ಸುದ್ದಿ9ಬಂಟ್ವಾಳ ತಾಲೂಕಿನ ಅಣ್ಣಳಿಕೆಯಿಂದ ರಾಯಿ ಮಹಾಲಿಂಗೇಶ್ವರ ದೇವಸ್ಥಾನದ ವಠಾರದವರೆಗೆ 383 ಗನವೇಶಧಾರಿ ಸ್ವಯಂಸೇವಕರ ಆಕರ್ಷಕ ಪಥಸಂಚಲನ ನಡೆಯಿತು.
ವಿಜಯದಶಮಿ ಪ್ರಯುಕ್ತ ನಡೆದ ಈ ಕಾರ್ಯಕ್ರಮದಲ್ಲಿ ಬೌದ್ಧಿಕ್ ನಡೆಸಿಕೊಟ್ಟ ಶ್ರೀ ರಾಜೇಶ್ ರವರು ಮಾತನಾಡಿ ಹಿಂದೂ ಸಮಾಜಕ್ಕೆ ಸಂಘ ಶಕ್ತಿ ತುಂಬಿದೆ ಸಮಾಜದ ಒಳಿತಿಗಾಗಿ ಲಕ್ಷಾಂತರ ಜನ ಜೊತೆಯಾಗಿ ಕೆಲಸಮಾಡುವವರನ್ನು ಕಲ್ಪಿಸಿಕೊಟ್ಟಿದೆ. ಸಂಘ ಉಪೇಕ್ಷೆ ವಿರೋಧಗಳನ್ನು ದಾಟಿ ಸ್ವೀಕಾರ ಹಂತ ತಲುಪಿದೆ.
ನಮ್ಮ ಪ್ರಭಾವ ಶಕ್ತಿ ಅಲ್ಪ ಬದಲಾಗಿ ಸಂಘಸ್ಥಾನವೇ ನಮ್ಮ ಶಕ್ತಿ ಇದನ್ನು ಬಲಪಡಿಸಬೇಕಾಗಿರುವುದು ಇಂದಿನ ಅನಿವಾರ್ಯತೆ ಸಂಘಟನೆಯೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂಬುದಾಗಿ ಮಾತು ನುಡಿದರು.
ವೇದಿಕೆಯಲ್ಲಿ ದಾಮೋದರ ನೆತ್ತರಕೆರೆ (ತಾಲೂಕುಕಾರ್ಯವಾಹ) ಉಪಸ್ತಿತರಾಗಿದ್ದರು



