಗಲೂರು 661 ಅಂಕ ಗಳಿಸಿ 4ನೇ Rank ಹಾಗೂ ಶೈಕ್ಷಾ ನಾಯಕ್ ಬಿ.ಪಿ 651 ಅಂಕ ಗಳಿಸಿ 8ನೇ ರ್ಯಾಂಕ್ ಪಡೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.WhatsApp Image 2021-11-03 at 7.36.01 AM

ರ್ಯಾಂಕ್ ಪಡೆದ ಇಬ್ಬರು ವಿದ್ಯಾರ್ಥಿಗಳು ದೇಶದ ನಂ.1 ಸ್ಥಾನದಲ್ಲಿರುವ ದೆಹಲಿಯ ಪ್ರತಿಷ್ಠಿತ ಏಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶಾವಕಾಶ ಲಭಿಸಲಿದೆ. ಆಳ್ವಾಸ್ ಪಿಯು ಕಾಲೇಜಿನಿಂದ 1538 ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ. ಒಟ್ಟು 720 ಅಂಕಗಳಲ್ಲಿ 20 ವಿದ್ಯಾರ್ಥಿಗಳು 650 ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. 62 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ, 312 ವಿದ್ಯಾರ್ಥಿಗಳು 500ಕ್ಕಿಂತ ಹೆಚ್ಚು ಅಂಕ, 360 ವಿದ್ಯಾರ್ಥಿಗಳು 400ಕ್ಕೂ ಅಧಿಕ ಅಂಕ 313 ವಿದ್ಯಾರ್ಥಿಗಳು 300 ಕ್ಕೂ ಅಧಿಕ ಅಂಕ ಗಳಿಸಿದ್ದಾರೆ. ಒಟ್ಟಾರೆ ಫಲಿತಾಂಶದಲ್ಲಿ 350ಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರಿ ಜನರಲ್ ಕೋಟಾದಡಿ ದೇಶದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ. ಅಲ್ಲದೆ ಎಸ್‍ಸಿ, ಎಸ್‍ಟಿ, ಗ್ರಾಮೀಣ, ಕನ್ನಡ ಮಾಧ್ಯಮ, ಹೈದ್ರಾಬಾದ್ ಕರ್ನಾಟಕ, ವಿಕಲಚೇತನರ ಕೋಟಾದಡಿಯೂ ಅತೀ ಹೆಚ್ಚು ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದಾರೆ. ಹೀಗಾಗಿ 400 ಕ್ಕೂ ಅಧಿಕ ಮಂದಿ ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯಲು ಅವಕಾಶ ಲಭಿಸಿದೆ. 500ಕ್ಕಿಂತ ಹೆಚ್ಚು ಅಂಕ ಗಳಿಸಿದ 312 ವಿದ್ಯಾರ್ಥಿಗಳಲ್ಲಿ 175 ವಿದ್ಯಾರ್ಥಿಗಳು ಸಂಸ್ಥೆಯ ದತ್ತು ಶಿಕ್ಷಣ ವ್ಯವಸ್ಥೆಯ ವಿದ್ಯಾರ್ಥಿಗಳಾಗಿದ್ದಾರೆ. ಇವರಿಗೆ ಸಂಸ್ಥೆಯು ಸುಮಾರು ಎರಡು ಕೋಟಿಯಷ್ಟು ವಿನಿಯೋಗಿಸಿದೆ ಎಂದು ಅವರು ತಿಳಿಸಿದರು.

650ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು
ಶಶಾಂಕ್ ವಿಎಂ(680), ಸುಜ್ಞಾನ್ ಆರ್ ಶೆಟ್ಟಿ (675), ವೃದ್ಧಿ ಎಚ್.ರೈ(671), ದೀಕ್ಷಾ ಬಿಜಿ(667), ರಘುನಂದನ್ ಕೆ.ಆರ್(667), ಧನುಷ್ ಎಂ(665), ಚಂದಶ್ರೀ(663), ಹರ್ಷೀತಾ ಗಂಗಾಧರಪ್ಪ ನೆಗಲೂರು (661), ಮಯೂರಿ ಯು (661) ತೇಜಸ್ ಗೌಡ (659), ಸುಕೃತ್ (658), ನಂದನ್ (652), ಪೃಥ್ವಿರಾಜ್ ಕಟ್ಟೆ(651), ಶೈಕ್ಷಾ ನಾಯಕ್ (651), ಶ್ರೇಯಸ್ ಗೌಡ(651), ಗಗನ್ ಎಸ್ ಕೆ(651), ವೈಭವ್ ಎಚ್ ವಿ(650), ರಕ್ಷಿತ್ ಪರೀಕ್ (650) ದರ್ಶನ್ ಎಸ್ (650), ಸ್ವರೂಪ್ ರಾಜ್ ವರ್ಮ (650).

By suddi9

Leave a Reply

Your email address will not be published. Required fields are marked *