ಮುಂಬಯಿ : ಉಪನಗರ ಡೊಂಬಿವಲಿಯಲ್ಲಿ ಜಿ.ಎಸ್.ಬಿ ಮಂಡಲ ಡೊಂಬಿವಲಿ ಸಂಸ್ಥೆಯು ಸಾರ್ವಜನಿಕರಿಗಾಗಿ ಉಚಿತ ಕೋವಿಡ್ ಲಸಿಕರಣ (ಕೋವಿಡ್-೧೯ ಮೆಗಾ ವ್ಯಾಕ್ಸಿನೇಷನ್ ಡ್ರೈವ್) ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಿತ್ತು.
ಕಲ್ಯಾಣ್ ಡೊಂಬಿವಲಿ ಮಹಾನಗರ ಪಾಲಿಕ ಸಹಯೋಗದಲ್ಲಿ ಡೋಂಬಿವಲಿ ಪೂರ್ವದ ಅಂಬಿಕಾ ನಗರದ ಗೋಗ್ರಾಸವಾಡಿ ಇಲ್ಲಿನ ಮಂಡಲದ ಸೀತಾರಾಮ್ ಪೈ ಮೆಮೋರಿಯಲ್ ಶಾಲಾ ಸಭಾಗೃಹದಲ್ಲಿ ಬೆಳಿಗ್ಗಿನಿಂದ ಸಂಜೆ ತನಕ ಲಸಿಕರಣ ನಡೆಸಲಾಯಿತು.
ಈ ಸಂದರ್ಭದಲ್ಲಿ ಸುಮಾರು ೧೭೫ ಜನರು ಕೋವಿಶಿಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಪಡೆದು ಕೊಂಡರು. ಈ ಸಂದರ್ಭದಲ್ಲಿ ಮಂಡಲದ ಕಾರ್ಯಕಾರಿ ಸಾಮಿತಿಯ ಸದಸ್ಯರು ಹಾಗೂ ಯುವ ವಾಹಿನಿಯ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ್ದರು.
