ಪುತ್ತೂರು: ದೇಯಿ ಬೈದೆತಿ ಕೋಟಿ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಇಷ್ಟಾರ್ಥಕ್ಕಾಗಿ ಪ್ರಾರ್ಥನೆ ಬಂದ ಪ್ರಥಮ ಸಂಬಳದ ಹಣದಿಂದ ಕ್ಷೇತ್ರದ ಶಕ್ತಿಗೆ ಸ್ವರ್ಣ ಹಾರ ಬೆಳ್ಳಿ ನಾಣ್ಯ ಸಮರ್ಪಣೆ.WhatsApp Image 2021-08-27 at 1.02.54 PM (1)ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಬ್ರಹ್ಮಕಲಶೋತ್ಸವ ಸಂಧರ್ಭ ದಲ್ಲಿ ಶ್ರೀ ಕ್ಷೇತ್ರದಲ್ಲಿ ಸ್ವಾತಿ ಎಂ ಪೂಜಾರಿಯವರು ವಿದ್ಯಾಭ್ಯಾಸ ಪೂರ್ಣಗೊಳಿಸಿ ಉನ್ನತ ಉದ್ಯೋಗಕ್ಕಾಗಿ ಕುಟುಂಬ ಸಮೇತ ಬಂದು ಪ್ರಾರ್ಥನೆ ಸಲ್ಲಿಸಿದ್ದರು. ಕಾರ್ಣಿಕ ಕ್ಷೇತ್ರದ ಶಕ್ತಿಗಳ ಅನುಗ್ರಹದಿಂದ ಸ್ವಾತಿ ಎಂ ಪೂಜಾರಿ ಯವರಿಗೆ ZEE ವಾಹಿನಿ ಸಂಸ್ಥೆಯಲ್ಲಿ ಉದ್ಯೋಗ ದೊರಕಿದೆ. ಇದೀಗ ತಾವು ಮಾಡಿದ ಪ್ರಾರ್ಥನೆ ಯಂತೆ ಇಂದು ಶ್ರೀ ಕ್ಷೇತ್ರ ಕ್ಕೆ ಬಂದು ಮಹಾ ಮಾತೆ ದೇಯಿ ಬೈದೆತಿಗೆ ಸ್ವರ್ಣ ಮತ್ತು ದೂಮಾವತಿ,ಕುಪ್ಪೆ ಪಂಜುರ್ಲಿ ಮತ್ತು ಬ್ರಹ್ಮ ಬೈದೇರು ಗಳಿಗೆ ಬೆಳ್ಳಿ ನಾಣ್ಯ ಸಮರ್ಪಿಸಿದರು.WhatsApp Image 2021-08-27 at 1.02.54 PMಪ್ರತಿಭಾನ್ವಿತ ಯಕ್ಷಗಾನ ಕಲಾವಿದೆ ಯಾಗಿರುವ ಸ್ವಾತಿ ಎಂ ಪೂಜಾರಿ ಯವರು ಶ್ರೀ ಕ್ಷೇತ್ರದ ಮೂಲಕ ಸಮಾಜದ ಸೇವೆ ಮಾಡುತ್ತಿರುವ ಕ್ಷೇತ್ರಾಡಳಿತ ಸಮಿತಿ ಮತ್ತು ಪುತ್ತೂರು ಬಿಲ್ಲವ ಸಂಘದ ಕಾರ್ಯ ಚಟುವಟಿಕೆ ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.WhatsApp Image 2021-08-27 at 3.36.04 PMಶ್ರೀ ಕ್ಷೇತ್ರಕ್ಕೆ ಬಂದು ತಮ್ಮ ಕಷ್ಟಗಳ ಬಗ್ಗೆ ಪ್ರಾರ್ಥನೆ ಸಲ್ಲಿಸಿದರೆ ಕ್ಷೇತ್ರದ ಶಕ್ತಿಗಳು ಪ್ರಾರ್ಥನೆ ಗೆ ಖಂಡಿತವಾಗಿ ಸ್ಪಂದಿಸುತ್ತಾರೆ ಇದು ನನಗೆ ಆದ ಅನುಭವ ಎಂದು ಭಾವಪರವಶವಾಗಿ ನುಡಿದರು. ಕ್ಷೇತ್ರಾಡಳಿತ ಸಮಿತಿಯಿಂದ ಸ್ವಾತಿ ಎಂ ಪೂಜಾರಿ ಯವರನ್ನು ಸತ್ಯ ಧರ್ಮ ಚಾವಡಿಯಲ್ಲಿ ಅಭಿನಂದಿಸಲಾಯಿತು.WhatsApp Image 2021-08-27 at 3.36.04 PM (1)

By suddi9

Leave a Reply

Your email address will not be published. Required fields are marked *