ಕೈಕಂಬ : ಬಾರಿಂಜೆ ಹೊಯಿಗೆ ಅಂಗನವಾಡಿ ಕೇಂದ್ರದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಅಮ್ಮುಂಜೆ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಸುವರ್ಣ ನೆರವೇರಿಸಿದರು.
ಅಮ್ಮುಂಜೆ ಗ್ರಾಮ ಪಂಚಾಯತ್ ಸದಸ್ಯರಾದ ರೊನಾಲ್ಡ್ ಡಿಸೋಜ, ಕಾರ್ತಿಕ್ ಬಳ್ಳಾಲ್, ಧ್ವಜ ಸ್ತಂಭದ ಸಂಸ್ಥಾಪಕರಾದ ಬಿ.ಎಸ್ ಉಮೇಶ್ ಪೂಜಾರಿ, ಬಾಲ ವಿಕಾಸ ಸಮಿತಿ ಸದಸ್ಯ ಜನಾರ್ಧನ ಬಾರಿಂಜೆ, ಆಶಾ ಕಾರ್ಯಕರ್ತೆ ರೂಪ, ಹೊಂಬೆಳಕು ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ ಕಮರುನ್ನೀಸ , ಹಾಗೂ ಸ್ತ್ರೀ ಶಕ್ತಿ ಸದಸ್ಯರು, ಮಕ್ಕಳ ತಾಯಂದಿರು, ಬಾಲ ವಿಕಾಸ ಸಮಿತಿ ಸದಸ್ಯರು, ಊರಿನ ನಾಗರಿಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


