ಮುಂಬಯಿ: ವಿಶ್ವದಾದ್ಯಂತದ ಬಂಟರ ಎಲ್ಲಾ ಸಂಸ್ಥೆಗಳ ಒಗ್ಗೂಡುವಿಕೆಯೇ ಒಕ್ಕೂಟದ ಉದ್ದೇಶವಾಗಿದೆ. ಮುಂಬಯಿ ಬಂಟರ ಸಂಘ ಒಕ್ಕೂಟಕ್ಕೆ ಧೀಶಕ್ತಿಯಾಗಿದ್ದು ಇತರ ಬಂಟ ಸೋದರ ಸಂಸ್ಥೆಗಳು ಶಕ್ತಿಯಾಗಿದೆ. ಫೆಡರೇಶನ್ ಆಫ್ ವರ್ಲ್ಡ್ ಬಂಟ್ಸ್ ವಿಶ್ವದ ಏಕೈಕ ಸಂಸ್ಥೆಯಾಗಿಸುವಲ್ಲಿ ನಮ್ಮ ಪ್ರಯತ್ನ ಸಾಗುತ್ತಿದೆ. ಆದ್ದರಿಂದ ಈ ಒಕ್ಕೂಟ ಯಾವತ್ತೂ ವಾಟ್ಸಪ್ ವಾಯ್ಸ್ ಆಗದೆ ನಿಜಾರ್ಥದ ವಾಯ್ಸ್ ಆಗಬೇಕು. ಸ್ವಸಮುದಾಯದ ರಾಜಕಾರಣಿಗಳಲ್ಲಿ ಸ್ವಾಭಿಮಾನದ ಕೊರತೆ ಕಾಣುತ್ತದೆ.
ನಾವು ನಮ್ಮವರೆಂದು ಹೆಮ್ಮೆಪಟ್ಟರೂ ಅವರಲ್ಲಿ ಸ್ವಜಾತೀಯ ಆತ್ಮಗೌರವ ಎದ್ದು ಕಾಣುತ್ತಿಲ್ಲ. ಅದೆಷ್ಟೋ ಬಾರಿ ಬಂಟ ಸಮುದಾಯ ಭವನ, ಅನುದಾನ, ಇತರೇ ಸರಕಾರಿ ಸೌಲಭ್ಯಗಳ ಬಗ್ಗೆ ಚರ್ಚಿಸಿದರೂ ನಾವು ಅವಕಾಶ ವಂಚಿತರಾಗಿದ್ದೇವೆ. ಪ್ರಸ್ತುತ ರಾಜಕೀಯ ಶಕ್ತಿವಿನ: ಏನೂ ಸಾಧಿಸಲಾಗದು. ಇನ್ನೇನು ಎರಡು ವರ್ಷಗಳ ಒಳಗಾಗಿ ಮತದಾನ ನಡೆಯಲಿದೆ. ಇವರಿಗೆ ತಕ್ಕ ಶಾಸ್ತಿ ಕಲಿಸಲು ಮತದಾನ ವೇಳೆ ನಮ್ಮ ಶಕ್ತಿ ತೋರ್ಪಡಿಸುವ ಅಗತ್ಯವಿದೆ. ನಾವು ಪಕ್ಷಾತೀತರು ನಮಗೆ ಎಲ್ಲಾ ಪಕ್ಷಗಳೂ ಒಂದೇ ಸಮಾನ. ಹಾಗಿರುವಾಗ ನಮ್ಮ ಶಕ್ತಿ ಪ್ರದರ್ಶನ ಅಗತ್ಯವಿದೆ. ಇದಕ್ಕಾಗಿ ಕಾದು ನೋಡೋಣ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ (ಫೆಡರೇಶನ್ ಆಫ್ ವರ್ಲ್್ಡ ಬಂಟ್’ಸ್ ಅಸೋಸಿಯೇಶನ್’ಸ್ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದರು.
ಕಳೆದ ಭಾನುವಾರ ಅಪರಾಹ್ನ ಕುರ್ಲಾ ಪೂರ್ವದ ಚುನ್ನಾಭಟ್ಟಿ ಇಲ್ಲಿನ ಬಂಟರ ಭವನದ ಶ್ರೀಮತಿ ರಂಜನಿ ಸುಧಾಕರ ಹೆಗ್ಡೆ (ತುಂಗಾ) ಸಮಾಜ ಕಲ್ಯಾಣ ಎನೆಕ್ಸ್ ಸಂಕೀರ್ಣದಲ್ಲಿ ದೀಪ ಪ್ರಜ್ವಲಿಸಿ ಒಕ್ಕೂಟದ ೨೫ನೇ ವಾರ್ಷಿಕ ಮಹಾಸಭೆಗೆ ಚಲನೆಯನ್ನಿತ್ತು ಸಭಾಧ್ಯಕ್ಷತೆ ವಹಿಸಿ ಐಕಳ ಹರೀಶ್ ಮಾತನಾಡಿದರು.
ಹರೀಶ್ ಅಣ್ಣನ ಸಾಧನೆಗೆ ಮತ್ತೊಂದು ಪರ್ಯಾಯ ವ್ಯಕ್ತಿ ಸದ್ಯಕ್ಕಿಲ್ಲ ಇಂತಹ ಸೇವೆಗೆ ಮನೆಮಠ ಎಲ್ಲವನ್ನು ತ್ಯಜಿಸಿ ಸೇವೆಗೆ ಬದ್ಧರಾಗಿ ಇರಬೇಕಾಗುತ್ತದೆ ಇವರ ಸೇವಾಸ್ಟೈಲ್ ವಿಶೇಷವಾದದ್ದು ನಮಗೆ ರಾಜಕೀಯ ಶಕ್ತಿಯ ಅವಶ್ಯಕತೆ ಇದೆ ಅಲ್ಲದೆ ಕಾಯಂ ಆದಾಯ ಬಗ್ಗೆ ಫೆಡರೇಶನ್ ಯೋಚಿಸಬೇಕಾಗಿದೆ.
ಹರೀಶ್ ಅಣ್ಣನ ಸೇವಾ ಸಾಧನೆಗೆ ಸದ್ಯ ಮತ್ತೊಬ್ಬ ಪರ್ಯಾಯ ವ್ಯಕ್ತಿಯಿಲ್ಲ. ಇವರಂತಹ ಸೇವೆಗೆ ಮನೆಮಠ ಎಲ್ಲವನ್ನು ತ್ಯಜಿಸಬೇಕಾಗುತ್ತದೆ. ಹಗಲಿರುಳು ಒಂದಾಗಿಸಿ ಶ್ರಮಿಸಲು ಕಟಿಬದ್ಧರಾಗಿ ಇರಬೇಕಾಗುತ್ತದೆ. ಇವರ ಸೇವಾ ಶೈಲಿಯೇ ವೈಶಿಷ್ಟಮಯವಾದದ್ದು. ನಿಜವಾಗಿಯೂ ಬಂಟರಿಗೆ ರಾಜಕೀಯ ಶಕ್ತಿಯ ಅವಶ್ಯಕತೆವಿದೆ. ಒಕ್ಕೂಟಕ್ಕೂ ಖಾಯಂ ಆದಾಯದ ಬಗ್ಗೆ ಫೆಡರೇಶನ್ ಯೋಚಿಸಬೇಕಾಗಿದೆ ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ತಿಳಿಸಿದರು.
ಬಂಟರಲ್ಲಿ ಹುಲ್ಲಿನ (ಮುಲಿ-ಸೋಗೆ ಇಲ್ಲದ) ಮನೆ ಕಲ್ಪನೆ ಐಕಳ ಅವರ ದೊಡ್ಡ ಸಾಧನೆ. ಇದ್ದವರಿಂದ ಇಲ್ಲದವರಿಗೆ ಸಹಾಯಸ್ತ ಒದಗಿಸಿಕೊಟ್ಟ ಒಕ್ಕೂಟದ ಸೇವೆ ಶ್ಲಾಘನೀಯ ಎಂದು ಬಂಟ ಮಾತೃ ಸಂಸ್ಥೆಯ ಉಪಾಧ್ಯಕ್ಷ ಹೇಮಂತ್ ಶೆಟ್ಟಿ ಕಾವು ತಿಳಿಸಿದರು.
ನಮಗೆ ಜಾತಿ ಅನ್ನುವುದು ಅಸಂವಿಧಾನಿಕ. ಆದರೂ ಹುಟ್ಟುಪಡೆದ ಮಾತೃಪಿತಾರ ಋಣಾನುಸಾರ ಜಾತಿಯೂ ತಾಯಿ ರೂಪವಾಗಿರುತ್ತದೆ. ಆದ್ದರಿಂದ ತಾಯಿಯಂತೆ ಸ್ವಸಮುದಾಯ, ಜಾತೀಯ ಸಂಸ್ಥೆಗಳನ್ನು ಪ್ರೀತಿಸುವುದೂ ಪರಮ ಕರ್ತವ್ಯ. ನಮ್ಮಲ್ಲೂ ಜಾತೀಯ ಸಂಘಟನೆಗಳನೇಕವು ಇದ್ದು ನಾನೂ ಸುಮಾರು ೬೫ ವರ್ಷಗಳಿಂದ ಬಂಟ್ಸ್ ಸಂಘ ಮುಂಬಯಿ ಇದರಲ್ಲಿ ಸಕ್ರೀಯಳಾಗಿದ್ದೇನೆ. ಬಂಟ್ಸ್ ಸಂಘ ಮುಂಬಯಿ ಮತ್ತು ಮುಂಬಯಿನ ಬಂಟರಲ್ಲಿ ಯಾರೂ ಸಹಾಯಸ್ತಕ್ಕಾಗಿ ಕೇಳಿಕೊಂಡರೂ ಇರ್ಯಾರೂ ಹಿಂದೇಟು ಹಾಕಿದವರಲ್ಲ. ಇದೇ ಬಂಟರ ದೊಡ್ಡಸ್ಥಿಕೆ ಎಂದು ಡಾ| ಸುನೀತಾ ಎಂ.ಶೆಟ್ಟಿ ಅಭಿಪ್ರಾಯ ಪಟ್ಟರು.
ಒಕ್ಕೂಟದ ನೂತನ ನಿರ್ದೇಶಕ ಪ್ರವೀಣ್ ಭೋಜ ಶೆಟ್ಟಿ ವೇದಿಕೆಯಲ್ಲಿ ಆಸೀನರಾಗಿದ್ದರು. ಬಂಟ್ಸ್ ಸಂಘ ಮುಂಬಯಿ ಗೌ| ಪ್ರ| ಕಾರ್ಯದರ್ಶಿ ಡಾ| ಆರ್.ಕೆ ಶೆಟ್ಟಿ, ಬಾಂಬೇ ಬಂಟ್ಸ್, ಅಸೋಸಿಯೇಶನ್ನ ಅಧ್ಯಕ್ಷ ಮುರಳಿ ಕೆ.ಶೆಟ್ಟಿ, ಪುಣೆ ಬಂಟ್ಸ್ ಅಧ್ಯಕ್ಷ ಇನ್ನಕುರ್ಕಿಲಬೆಟ್ಟು ಸಂತೋಷ್ ಶೆಟ್ಟಿ, ಮುಲುಂಡ್ ಬಂಟ್ಸ್ ಅಧ್ಯಕ್ಷ ವಸಂತ್ ಶೆಟ್ಟಿ ಪಲಿಮಾರ್, ಮಾತೃಭೂಮಿ ಸಂಸ್ಥೆಯ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು, ಒಕ್ಕೂಟದ ಮಾಜಿ ಗೌ| ಕೋಶಾಧಿಕಾರಿ ಕೊಲ್ಲಾಡಿ ಬಾಲಕೃಷ್ಣ ರೈ ಸೇರಿದಂತೆ ಒಕ್ಕೂಟದ ಮಹಾಪೋಷಕರು, ಪೋಷಕರು ಹಾಗೂ ವಿವಿಧ ಬಂಟ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಸಭೆಯಲ್ಲಿ ಹಾಜರಿದ್ದು ಬಂಟ್ಸ್ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಪ್ರಭಾಕರ ಎಲ್.ಶೆಟ್ಟಿ, ಸಂತೋಷ್ ಶೆಟ್ಟಿ ಗುರುಪುರ, ಬಂಟರ ಸಂಘ ಸುರತ್ಕಲ್ ಇದರ ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ, ಮನೋಹರ್ ಶೆಟ್ಟಿ ತೋನ್ಸೆ, ವಿಜಯಾ ಶೆಟ್ಟಿ ಸಾಲೆತ್ತೂರು, ಜೀವನ್ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು. ಚಿತ್ರಾ ಗಣೇಶ್ ಶೆಟ್ಟಿ ಪ್ರಾರ್ಥನೆಯನ್ನಾಡಿದರು. ಒಕ್ಕೂಟದ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ವಾರ್ಷಿಕ ಚಟುವಟಿಕೆ ಮತ್ತು ಗತ ಸಾಲಿನ ವರದಿ ಮಂಡಿಸಿದರು. ಕೋಶಾಧಿಕಾರಿ ಉಳ್ತೂರು ಮೋಹನ್ದಾಸ್ ಶೆಟ್ಟಿ ವಾರ್ಷಿಕ ಲೆಕ್ಕಪತ್ರಗಳ ಮಾಹಿತಿಯನ್ನಿತ್ತರು. ಒಕ್ಕೂಟದ ಜೊತೆ ಕಾರ್ಯದರ್ಶಿ ಸತೀಶ್ ಅಡಪ್ಪ ಸಂಕಬೈಲ್ ವಂದಿಸಿದರು.
