Published On: Sun, Oct 3rd, 2021

“ಅಜಾದಿ ಕಾ ಅಮೃತ ಮಹೋತ್ಸವ” ಮತ್ತು ಗಾಂಧೀ ಜಯಂತಿ ಅಂಗವಾಗಿ “ಸತ್ಯಾಗ್ರಹ ಸೇ ಸ್ವಚ್ಛಾಗ್ರಹ” ಹಾಗೂ “ಸ್ವಚ್ಛತಾ ಹೀ ಸೇವಾ” ರಥಕ್ಕೆ ಜಲಸಾರಿಗೆ ಸಚಿವ ಅಂಗಾರ ಎಸ್. ಚಾಲನೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ (ಗ್ರಾ) ಹಾಗೂ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, “ಅಜಾದಿ ಕಾ  ಅಮೃತ ಮಹೋತ್ಸವ” ಮತ್ತು ಗಾಂಧೀ ಜಯಂತಿ ಅಂಗವಾಗಿ “ಸತ್ಯಾಗ್ರಹ ಸೇ ಸ್ವಚ್ಛಾಗ್ರಹ” ಹಾಗೂ “ಸ್ವಚ್ಛತಾ ಹೀ ಸೇವಾ” ರಥಕ್ಕೆ  ಮತ್ತು ನರೇಗಾ ಯೋಜನೆಯಡಿ 100 ದಿನಗಳ  ಸೋಕ್‌ಪಿಟ್ ಅಭಿಯಾನ”ಕ್ಕೆ ಮಾನ್ಯ ಮೀನುಗಾರಿಕಾ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಅಂಗಾರ ಎಸ್. ಇವರು  ಚಾಲನೆ ನೀಡಿದರು.WhatsApp Image 2021-10-02 at 10.13.21 PMಈ ವೇಳೆ ಪಾವೂರು, ಮಂಜನಾಡಿ ಹಾಗೂ ಪೆರುವಾಯಿ ಗ್ರಾಮ ಪಂಚಾಯತ್ ಗಳ ಸ್ವಚ್ಛ ವಾಹಿನಿಯನ್ನು ಸಚಿವರು  ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕೀ ನೀಡುವ ಮೂಲಕ ಹಸ್ತಾಂತರಿಸಿದರು.  ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್, ಮಂಗಳೂರು ದಕ್ಷಿಣ ವಿಧಾನ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್, ಮಂಗಳೂರು ಮಹಾನಗರ ಪಾಲಿಕೆ ಮಹಾಪೌರರಾದ  ಶ್ರೀ ಪ್ರೇಮಾನಂದ ಶೆಟ್ಟಿ, ಕೊಡಿಯಲ್ ಬೈಲ್ ಕಾರ್ಪೋರೇಟರ್ ಶ್ರೀ ಸುಧೀರ್ ಕುಮಾರ್ ಶೆಟ್ಟಿ,  ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರಾದ ಡಾ. ಕುಮಾರ್ ಐಎಎಸ್, ಉಪಕಾರ್ಯದರ್ಶಿಗಳು ಹಾಗೂ ಸ್ವ,ಭಾ,ಮಿ(ಗ್ರಾ) ನೋಡಲ್ ಅಧಿಕಾರಿ ಕೆ. ಆನಂದ ಕುಮಾರ್ ಮುಖ್ಯ ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ ಕೆ.ಎಸ್., ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರುWhatsApp Image 2021-10-02 at 10.13.22 PMಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್
ಸ್ವಚ್ಛ ಭಾರತ್ ಮಿಷನ್ (ಗ್ರಾ)
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ೧೫೨ ನೇ ಜನ್ಮ ದಿನಾಚರಣೆ
೭೫ ನೇ ಸ್ವಾತಂತ್ರ್ಯ ದಿನಾಚರಣೆಯ “ಅಜಾದಿ ಕಾ ಅಮೃತ ಮಹೋತ್ಸವ”
ದ ಪ್ರಯುಕ್ತ “ಸತ್ಯಾಗ್ರಹ ಸೇ ಸ್ವಚ್ಛಾಗ್ರಹ ಹಾಗೂ ಸ್ವಚ್ಛತಾ ಹೀ ಸೇವಾ” ಕಾರ್ಯಕ್ರಮ
ಮತ್ತು ೧೦೦ ದಿನಗಳ “ಸೋಕ್‌ಪಿಟ್ ನಿರ್ಮಾಣ ಅಭಿಯಾನ”WhatsApp Image 2021-10-02 at 10.13.23 PM (1)

  • ನಮ್ಮ ಜವಾಬ್ದಾರಿ ಶೌಚಾಲಯ ಬಳಸಿ ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿಸುವುದು
  • ಶೌಚಾಲಯಗಳನ್ನು ನಿರಂತರವಾಗಿ ಶುಚಿಯಾಗಿಡುವುದು ಮತ್ತು ಶೌಚಾಲಯ ಬಳಕೆ ನಂತರ ಹಾಗೂ ಆಹಾರ ಸೇವಿಸುವ ಮುನ್ನ ಕೈತೊಳೆಯುವ ಅಭ್ಯಾಸವನ್ನು ರೂಢಿಗೊಳಿಸುವುದು
  •    ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ ಮತ್ತು ಒಣಕಸಗಳಾಗಿ  ವಿಂಗಡಿಸುವುದು
    ಹಸಿಕಸವನ್ನು ಮನೆಯಲ್ಲಿಯೇ ಕಾಂಪೋಸ್ಟ್ ಗೊಬ್ಬರವಾಗಿಸುವುದು.
  • ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೇ ಸುಡದೇ ಶುಚಿ ಮತ್ತು ಶುಷ್ಕವಾಗಿ ಶೇಖರಿಸಿ ಗ್ರಾಮ ಪಂಚಾಯತ್‌ನ ಸ್ವಚ್ಛ ಸಂಕೀರ್ಣ ಘಟಕಗಳಿಗೆ ನೀಡುವುದು.
  • ದಿನ ನಿತ್ಯ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಿರುವುದು
  • ಪ್ಲಾಸ್ಟಿಕ್ ಕೈಚೀಲವನ್ನು ತ್ಯಜಿಸಿ, ಬಟ್ಟೆ ಅಥವಾ ಪರಿಸರ ಸ್ನೇಹಿ ಕೈಚೀಲವನ್ನು ಉಪಯೋಗಿಸುವುದು
  • ಬೂದು ನೀರು ನಿರ್ವಹಣೆಗೆ ಸೋಕ್‌ಪಿಟ್ ನಿರ್ಮಿಸುವುದು ಮತ್ತು ಬಳಸುವುದು.WhatsApp Image 2021-10-02 at 10.13.26 PMಪುತ್ತೂರು ಕಾರ್ಯ ನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ಉಜಿರೆ ಗ್ರಾಮ ಪಂಚಾಯತ್ ಪಿಡಿಓ ಪ್ರಕಾಶ್ ಶೆಟ್ಟಿ ಅವರಿಗೆ ಸ್ವಚ್ಛತಾ ಸೇವೆಗಾಗಿ ಸಲ್ಲಿಸಿ ದ ಸೇವೆಗಾಗಿ ಸನ್ಮಾನಿಸಲಾಯಿತು. ಜಿಲ್ಲೆಯ 7 ಸ್ವಚ್ಚತೆ ಕಾರ್ಯದಲ್ಲಿ ತೊಡಗಿಕೊಂಡಿರುವ ಸ್ವಚ್ಛತಾ ಕಾರ್ಮಿಕರ ನ್ನು ಸನ್ಮಾನಿಸಲಾಯಿತುWhatsApp Image 2021-10-02 at 10.13.27 PM

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter