ಕೈಕಂಬ : ಬ್ರಹ್ಮಶ್ರೀ ನಾರಾಯಣ ಗುರುವರ್ಯರ 167ನೇ ಜನ್ಮದಿನಾಚರಣೆಯ ಪ್ರಯುಕ್ತ ಆ.23 ರಂದು ಸೋಮವಾರ, ಕಂದಾವರ ಗುರುನಗರ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಮಂದಿರದ ಅರ್ಚಕರಾದ ಶ್ರೀ ನಾರಾಯಣ ಪೂಜಾರಿಯವರ ನೇತೃತ್ವದಲ್ಲಿ ಭಜನೆ, ಗುರುಪೂಜೆ ಮತ್ತು ಅನ್ನಸಂತರ್ಪಣೆಯು ಸರಕಾರದ covid ಮಾರ್ಗಸೂಚಿ ಯಂತೆ ನಡೆಯಿತು.WhatsApp Image 2021-08-23 at 8.55.34 PM (2)ಈ ಸಮಯದಲ್ಲಿ ಅನಿರೀಕ್ಷಿತವಾಗಿ ಮಂದಿರಕ್ಕೆ ಭೇಟಿ ಕೊಟ್ಟಂತಹ ಉಡುಪಿ ಶಂಕರಪುರದಿಂದ ಶ್ರೀ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿರವರನ್ನು ಸಂಘದ ಗೌರವ ಅಧ್ಯಕ್ಷರಾದ ಶ್ರೀ ಗಂಗಾಧರ ಸುವರ್ಣ ಮತ್ತು ಅರ್ಚಕರಾದ ಶ್ರೀ ನಾರಾಯಣ ಪೂಜಾರಿ ಯವರು ಫಲ ಪುಷ್ಪ ಸ್ಮರಣಿಕೆ ಕೊಟ್ಟು ಸ್ವಾಗತಿಸಿದರು, ಸ್ವಾಮೀಜಿ ಯವರು ಮಂದಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಗುರುಗಳ ಸಂದೇಶವನ್ನು ಸಾರಿ ಅಲ್ಲದೇ ನಮ್ಮಲ್ಲಿರುವ ಅಹಂ ಅನ್ನುವ ಎಲ್ಲಾ ದುರ್ಗುಣಗಳನ್ನು ಈ ದಿನ ಗುರುಗಳ ಚರಣಕ್ಕೆ ಅರ್ಪಿಸಿ, ಎಲ್ಲರೂ ಗುರುಗಳ ತತ್ವದೊಂದಿಗೆ ಉತ್ತಮವಾಗಿ ಸಮಾಜದಲ್ಲಿ ಬಾಳಬೇಕೆಂದು ತಮ್ಮ ಆಶೀರ್ವಚನದಲ್ಲಿ ಹಿತನುಡಿಗಳನ್ನಾಡಿದರು.WhatsApp Image 2021-08-23 at 8.55.34 PM (1)ಮಾಸಿಕ ಸಭೆಯಲ್ಲಿ ಮಂದಿರದಲ್ಲಿ ತೆಗೆದುಕೊಂಡ ನಿರ್ಣಯದಂತೆ, ಬಿಲ್ಲವ ಸಂಘದ ಸದಸ್ಯರಿಂದ, ಬಿಲ್ಲವ ಮಹಿಳಾ ಮಂಡಳಿಯಿಂದ ಅಗೋಸ್ಟ್ ತಿಂಗಳಲ್ಲಿ ಸಂಗ್ರಹಿಸಿದ ಹಣವನ್ನು, ಗ್ರಾಮದಲ್ಲಿ ಬಡ ಹೆಣ್ಣುಮಕ್ಕಳ ಮದುವೆಯ ಮದರೆಂಗಿ ಶಾಸ್ತ್ರದಲ್ಲಿ ಗುರುಗಳ ತತ್ವದಂತೆ ಮದ್ಯವಿಲ್ಲದೆ ಸರಳವಾಗಿ ನಡೆದಂತಹ 4 ಹೆಣ್ಣು ಮಕ್ಕಳ ಪೋಷಕರಿಗೆ ಗುರುಗಳ ಪ್ರಸಾದ ರೂಪದಲ್ಲಿ ಆರ್ಥಿಕಸಹಾಯ ಧನ , 2 ಮಂದಿಗೆ ವೈದ್ಯಕೀಯ ನೆರವು ಮತ್ತು ಆರ್ಥಿಕವಾಗಿ ತೊಂದರೆಯಲ್ಲಿರುವ ಒಬ್ಬರಿಗೆ ಆರ್ಥಿಕ ಸಹಾಯವನ್ನು ವಿತರಿಸಲಾಯಿತು.

ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಮಂಡಳಿ ಸದಸ್ಯರು, ಪಾಂಚಜನ್ಯ ಬಾಲಗೋಕುಲದ ಮಕ್ಕಳು, ಊರಿನ ಗಣ್ಯರು ಮುಂತಾದವರು ಉಪಸ್ಥಿತರಿದ್ದರು. ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಮಾಜ ಸೇವಾ ಸಂಘ (ರಿ) ಮತ್ತು ಬಿಲ್ಲವ ಮಹಿಳಾ ಮಂಡಳಿ ಗುರುನಗರ ಕಂದಾವರ.

By Suddi9

Leave a Reply

Your email address will not be published. Required fields are marked *