ಪೊಳಲಿ :ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರಿ ತಾಯಿಯ ದರ್ಶನ ಮಾಡಲು ಇಂಧನ ಸಚಿವ ಸುನೀಲ್ ಕುಮಾರ್ ದಂಪತಿ ಸಮೇತ ಸೋಮವಾರ ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಳದ ಅರ್ಚಕ ಪರಮೇಶ್ವರ ಭಟ್ ಪ್ರಸಾದ ನೀಡಿದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸಚಿವರನ್ನು ಶಾಲು ಹಾಕಿ ದೇವರ ಸ್ಮರಣಿಕೆ ನೀಡಿ ಗೌರವಿಸಿದರು.
ರಾಜರಾಜೇಶ್ವರಿ ತಾಯಿಯ ಭಕ್ತನಾದ ತಾನು ಮೊದಲಿನಿಂದಲು ಶ್ರೀ ಕ್ಷೇತ್ರಕ್ಕೆ ಬಂದು ದೇವರ ಆಶೀರ್ವಾದ ಪಡೆದಿದ್ದೇನೆ. ತಾನು ಬೇಡಿದ ವರವನ್ನು ದೇವಿ ಅನುಗ್ರಹಿಸಿದ್ದಾಳೆ ಎಲ್ಲರ ಒಳಿತಿಗಾಗಿ ನಾನು ಕೆಲಸ ಮಾಡುತ್ತೇನೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.
ಇಂಧನ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೊಸತನವನ್ನು ತರುವ ಮೂಲಕ ರಾಜ್ಯದ ಜನತೆಗೆ ಚ್ಯುತಿ ಬರದಂತೆ ಕರ‍್ಯನರ‍್ವಹಿಸುತ್ತೇನೆ ಎಂದರು. ತಾನು ಆಗಷ್ಟ್ ೧೨ರಂದು ಶುಕ್ರವಾರ ತಾನು ಸಚಿವನಾಗಿ ಅಧಿಕಾರ ವಹಿಸಿಕೊಳ್ಳುವುದಾಗಿ ಮಾಧ್ಯಮದವರೊಂದಿಗೆ ಹೇಳಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು , ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ದೇವಳದ ಕಾರ್ಯನಿರ್ವಣಾಧಿಕಾರಿ ಪಿ.ಜಯಮ್ಮ,ಆಡಳಿತ ಮೊಕ್ತೇಸರ ಡಾ! ಮಂಜಯ್ಯ ಶೆಟ್ಟಿ ಅಮ್ಮುಂಜೆ ಗುತ್ತು, ಯು.ತಾರನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್, ಪಿ.ಮಾದವ ಭಟ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ, ಬೂಡ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ವೆಂಕಟೇಶ ನಾವುಡ, ಯಶವಂತ ಫೊಳಲಿ, ನಂದರಾಮ ರೈ, ಪುರುಷೋತ್ತಮ ಶೆಟ್ಟಿ, ಲೋಕೇಶ್ ಭರಣಿ ಪುಷ್ಪರಾಜ್ ಚೌಟ,ಪವನ್ ಕುಮಾರ್ , ಸಚಿನ್ ಅಡಪ, ಸುಕೇಶ್ ಚೌಟ, ಚಂದ್ರಶೇಖರ ಶೆಟ್ಟಿ, ರೋಶನ್ ಗರೋಡಿ ಮತ್ತಿತರರು ಉಪಸ್ಥಿತರಿದ್ದರು.

