ಪುತ್ತೂರಿನಲ್ಲಿ 26 ವರ್ಷಗಳ ಹಿಂದೆ ನಿವೃತ್ತ ತಹಸೀಲ್ದಾರ್ ಮನೆಯಿಂದ ದರೋಡೆ, ಆರೋಪಿಯನ್ನು ಬಂಧಿಸಿದ ಪುತ್ತೂರು ಪೊಲೀಸರು
ಪುತ್ತೂರು : ನಗರ ಠಾಣೆಯಲ ಅ.ಕ್ರ: 144/1995 ಕಲಂ: 448, 392 ಐ.ಪಿ.ಸಿ(LPC NO 08 /2002) ಪ್ರಕರಣದ ಆರೋಪಿ ಜೊಡ್ ಸನ್ ತಂದೆ ಜೋಸಫ್ ಸುಮಾರು 26 ವರ್ಷದಿಂದ ತಲೆ ಮರೆಸಿ ಕೊಂಡಿದ್ದವನನ್ನು ಕೇರಳ ರಾಜ್ಯದ ಎರ್ನಾಕುಲಂ ವರುಪುಝ ಪುತ್ತನ್ ಪಲ್ಲಿ ಕೈತಡ್ಕ ಚಾಲಿ ಎಂಬಲ್ಲಿ ಆರೋಪಿಯು ಇರುವ ಬಗ್ಗೆ ಹೆಚ್ ಸಿ ಪರಮೇಶ್ವರವರು ಮಾಹಿತಿ ಸಂಗ್ರಾಹಿಸಿ ಸೆ.26 ರಂದು ಭಾನುವಾರ ಎ.ಎಸ್.ಐ ಚಂದ್ರ, ಹೆಚ್.ಸಿ ಪರಮೇಶ್ವರ ಮತ್ತು ಹೆಚ್.ಸಿ ಜಗದೀಶ್ ರವರವರುಗಳು ಆರೋಪಿಯ ಮೇಲಿನ ವಿಳಾಸದಿಂದ ಪತ್ತೆ ಮಾಡಿ ದಸ್ತಗಿರಿ ಮಾಡಿ ಈ ದಿನ ಸೆ.27 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುವುದಾಗಿದೆ.