ಸುದ್ದಿ 9 ಮಂಗಳೂರು: ಫೇಸ್ಬುಕ್ನಲ್ಲಿ ಪರಿಚಯವಾದ 16ರ ಹರೆಯದ ಅಪ್ರಾಪ್ತ ಬಾಲಕಿಯನ್ನು ಎರಡು ದಿನಗಳ ಕಾಲ ಸುತ್ತಾಡಿಸಿದ 18ರ ಹರೆಯದ ಬಾಲಕನ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಕೇರಳದ ಅಲಪ್ಪುಝ-ಅಂಬಾಲಪುರ ನಿವಾಸಿ ಜೆರ್ರಿ ಫ್ರಾನ್ಸಿಸ್(18) ಪೊಲೀಸ್ ಬಂಧನದಲ್ಲಿರುವ ಭೂಪ. ಈತನಿಗೆ ಫೇಸ್ಬುಕ್ ಮೂಲಕ ನಗರದ ಕಾಲೇಜೊಂದರ 16ರ ಹರೆಯದ ದ್ವಿತೀಯ ಪಿಯುಸಿ ವಿದ್ಯಾಥರ್ಿನಿಯ ಪರಿಚಯವಾಗಿತ್ತು. ಕಳೆದ ಒಂದೂವರೆ ವರ್ಷಗಳಿಂದ ಇಬ್ಬರ ಮಧ್ಯೆ ಚಾಟಿಂಗ್ ಮುಂದುವರಿದಿದ್ದು, ಕಳೆದ ಅ.23ರಂದು ಫ್ರಾನ್ಸಿಸ್ ಬಾಲಕಿಯನ್ನು ಭೇಟಿಯಾಗಲು ನಗರಕ್ಕೆ ಬಂದಿದ್ದ.

ಹೀಗೆ ಬಂದವನು ವಾಪಸ್ ತನ್ನ ಊರಿಗೆ ಹೋಗುವ ಮುನ್ನ ಎರಡು ದಿನಗಳ ಕಾಲ ನಗರ ಬಾಡಿಗೆ ಮನೆಯಲ್ಲಿ ಬಾಲಕಿಯ ಜೊತೆ ತಂಗಿದ್ದ ಎನ್ನಲಾಗಿದೆ. ಬಾಲಕಿ ಮನೆಯಲ್ಲಿ ಸುಳ್ಳು ಹೇಳಿ ಆತನೊಂದಿಗೆ ಇದ್ದಳು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಲಾಗಿದೆ.

ಬಾಲಕಿ ಮನೆಗೆ ವಾಪಸ್ ಆದ ಬಳಿಕ ಆಕೆಯ ಸ್ವಭಾವದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬಂದಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಪೊಲೀಸರು ಆಕೆಯ ಫೇಸ್ಬುಕ್ ಜಾಲಾಡಿದಾಗ ಜೆರ್ರಿ ಫ್ರಾನ್ಸಿಸ್ ಬಗ್ಗೆ ಮಾಹಿತಿ ದೊರೆತಿದ್ದು, ಆತನ ವಿಳಾಸವನ್ನು ಹಿಡಿದು ಅಂಬಾಲಪುರಕ್ಕೆ ತೆರಳಿ ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದು, 10ನೇ ತರಗತಿಯಲ್ಲಿ ಫೇಲ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
fbl_103014-1 copy (1)

By Suddi9

Leave a Reply

Your email address will not be published. Required fields are marked *