ಕೈಕಂಬ :ಅಮ್ಮುಂಜೆ ಗ್ರಾಮ ಪಂಚಾಯತ್ ನಲ್ಲಿ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ದ್ವಜಾರೋಹಣವನ್ನು ಅಮ್ಮುಂಜೆ ಗ್ರಾ.ಪಂ. ಅಧ್ಯಕ್ಷ ವಾಮನ್ ಆಚಾರ್ಯ ನೆರವೇರಿಸಿದರು.
ಈ ಅಮೃತ ಮಹೋತ್ಸವದ ಸಂಭ್ರಮದಲ್ಲಿ ಬಾಲಕೃಷ್ಣ ಭಟ್ ದಾರಿದೀಪವನ್ನು ಕೊಡುಗೆಯಾಗಿ ನೀಡಿದರು. ಗ್ರಾ.ಪಂ ನ ಪಿ.ಡಿ.ಓ ನಯನ, ಪಂಚಾಯತ್ ಸದಸ್ಯರಾದ ಪೊಳಲಿ ರಾಧಕೃಷ್ಣ ತಂತ್ರಿ, ರವೀಂದ್ರ ಸುವರ್ಣ, ಕಾರ್ತಿಕ್ ಬಲ್ಲಾಳ್, ಭಾಗೀರಥಿ, ರೊನಾಲ್ಡ್ ಡಿಸೋಜ ಮುಂತಾದವರು ಉಪಸ್ಥಿತರಿದ್ದರು.

