ಕೋಲಾರ : ಕಡತ ವಿಲೇವಾರಿ ವೇಗ ಹೆಚ್ಚಿಸಿ , ಶಿಕ್ಷಕರು ಕಚೇರಿಗೆ ಬಂದಾಗ ಕೂರಿಸಿ ಕೆಲಸ ಮಾಡಿಕೊಡಿ , ಶಿಕ್ಷಣ ಇಲಾಖೆ ಹಾಗೂ ಜಿಲ್ಲೆಯ ಗೌರವ ಉಳಿಸಿ ಎಂದು ಡಿಡಿಪಿಐ ಕಚೇರಿ ಸಿಬ್ಬಂದಿಗೆ ವಿಧಾನಪರಿಷತ್ ಶಾಸಕ ಡಾ.ವೈ.ಎ.ನಾರಾಯಣಸ್ವಾಮಿ ತಾಕೀತು ಮಾಡಿದರು . ಬುಧವಾರ ಸಂಜೆ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಗೆ ಭೇಟಿ ನೀಡಿದ್ದ ಅವರು , ಖುದ್ದು ಕಚೇರಿ ಸಿಬ್ಬಂದಿ ಬಳಿ ತೆರಳಿ ಕಡತಗಳ ವಿಲೇವಾರಿ ಕುರಿತಂತೆ ದಾಖಲಾತಿಗಳನ್ನು ಪರಿಶೀಲಿಸಿ ನಂತರ ಸಭೆ ನಡೆಸಿದರು . ಸುಮಾರು ಸಿಬ್ಬಂದಿ ಅನುಕಂಪದ ಆಧಾರದ ಮೇಲೆ ನೇಮಕಗೊಂಡಿರುವ ಶಿಕ್ಷಕರ ಮಕ್ಕಳೇ ಆಗಿದ್ದೀರಿ , ನಿಮ್ಮ ತಂದೆತಾಯಿಯನ್ನು ಸ್ಮರಿಸಿಕೊಳ್ಳಿ , ಶಿಕ್ಷಕರು ಕಚೇರಿಗೆ ಬಂದಾಗ ಕೂರಿಸಿ ಕೆಲಸ ಮಾಡಿಕೊಡಿ , ಮುಂದಿನ ಬಾರಿ ಕಚೇರಿಗೆ ಭೇಟಿ ನೀಡಿದಾಗ ಪ್ರತಿ ಸಿಬ್ಬಂದಿ ಎದುರಿನಲ್ಲಿ ಕಚೇರಿಗೆ ಬರುವ ಶಿಕ್ಷಕರಿಗಾಗಿ ಒಂದು ಕುರ್ಚಿ ಮೀಸಲಿರಬೇಕು ಎಂದರು.
ಶಿಶುಪಾಲನಾ ರಜೆ ವಿಳಂಬಕ್ಕೆ ಆಕ್ಷೇಪ*ಶಿಶುಪಾಲನಾ ರಜೆ ಮಂಜೂರು ಮಾಡಲು ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎಂಬ ದೂರಿದೆ. ಬಂಗಾರಪೇಟೆಯ ಶಿಕ್ಷಕಿ ಬಿ.ಎಸ್.ಲಲಿತಾ ಎಂಬುವವರು ತಮ್ಮ ೧೩ ವರ್ಷದ ಮಧುಮೇಹದಿಂದ ನರಳುತ್ತಿರುವ ಮಗನ ಆರೈಕೆಗೆ ರಜೆ ಕೋರಿದ್ದು , ಏಕೆ ಮಂಜೂರು ಮಾಡಿಲ್ಲ ಎಂದು ಪ್ರಶ್ನಿಸಿದರು . ಆಯಾ ಪ್ರಾಮಿಂಗ್ ಅಧಿಕಾರಿ ಶಿಶುಪಾಲನಾ ರಜೆ ಮಂಜೂರು ಮಾಡುವ ಅಧಿಕಾರವನ್ನು ಸರ್ಕಾರ ನೀಡಿದೆ. ಈ ಕುರಿತು ಸ್ಪಷ್ಟವಾಗಿ ಸುತ್ತೋಲೆಯನ್ನು ನಾಳಂಯೇ ಎಲ್ಲಾ ಡಿಡಿಒಗಳಿಗೆ ಕಳುಹಿಸಿ ಎಂದು ಡಿಡಿಪಿಐ ನಾಗೇಶ್ ಅವರಿಗೆ ಸೂಚಿಸಿದರು.
ನೌಕರರ ಭವನಕ್ಕೆ ಅನುದಾನ ಭರವಸೆ* ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ , ನೌಕರರ ಭವನ ನವೀಕರಣಕ್ಕೆ ಅನುದಾನ ಒದಗಿಸಲು ಮನವಿ ಮಾಡಿದಾಗ ಅದಕ್ಕೆ ಒಪ್ಪಿಗೆ ನೀಡಿದರು . ಶಿಶುಪಾಲನಾ ರಜೆಯನ್ನು ಅನುದಾನಿತ ಶಾಲೆಗಳ ಸಿಬ್ಬಂದಿಗೂ ವಿಸ್ತರಿಸುವಂತೆ ಚೌಡಪ್ಪ ಇದೇ ಸಂದರ್ಭದಲ್ಲಿ ಮನವಿ ಮಾಡಿ , ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಅತಿಥಿ ಶಿಕ್ಷಕರಾಗಿ ಕೆಲಸ ಮಾಡಿದವರಿಗೆ ಇನ್ನೂ ವೇತನ ಅನುದಾನ ನೀಡಿಲ್ಲ ಎಂದು ಗಮನಕ್ಕೆ ತಂದರು . ವೈದ್ಯಕೀಯ ಬಿಲ್ಲುಗಳಿಗೆ ಅಗತ್ಯವಿರುವ ಅನುದಾನದ ಪ್ರಸ್ತಾವನೆ ಜಿಪಂ ಸಿಇಒ ಬಳಿ ಇದೆ ಎಂದಾಗ , ಸಿಇಒರನ್ನು ಸಂಪರ್ಕಿಸಿ ಕೂಡಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಲು ಸೂಚಿಸಿದ ವೈ.ಎ.ಎನ್ . ಅತಿಥಿ ಶಿಕ್ಷಕರಿಗೆ ಅಗತ್ಯವಿರುವ ಅನುದಾನದ ಪಟ್ಟ ನೀಡಿ , ನಾಳೆಂರು ಅನುದಾನ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದರು .
ಆಯುಕ್ತರೊಂದಿಗೆ ದೂರವಾಣಿ ಮಾತು* ಸಹಶಿಕ್ಷಕರಿಗೆ ಮುಖ್ಯಶಿಕ್ಷಕರಾಗಿ ಬಡ್ತಿ ನೀಡುವ ಸಂಬಂಧ ವಿಳಂಬದ ಕುರಿತು ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಚೌಡಪ್ಪ ಗಮನಕ್ಕೆ ತಂದಾಗ ಆಯುಕ್ತರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ವೈ.ಎ.ಎನ್ , ಡಿಡಿಪಿಐಗಳಿಂದ ಕೂಡಲೇ ಜೇಷ್ಠತಾ ಪಟ್ಟ ತರಿಸಿಕೊಳ್ಳಿ ಶೀಘ್ರ ಕ್ರಮವಹಿಸಿ ಎಂದು ಸೂಚಿಸಿದರು .
ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಿಗೌಡ , ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್ , ಪ್ರಾಥಮಿಕ ಶಿಕ್ಷಕರಿಗೆ ಮುಖ್ಯಶಿಕ್ಷಕರಾಗಿ ಬಡ್ತಿ , ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗಳಿಕೆ ಬಡಿ ವಿಳಂಬವಾಗಿದೆ . ೫ ವರ್ಷ ಪೂರೈಸಿದ ಸಿ ಆರ್ ಪಿ, ಬಿ.ಆರ್.ಪಿಗಳ ಕೌನ್ಸಿಲಿಂಗ್
ಮಾಡಿಸಿ ಎಂದು ಮನವಿ ಮಾಡಿದಾಗ ದೂರವಾಣಿಯಲ್ಲಿ ಆಯುಕ್ತರನ್ನು ಸಂಪರ್ಕಿಸಿ ಶೀಘ್ರ ಕ್ರಮಕ್ಕೆ ಒಪ್ಪಿಗೆ ಪಡೆದರು .
ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ , ಮುಖ್ಯಶಿಕ್ಷಕರ ಭವನ ನವೀಕರಣಕ್ಕೆ ೫ ಲಕ್ಷ ಅನುದಾನ ನೀಡಲು ಮನವಿ ಮಾಡಿದರು , ಇ ಸಿ ಒ ಸಿರಾಜ್ ಉದ್ದೀನ್
ಉರ್ದು ಪ್ರೌಢಶಾಲೆ ಮಂಜೂರಿಗೆ ಮನವಿ ಮಾಡಿದರು.
ನಾನೂ ಕೂಲಿಯೇ ಜನರ ಸೇವೆ ಮಾಡಿ ನಾವು ನೀವು ಎಲ್ಲರೂ ಸರ್ಕಾರದಲ್ಲಿ ಕೂಲಿಗಳೇ , ಸಮಾಜಕ್ಕೆ ಸೇವೆ ಮಾಡುವ ಅವಕಾಶ ಸಿಕ್ಕಿದೆ ,. ಬಿಇಒ ಕಚೇರಿ ಸಿಬ್ಬಂದಿ ನಿವೃತ್ತ ಶಿಕ್ಷಕರ ಕಡತ ಕಳುಹಿಸಲು ವಿಳಂಬ ಮಾಡಬೇಡಿ ಎಂದು ತಾಕೀತು ಮಾಡಿದರು.
ವೈಎಎನ್ ಪ್ರಶ್ನೆಗೆ ಉತ್ತರಿಸಿದ ಡಿಡಿಪಿಐ ಎಸ್.ಜಿ.ನಾಗೇಶ್ , ಜಿಲ್ಲೆಯಲ್ಲಿ ಕೋವಿಡ್‌ನಿಂದ ೧೩ ಶಿಕ್ಷಕರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿ , ಅವರಿಗೆ ನೀಡಬೇಕಾದ ಸೌಲಭ್ಯಗಳ ಕಡತಗಳ ಶೀಘ್ರ ವಿಲೇವಾರಿಗೆ ಸೂಚಿಸಲಾಗಿದೆ ಎಂದರು . ಶಿಕ್ಷಣಾಧಿಕಾರಿ ಎ.ಎನ್ ನಾಗೇಂದ್ರಪ್ರಸಾದ್ , ಎಸೆಸೆಲ್ಲಿಯಲ್ಲಿ ಜಿಲ್ಲೆಗೆ ೫ ನೇ ಶ್ರೇಣಿ ಬಂದಿದೆ ಎಂದು ತಿಳಿಸಿದಾಗ ಅಧಿಕಾರಿ ಶಿಕ್ಷಕರನ್ನು ವೈ.ಎ.ಎನ್ . ಅಭಿನಂದಿಸಿದರು . ವಿಷಯ ಪರಿವೀಕ್ಷಕಿ ಗಾಯತ್ರಿ ಈಗಾಗಲೇ ಜಿಲ್ಲೆಯಲ್ಲಿ ಶೇ .೫೧ ರಷ್ಟು ಪಠ್ಯಪುಸ್ತಕ ಬಂದಿದ್ದು , ವಿತರಣೆಗೆ ಸಿದ್ದತೆ ಮಾಡಲಾಗಿದೆ ಎಂದರು .
ಶಿಕ್ಷಣ ಸಚಿವರು ಪ್ರಾಮಾಣಿಕರಿದ್ದಾರೆ . ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕು . ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಟಾನಕ್ಕೆ ಸಿದ್ಧತೆ ಮಾಡಿಕೊಳ್ಳಿ . ಭಷ್ಟತೆ ಆರೋಪ ಇಲ್ಲದವರನ್ನು ಅನುದಾನಿತ ಶಾಲೆ ಶಾಖೆಗೆ ನೇಮಿಸಿ ಎಂದು ತಿಳಿಸಿದರು .
ಸಭೆಯಲ್ಲಿ ಕಸಾಪ ಅಧ್ಯಕ್ಷ ನಾಗಾನಂದ ಕೆಂಪರಾಜ್ , ತಾಲೂಕು ಮುಖ.ಶಿಕಕರ ಸಂಘದ ದಾಸಪ್ಪ , ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಮುರಳಿಮೋಹನ್ , ಸಹಶಿಕ್ಷಕರ ಸಂಘದ ಮುಕುಂದ , ಶರಣಪ್ಪ , ಸುರೇಶ್ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಎಂ.ಎನ್.ಶ್ರೀನಿವಾಸಮೂರ್ತಿ , ಆರ್.ನಾಗರಾಜ್ , ನೌಕರರ ಸಂಘದ ನಿರ್ದೇಶಕ ಚಂದಪ್ಪತಿಮ್ಮಸಂದ್ರ ನಾಗರಾಜ್ , ಮತ್ತಿತರರು ಶಿಕ್ಷಕರ ಸಮಸ್ಯೆಗಳನ್ನು ಗಮನಕ್ಕೆ ತಂದರು . ಸಭೆಯಲ್ಲಿ ಡಿಡಿಪಿಐ ಎಸ್.ಜಿ.ನಾಗೇಶ್ , ಶಿಕ್ಷಣಾಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ , ಡಿವೈಪಿಸಿ ಗಂಗರಾಮಯ್ಯ , ಬಿಇಒ ರಾಮಕೃಷ್ಣಪ್ಪ , ವಿಷಯ ಪರಿವೀಕ್ಷಕರಾದ ಗಾಯಿತಿ , ಶಶಿವಧನ , ವ್ಯವಸ್ನಾಪಕ ಗೋವಿಂದಗೌಡ , ಅಧೀಕ್ಷಕ ಮಂಜುನಾಥರೆಡ್ಡಿ , ಲಕ್ಷ್ಮಣ್ , ಮಂಜುನಾಥ್ ಚಂದ್ರಶೇಖರ್ , ಶಿವು ಪುತ್ತಿತರರಿದ್ದರು
