ಮುಂಬಯಿ : ಗುಜರಾತ್ ಬಿಲ್ಲವರ ಸಂಘವು ಕಳೆದ ಭಾನುವಾರ ಗುಜರಾತ್ ರಾಜ್ಯದ ಬರೋಡಾ ಅಲ್ಕಾಪುರಾ ಇಲ್ಲಿನ ಸಂಘದ ಶ್ರೀ ಬೈದ್ಯಶ್ರೀ ಸಾಂಸ್ಕೃತಿಕ ಸಭಾ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ೧೬೭ನೇ ಜಯಂತಿಯನ್ನು ಭಜನಾ ಸಂಕೀರ್ತನೆ ಹಾಗೂ ಮಾತೃ ವಂದನಾ ಮತ್ತು ಧಾರಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಲ್ಲಿ ವೈಭವೊಪಿತವಾಗಿ ನೆರವೇರಿಸಿತು.Gujarat Billawara Narayana Guru Jayanti 1ಗಾಯತ್ರಿ ಪರಿವಾರ ಬರೋಡದ ಇದರ ಸದಸ್ಯರ ಪಾಲ್ಗೊಳ್ಳುವಿಕೆಯಲ್ಲಿ ಬೆಳಗ್ಗೆ ಗುರು ಪಾದುಕಾ ಪೂಜೆಯಿಂದ ಕಾರ್ಯಕ್ರಮ ಆದಿಗೊಂಡವು. ಮಾತೃದೇವೋಭವ, ಪಿತೃದೇವೋಭವ ಎಂಬ ಉಪನಿಷದಿನ ಮಾತಿಗೆ ಅನುಗುಣವಾಗಿ ಮಂತ್ರೋಚಾರ ಹಾಗೂ ಪ್ರವಚನದ ಮೂಲಕ ನಡೆಸಲಾಗಿ ಮಾತೃವಂದನೆಯಲ್ಲಿ ಕಿರಿಯರೆಲ್ಲಾ ತಮ್ಮ ಮಾತಾಪಿತರ ಪಾದಪೂಜೆ ನಡೆಸಿ ಆಶೀರ್ವಾದ ಪಡೆದು ಕೊಂಡರು. ಇದು ಕಾರ್ಯಕ್ರಮದ ವಿಶೇಷವಾಗಿತ್ತು.Gujarat Billawara Narayana Guru Jayanti 2ತದನಂತರ ಸಂಘದ ಗೌರವಾಧ್ಯಕ್ಷ ದಯಾನಂದ ಬೊಂಟ್ರ (ಬೆಳ್ಮಣ್ಣು) ಬರೋಡಾ ಇವರ ಮುಂದಾಳುತ್ವ ಹಾಗೂ ಮಾರ್ಗದರ್ಶನದೊಂದಿಗೆ ಜಿಬಿಎಸ್ ಅಧ್ಯಕ್ಷ ವಿಶ್ವನಾಥ್ ಜಿ.ಪೂಜಾರಿ ಬಾರ್ಡೋಲಿ (ಸೂರತ್) ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಸಲ್ಪಟ್ಟಿತು.Gujarat Billawara Narayana Guru Jayanti 3ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಮೋಹನ್ ಸಿ.ಪೂಜಾರಿ ಅಹ್ಮದಾಬಾದ್, ನಿಕಟಪೂರ್ವ ಅಧ್ಯಕ್ಷ ಮನೋಜ್ ಸಿ.ಪೂಜಾರಿ ಸೂರತ್, ಉಪಾಧ್ಯಕ್ಷ ವಾಸು ಪೂಜಾರಿ ಬರೋಡಾ, ಹರೀಶ್ ಪೂಜಾರಿ, ವಾಸು ಪೂಜಾರಿ, ವಿ.ಡಿ ಅಮೀನ್, ಸದಾಶಿವ ಪೂಜಾರಿ ವಾಪಿ, ಶಿಕ್ಷಣ ಸಮಿತಿಯ ಮುಖ್ಯಸ್ಥ ಲಕ್ಷ್ಮಣ್ ಪೂಜಾರಿ ಬರೋಡಾ ಮತ್ತಿತರ ಪದಾಧಿಕಾರಿಗಳುGujarat Billawara Narayana Guru Jayanti 4ಮಾತೃ ವಂದನಾ ಯೋಜನೆ ಕುರಿತು ದಯಾನಂದ ಬೊಂಟ್ರ ಮಾಹಿ ನೀಡಿ ಸ್ವಾಭಿಮಾನದ ಬದುಕಿನೊಂದಿಗೆ ಸ್ವಾವಲಂಬಿಗಳು ಆಗಬೇಕೆಂದೂ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಆಧ್ಯಾತ್ಮಿಕ ಚಿಂತನೆ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಕರೆಯಿತ್ತರು.Gujarat Billawara Narayana Guru Jayanti 5ಮೋಹನ್ ಸಿ.ಪೂಜಾರಿ ಅಹ್ಮದಾಬಾದ್ ಮಾತೃ ವಂದನೆ ಬಗ್ಗೆ ಪ್ರಶಂಸಿಸಿದರು. ಗುರುಗಳ ಆದರ್ಶಗಳನ್ನು ಪಾಲಿಸಿಕೊಂಡು ಬರುವಂತೆ ಮನೋಜ್ ಪೂಜಾರಿ ಕರೆ ನೀಡಿದರು.Gujarat Billawara Narayana Guru Jayanti 6ವೇದಿಕೆಯಲ್ಲಿ ಆಸೀನರಾಗಿದ್ದು ೨೦೨೦-೨೧ರಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಿ ಅಭಿನಂದಿಸಿದರು.Gujarat Billawara Narayana Guru Jayanti 7ವಿಶ್ವನಾಥ್ ಜಿ.ಪೂಜಾರಿ ಸ್ವಾಗತಿಸಿದರು. ವಿದ್ಯಾರ್ಥಿ ವೇತನದ ಬಗ್ಗೆ ಲಕ್ಷ್ಮಣ್ ಪೂಜಾರಿ ವಿವರ ನೀಡಿದರು. ರೇವತಿ ಪೂಜಾರಿ ಪುರಸ್ಕಾರ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೆ ನೆರವು ನೀಡಿದ ಸರ್ವರನ್ನು ಜೊತೆ ಕೋಶಾಧಿಕಾರಿ ರವಿ ಸಾಲಿಯಾನ್ ಬರೋಡಾ ಅಭಿನಂದಿಸಿದರು. ಪ್ರಧಾನ ಕಾರ್ಯದರ್ಶಿ ವಾಸು ವಿ.ಸುವರ್ಣ ಧನ್ಯವಾದ ಸಮರ್ಪಿಸಿದರು.Gujarat Billawara Narayana Guru Jayanti 12ಈ ಅಪೂರ್ವ ಕಾರ್ಯಕ್ರಮದಲ್ಲಿ ಗುಜರಾತ್ ಬಿಲ್ಲವ ಸಂಘದ ವಾಪಿ, ಅಂಕಲೇಶ್ವರ್, ಸೂರತ್, ಬರೋಡ, ಹಾಗೂ ಅಹ್ಮದಾಬಾದ್ ಶಾಖೆಗಳ ಬಹುತೇಕ ಸದಸ್ಯರು ಪಾಲ್ಗೊಂಡಿದ್ದು ಕೊನೆಯಲ್ಲಿ ಮಹಾ ಪ್ರಸಾದ ಪ್ರದಾನಿಸಿ ಸಂಪ್ರದಾಯಿಕವಾಗಿ ಕಾರ್ಯಕ್ರಮ ಮುಕ್ತಾಯ ಗೊಳಿಸಲ್ಪಟ್ಟಿತು.Gujarat Billawara Narayana Guru Jayanti 13

By suddi9

Leave a Reply

Your email address will not be published. Required fields are marked *