ಮುಂಬಯಿ : ಚೆಂಬೂರು ಕರ್ನಾಟಕ ಸಂಘದ ಸಂಚಾಲಕತ್ವದ ಚೆಂಬೂರು ಕರ್ನಾಟಕ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜ್ಗೆ ೨೦೨೦-೨೧ನೇ ಶೈಕ್ಷಣಿಕ ಸಾಲಿನ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಪ್ರಾಪ್ತಿಯಾಗಿದೆ. ಮಾಧ್ಯಮಿಕ ಮತ್ತು ಉಚ್ಚ ಮಾಧ್ಯಮಿಕ ಪರೀಕ್ಷೆಯಲ್ಲಿ ಚೆಂಬೂರು ಕರ್ನಾಟಕ ಹೈ ಸ್ಕೂಲ್ ಮತ್ತು ಜೂನಿಯರ್ ಕಾಲೇಜಿಗೆ ೧೦೦% ಫಲಿತಾಂಶ ಲಭಿಸಿದೆ.
ಇಂಗ್ಲೀಷ್ ಮಾಧ್ಯಮದಲ್ಲಿ ೨೬೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೧೫ ವಿದ್ಯಾರ್ಥಿಗಳು ಶ್ರೇಷ್ಠ (ಡಿಸ್ಟಿಂಗ್ಕ್ಶನ್),೧೨೦ ವಿದ್ಯಾರ್ಥಿಗಳು ಉನ್ನತ ಶ್ರೇಣಿ, ೧೨೮ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ೪ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇಂಗ್ಲೀಷ್ ಮಾಧ್ಯಮದ ದೇಸಾಯಿ ಸಾನಿಯಾ ರಘುನಾಥ್ ೯೫.೨೦% ಗಳಿಸಿ ಪ್ರಥಮ ಸ್ಥಾನ, ಸಾವಂತ್ ಪಾಂಡುರಂಗ ಸುನಿಲ್ ೯೪.೮೦% ಗಳಿಸಿ ದ್ವಿತೀಯ ಸ್ಥಾನ ಮತ್ತು ಘನವತ್ ಆರ್ಯನ್ ಜ್ಯೋತಿರಾಮ್ ೯೪.೬೦ % ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ೨೮ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೬ ವಿದ್ಯಾರ್ಥಿಗಳು ಉನ್ನತ ಶ್ರೇಣಿ, ೧೪ ವಗಳು ಪ್ರಥಮ ಶ್ರೇಣಿ ಮತ್ತು ೮ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪೂಜಾರಿ ಲಕ್ಷ್ಮಿ ತಾಯಪ್ಪ ೮೯.೮೦% ಪ್ರಥಮ ಸ್ಥಾನ, ಪೋಲ್ ಲಕ್ಷ್ಮಿ ಅಶೋಕ್ ೮೪% ದ್ವಿತೀಯ ಸ್ಥಾನ ಮತ್ತು ಗೌಡ ಅಮೃತ ೮೩.೨೦% ತೃತೀಯ ಸ್ಥಾನ ಪಡೆದಿದ್ದಾರೆ.
ಸಂಘದ ಸಂಚಾಲಕತ್ವದ ಜೂನಿಯರ್ ಕಾಲೇಜ್ ವಿಜ್ಞಾನ ವಿಭಾಗದಲ್ಲಿ ಕೋಟಾಲ ಕತ್ ಜೋಸೆಲ್ ಸರಾಹ ೮೯.೮೩% ಪ್ರಥಮ ಸ್ಥಾನ, ಮಹಾಲಕ್ಷ್ಮಿ ವನಮಾಮ್ ಲೈ ೮೬% ದ್ವಿತೀಯ ಸ್ಥಾನ ಮತ್ತು ಸಾರಂಗ ಅನಮ್ ಶಕೀಲ್ ಹಾಗೂ ಶೇಖ್ನೂರ್ ಸಭಾ ಸಲೀಂ ೮೪.೫೦% ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಕುರಿಸಿಂಗಲ್ ಜಿಸ್ ಮೋಲ್ ಜಾರ್ಜ್ ೮೮.೬೭% ಶೇಕಡಾವಾರು ಗಳಿಸಿ ಪ್ರಥಮ ಸ್ಥಾನ, ಮೊಗವೀರ ಲಕ್ಷ್ಮಿ ಕೃಷ್ಣ ೮೭% ದ್ವಿತೀಯ ಸ್ಥಾನ ಮತ್ತು ಮೊಮಿನ್ ಶಾಹಿನ್ ೮೫.೧೫% ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ.
ಎಸ್ಎಸ್ಸಿ ಪರೀಕ್ಷೆಯಲ್ಲಿ ಈ ಕೆಳಗಿನ ವಿದ್ಯಾರ್ಥಿಗಳು ಅತೀ ಉನ್ನತ ಶ್ರೇಣಿಯನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿದ್ದು ಮುಕ್ ರಿ ತನ್ ಜೇಲಾ ೯೩%, ಮದನಿ ಇರ್ಷಾದ್ ಸೈಯದ್ ೯೨.೮೦%, ಶೆಟ್ಟಿ ಹರ್ಷಿತಾ ಶಂಕರ್ ೯೨.೮೦%, ಗುಪ್ತಾ ಸಂಧ್ಯಾ ೯೨.೪೦%, ಆದರ್ಶ ದುಬೆ ೯೨.೨೦%, ಬೋದಲ್ ಪ್ರೇಮ್ ೯೨.೨೦%, ಬಂಗಾರೆ ತನಿಷಾ ೯೧.೪೦%, ಕಸ್ತೂರಿ ದಶರಥ್ ೯೧.೨೦%, ಗೌರಿ ಸೂರ್ಯವಂಶಿ ೯೦.೮೦%, ರಿಯಾ ದೇಶ್ ಮುಖ್ ೯೦.೬೦%, ಚೌಬೆ ರಿಯಾ ರಮೇಶ್ ೯೦.೪೦%, ಜಯೇಶ್ ಮಲ್ ಹಾರಿ ೯೦.೨೦% ಗಳಿಸಿದ್ದಾರೆ.
ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಹಾಗೂ ಕೋವಿಡ್ ಸಂಕಷ್ಟ ಕಾಲದಲ್ಲೂ ಸರ್ವ ರೀತಿಯಲ್ಲಿ ಸಹಕರಿಸಿದ ಮುಖ್ಯ ಅಧ್ಯಾಪಕಿ, ಶಿಕ್ಷಕ ವೃಂದ ಮತ್ತು ಶಿಕ್ಷಕೇತರ ಸಿಬ್ಬಂದಿಗಳನ್ನು ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷರು ಹಾಗೂ ಪದಾದಿಕಾರಿಗಳು ಅಭಿನಂದಿಸಿದ್ದಾರೆ.
