ಮಂಗಳೂರು: ಭಾರತೀಯ ಜನತಾ ಪಾಟರ್ಿ ಮಹಿಳಾ ಮೋಚರ್ಾ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ವತಿಯಿಂದ ಅ.28ರಂದು ಅಪರಾಹ್ನ ಜಿಲ್ಲಾ ಬಿಜೆಪಿ ಕಚೇರಿಯ ಅಕ್ಷಯ ಸಭಾಂಗಣದಲ್ಲಿ ಭಗಿನಿ ನಿವೇದಿತಾ ಜಯಂತಿಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಮಂ.ನ.ದ.ಮಂಡಲ ಅಧ್ಯಕ್ಷ ರವಿಶಂಕರ ಮಿಜಾರ್, ಡಾ| ಜ್ಯೋತಿ ಜಿ.ಕಾಣರ್ಿಕ್, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯೆ ಶ್ರೀಮತಿ ಪ್ರಭಾಮಾಲಿನಿ, ಬಿಜೆಪಿ ರಾಜ್ಯ ಪರಿಷತ್ ಸದಸ್ಯೆ ಶ್ರೀಮತಿ ಉಮಾವತಿ ಆರ್. ಸುವರ್ಣ, ಶ್ರೀಮತಿ ಅರುಣಾ ನಾಗರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಮೋಚರ್ಾ ಅಧ್ಯಕ್ಷೆ ಶ್ರೀಮತಿ ಕಾತ್ಯಾಯನಿ ರಾವ್ ಪ್ರಸ್ತಾವಣೆಯೊಂದಿಗೆ ಸರ್ವರನ್ನೂ ಸ್ವಾಗತಿಸಿದರು.

nibv
ಯುವ ವಕೀಲೆ ಕು| ಅಕ್ಷತಾ ಶೆಟ್ಟಿಯವರು ವಂದೇ ಮಾತರಂ ಗೀತೆಯೊಂದಿಗೆ ಪ್ರಾರಂಭಗೊಂಡ ಸೋದರಿ ನಿವೇದಿತಾ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉಪಾಧ್ಯಕ್ಷೆ ಶ್ರೀಮತಿ ರಂಜಿನಿ ಹಾಗೂ ಪ್ರ.ಕಾರ್ಯದಶರ್ಿ ಸಂಧ್ಯಾ ವೆಂಕಟೇಶ್ ಜಂಟಿಯಾಗಿ ನಿರೂಪಿಸಿದರು. ಹಿರಿಯ ಕಾರ್ಯಕತರ್ೆ ಶ್ರೀಮತಿ ಅರುಣಾ ನಾಗರಾಜ್, ಸೋದರಿ ನಿವೇದಿತಾರವರ ಜಯಂತಿ ಆಚರಣೆಯ ಪ್ರಸ್ತುತತೆಯ ಬಗ್ಗೆ ಮಾತನಾಡುತ್ತಾ, ಭಾರತೀಯ ಸಂಸ್ಕೃತಿಯನ್ನು ವಿಶ್ವದೆಲ್ಲೆಡೆ ಸಾರಿದ ಸ್ವಾಮಿ ವಿವೇಕಾನಂದರ ಅದ್ವಿತೀಯ ಮಾತುಗಳಿಂದ ಪ್ರಭಾವಿತಳಾದ ಐಲರ್ೆಂಡ್ನ ಮಾರ್ಗರೆಟ್ ಎಲಿಜಬೆತ್ ನೋಬಲ್ 1895ರಲ್ಲಿ ಸ್ವಾಮಿ ವಿವೇಕಾನಂದರನ್ನು ಲಂಡನ್ನಲ್ಲಿ ಭೇಟಿಯಾಗಿ ಶಿಷ್ಯತ್ವ ಸ್ವೀಕರಿಸಿ, 1898ರಲ್ಲಿ ತವರನ್ನು ತೊರೆದು ಭಾರತಕ್ಕೆ ಬಂದು ಬ್ರಹ್ಮಚರ್ಯ ದೀಕ್ಷೆ ಸ್ವೀಕರಿಸಿ, ‘ಸೋದರಿ ನಿವೇದಿತಾ’ರಾದ ಬಗ್ಗೆ, ಅವರಿಂದ ಮಹಿಳೆಯರಿಗೆ ಶಿಕ್ಷಣದ ಅರಿವನ್ನು ಮೂಡಿಸಲು ಭಾರತದಾದ್ಯಂತ ಕೈಗೊಂಡ ಶಿಕ್ಷಣ ಅಭಿಯಾನ ಇತ್ಯಾದಿ ಸವಿವರಗಳನ್ನು ನೀಡುವ ಮೂಲಕ ಅವರ ಜನ್ಮದಿನ ಆಚರಣೆಯನ್ನು ಸ್ಮರಣೀಯಗೊಳಿಸಲಾಯಿತು. ಶ್ರೀಮತಿ ಪೂಣರ್ಿಮಾ ರಾವ್ ವಂದಿಸಿದರು.

By Suddi9

Leave a Reply

Your email address will not be published. Required fields are marked *