ಮುಂಬಯಿ: ಬೆಳಗಾವಿ ಜಿಲ್ಲೆಯ ಕಸ್ತೂರಿ ಸಿರಿಗನ್ನಡ ವೇದಿಕೆ ಕೊಡಮಾಡುವ ರಾಜ್ಯ ಮಟ್ಟದ ‘ವಿದ್ಯಾ ವಿಭೂಷಣ ಪ್ರಶಸ್ತಿ’ಯನ್ನು ಮುಂಬಯಿಯಲ್ಲಿನ ಲೇಖಕ, ಪತ್ರಕರ್ತ, ಶಿಕ್ಷಕ ದುರ್ಗಪ್ಪ ಯಲ್ಲಪ್ಪ ಕೋಟಿಯವರ್ ಅವರ ಶೈಕ್ಷಣಿಕ ಸೇವೆ ಪರಿಗಣಿಸಿ ಪ್ರಶಸ್ತಿ ಪ್ರದಾನಿಸಿ ಗೌರವಿಸಿದೆ.
ಶಿಕ್ಷಣ ಕ್ಷೇತ್ರದಲ್ಲಿ ಅನವರತವಾಗಿ ಸೇವೆ ಸಲ್ಲಿಸುತ್ತಿರುವ ದುರ್ಗಪ್ಪ ಮುಂಬಯಿಯ ಶಿವ್ಡಿ ಇಲ್ಲಿನ ಮುನ್ಸಿಪಾಲ್ ಕನ್ನಡ ಶಾಲೆಯಲ್ಲಿ ಅಧ್ಯಾಪಕರಾಗಿ ದುಡಿಯುತ್ತಿದ್ದಾರೆ. ಸಾಹಿತಿಯಾಗಿದ್ದು ‘ಮುಂಬಯಿಯಲ್ಲಿ ಕನ್ನಡದ ಡಿಂಡಿಮ’ ಎಂಬ ಕೃತಿ ರಚಿಸಿ ಪ್ರಕಟಿಸಿದ್ದಾರೆ.
ಮುಂಬಯಿಯಲ್ಲಿ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೋಡಗಿಸಿ ಕೊಂಡಿದ್ದು ಒಳ ಮತ್ತು ಹೊರನಾಡಿನ ಪತ್ರಿಕೆಗಳಿಗೆ ಅನೇಕ ಲೇಖನಗಳನ್ನು ಬರೆಯುತ್ತಿರುವ ಇವರು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರದ ಸದಸ್ಯರಾಗಿದ್ದಾರೆ.
