ಸುದ್ದಿ9ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ , ರೋಟರಿ ಕ್ಲಬ್ ಬಂಟ್ವಾಳ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬೆ ವಲಯ ಇದರ ಸಂಯುಕ್ತ ಆಶ್ರಯದಲ್ಲಿ ಜ/ಕೆ/ಎಸ್.ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇವರಿಂದ ಸ್ತನ ಕ್ಯಾನ್ಸರ್ನ ಉಚಿತ ತಪಾಸಣಾ ಮತ್ತು ಮಾಹಿತಿ ಶಿಬಿರವು ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಎನ್.ಪ್ರಕಾಶ್ ಕಾರಂತ್ ರ ಅಧ್ಯಕ್ಷತೆಯಲ್ಲಿ ಜರಗಿತು . ಸಂಪನ್ಮೂಲ ವ್ಯಕ್ತಿಗಳಾಗಿ ಕ್ಷೇಮ ಆಸ್ಪತ್ರೆ ವೈದ್ಯರುಗಳಾದ ಡಾ.ವಿದ್ಯಾ ಉಪಾಧ್ಯಾಯ (ರೇಡಿಯೋಲಜಿ ವಿಭಾಗ ), ಡಾ.ದೀಪಾ ಕೆ.ವಿ.(ಸ್ತ್ರೀ ರೋಗ ತಜ್ಞೆ ) ಶಿಬಿರಾರ್ಥಿ ಗಳಿಗೆ ಸ್ತನ ಕ್ಯಾನ್ಸ್ರ್ ನ ಲಕ್ಷಣ , ಗುರುತಿಸುವ ವಿಧಾನ , ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮಾಹಿತಿ ನೀಡಿದರು . ಸೇವಾಂಜಲಿಯ ಆಡಳಿತ ಟ್ರಸ್ಟೀ ಕೃಷ್ಣ ಕುಮಾರ್ ಪೂಂಜ , ರೋಟರಿ ಕ್ಲಬ್ ಕಾರ್ಯದಶರ್ಿ ಸಂಜೀವ ಪೂಜಾರಿ , ಉಪಾಧ್ಯಕ್ಷ ಕೆ.ನಾರಾಯಣ ಹೆಗ್ಡೆ , ಧ.ಗ್ರಾ.ಯೋ.ಸೇ.ಪ್ರತಿನಿಧಿ ಚಂದ್ರಾವತಿ ತುಂಬೆ , ಮೇರೆಮಜಲು ಗ್ರಾ.ಪಂ.ಅಧ್ಯಕ್ಷೆ ವೃಂದಾ ಪೂಜಾರಿ , ಕ್ಷೇಮ ಆಸ್ಪತ್ರಯ ಡಾ.ನೈನನ್ , ಸೇವಾಂಜಲಿಯ ಉಮೇಶ್ ಸೇಮಿತ , ಪ್ರಶಾಂತ್ ತುಂಬೆ , ಎ.ಕೆ.ಗಿರೀಶ್ , ಮೋಹನ್ ಸಾಲಿಯಾನ್ ಉಪಸ್ಥಿತರಿದ್ದರು . ಒಟ್ಟು 105 ಜನರು ಈ ಶಿಬಿರದ ಪ್ರಯೋಜನ ಪಡದುಕೊಂಡರು .

