ಪೊಳಲಿ : ಸರಕಾರಿ ಪ್ರೌಢಶಾಲೆ ಪೊಳಲಿ ಇಂದು ವಿದ್ಯಾರ್ಥಿಗಳಲ್ಲಿ ಪ್ರಾಚ್ಯ ವಸ್ತುಗಳ ಪ್ರಾಮುಖ್ಯತೆಯನ್ನು ತಿಳಿಸುವ ಕಾರ್ಯಗಾರ ನಡೆಯಿತು.. ಇಂದಿನ ಸಭೆಗೆ ಮುಖ್ಯ ಅತಿಥಿಗಳಾಗಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ ಬಿಸಿ ರೋಡ್ ಇಲ್ಲಿಯ ಸಂಚಾಲಕರಾದ ಡಾಕ್ಟರ್ ತುಕರಾಮ್ ಪೂಜಾರಿ ಆಗಮಿಸಿದ್ದರು. ಪೊಳಲಿಯಂತಹ ಈ ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಪ್ರಾಚೀನ ವಸ್ತುಗಳು ದೊರೆಯುತ್ತದೆ. ಅಂತಹ ವಸ್ತುಗಳನ್ನು ನಾವು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಜವಾಬ್ದಾರಿ ನಮಗಿದೆ ಎಂದು ತಿಳಿಸಿದರು.
ಪ್ರಾಚೀನ ಕಾಲದಲ್ಲಿ ಉಪಯೋಗಿಸುತ್ತಿದ್ದ ವಸ್ತುಗಳ ಪ್ರಾತ್ಯಕ್ಷಿಕೆಯ ನ್ನು ವಿದ್ಯಾರ್ಥಿಗಳಿಗೆ ತೋ ರಿಸಿಕೊಟ್ಟರು. ಮುಂದಿನ ಪೀಳಗೆಯವರಿಗಾಗಿ ವನ್ಯ ಜೀವಿಗಳ ಸಂರಕ್ಷಣೆ ಯ ಬಗ್ಗೆಯೂ ಮಾಹಿತಿ ನೀಡಿದರು. ಸಂಸ್ಥೆಯ ಮುಖ್ಯ ಶಿಕ್ಷರಾದ ಶ್ರೀ ರಾಧಾಕೃಷ್ಣ ಭಟ್ ಸ್ವಾಗತಿಸಿದರು. ರಂಜಿತ ರಾಜೀವ ಟಿ ಧನ್ಯವಾದಗಳನ್ನು ಸಲ್ಲಿಸಿದರು.
