ವಿಟ್ಲ: ಬಾಲಗೋಕುಲ ಕ್ಷೇತ್ರ ವಿಟ್ಲ ಇದರ ವತಿಯಿಂದ ಸಾಂಕೇತಿಕವಾಗಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಆಚರಿಸಲಾಯಿತು. ಬಾಲಗೋಕುಲದ ಗೌರವಾಧ್ಯಕ್ಷರಾದ ಕೃಷ್ಣಯ್ಯ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಸಮಿತಿ ಅಧ್ಯಕ್ಷ ಹರೀಶ್ ಧ್ವಜಾರೋಹಣ ಮಾಡಿದರು. ಸಂದರ್ಭದಲ್ಲಿ ಮಕ್ಕಳ ಭಜನಕಾರ್ಯಕ್ರಮ ನಡೆಯೀತು. ನಂತರ ಶ್ರೀಕೃಷ್ಣ ವೇಷದಾರಿ ಮಕ್ಕಳಿಗೆ ಆರತಿ ಬೆಳಗಿ ಬೆಣ್ಣೆಯನ್ನು ತಿನ್ನಿಸುವ ಮೂಲಕ ಕಾರ್ಯಕ್ರಮ ಸಂಪನ್ನವಾಯೀತು. ಈ ಕಾರ್ಯಕ್ರಮವನ್ನು ಪರಮೇಶ್ವರ ಮಂಕುಡೆ ನಿರೂಪಿಸಿದರು.
ಕಾರ್ಯದರ್ಶಿ ಯಾದ ವಿನಯ್ ಅಲಂಗಾರ್, ರಾಜೇಶ ಬೊಬ್ಬೆಕ್ಕೇರಿ, ರಾಜೇಶ್ ಆರ್ ಕೆ ಆರ್ಟ್ಸ್, ಜಗದೀಶ್ ಪಣೆಮಜಲು, ಜಗನ್ನಾಥ ಕಾಸರಗೋಡು, ಜತ್ತಪ್ಪ ಗೌಡ, ಪದ್ಮನಾಭ ಕಟ್ಟೆ ಗೋವರ್ಧನ ಇಡ್ಯಾಳ ಹಾಗೂ ಉಳಿದ ಬಾಲಗೋಕುಲ ಗ್ರಾಮ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.
