ಮುಂಬಯಿ: ಬಂಟ್ವಾಳ ತಾಲೂಕು ಇಲ್ಲಿನ ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ವತಿಯಿಂದ ಜು.೨೮ ರಂದು ಬುಧವಾರ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಈ ಶುಭಾವಸರದಲ್ಲಿ ಸ್ಥಾನೀಯ ಹಿರಿಯ ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ಇವರನ್ನು ರೋಟರಿ ಕ್ಲಬ್ ಪದಾಧಿಕಾರಿಗಳು, ಅತಿಥಿಗಳು ಸನ್ಮಾನಿಸಿ ಗೌರವಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಮೈಕೆಲ್ ಡಿಕೋಸ್ತ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ ಶೆಟ್ಟಿ, ಶಿಕ್ಷಕ ರಾಜೇಶ ನೆಲ್ಯಾಡಿ ಶುಭ ಹಾರೈಸಿದರು.
ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ ಮತ್ತಿತರ ಗಣ್ಯರುಣ್ಯೌಪಸ್ಥಿತರಿದ್ದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ರಾಯಿ ಸ್ವಾಗತಿಸಿದರು
