ಮುಂಬಯಿ : ಭಾರತೀಯ ಸಾಧುಸಂತರ ಸಂಸ್ಕೃತಿಗಳಲ್ಲಿ ವಿಶೇಷ ವ್ರತಗಳಲ್ಲಿ ಚಾತುರ್ಮಾಸ್ಯ ಅಗ್ರಮಾನ್ಯವಾದದು. ಆಷಾಢಮಾಸದ ಹುಣ್ಣಿಮೆಯಿಂದ ಕಾರ್ತಿಕ ಮಾಸದ ಹುಣ್ಣಿಮೆ ತನಕ ನಡೆಸಲ್ಪಡುವ ಈ ವ್ರತ ಪುಣ್ಯಾಧಿ ಫಲದ ಧ್ಯೋತಕವಾಗಿದೆ ಎಂದು ಜೈನ ಕಾಶಿ ಮೂಡುಬಿದಿರೆ ಇದರ ಜಗದ್ಗುರು ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ತಿಳಿಸಿದರು.Jaina Swamiji Chaturmasya 1ಜೈನ ಕಾಶಿ ಮೂಡುಬಿದಿರೆ ಇಲ್ಲಿನ ಮಠದಲ್ಲಿ  ಜು. ೨೪ ಶನಿವಾರ ಆರಂಭಿಸಲಾದ ೨೦೨೧ನೇ ವಾರ್ಷಿಕ ಚಾತುರ್ಮಾಸ ಕಾರ್ಯಕ್ರಮದಲ್ಲಿ ಪ್ರಸ್ತಾವನೆಗೈದು ಮಳೆಗಾಲದಲ್ಲಿ ಜೀವಜಂತುಗಳು ಅತೀ ಹೆಚ್ಚು ಉತ್ಪತ್ತಿ ಯಾಗುವುದು ಮಹಾ ವ್ರತಧಾರಕ ಮುನಿಗಳು ತಪ್ಪಿಯೋ ಜೀವಹಿಂಸೆ ಆಗದಂತೆ ವ್ರತ ನಿಯಮ ಅನುಷ್ಠಾನಗಳಿಗೆ ಅಹಿಂಸೆ ಪಾಲನೆಗಾಗಿ ಚಾತುರ್ಮಸ ನಾಲ್ಕು ತಿಂಗಳು ಪೂರ್ಣ ರೂಪದಲ್ಲಿ ಆಚರಣೆ ಮಾಡುವುದು ರೂಢಿಯಾಗಿದೆ. ಭಟ್ಟಾರಕರು ದಶಲಕ್ಷಣ ಅಂದರೆ ಎರಡು ತಿಂಗಳು ಪೂರ್ಣ ಆಚರಣೆ ಮಾಡಿ ಜಪತಪ ಸ್ವಾಧ್ಯಯ ಪ್ರವಚನಗಳಿಗೆ ಸಮಯವನ್ನು ಸಮಾಜ ಬಾಂಧವರಿಗೆ ಧರ್ಮ ಜಾಗೃತಿ ಉಂಟು ಮಾಡಲು ಆತ್ಮಕಲ್ಯಾಣ, ಪರಕಲ್ಯಾಣಕ್ಕೆ ಚಾತುರ್ಮಸದಿಂದ ಸಾಧ್ಯ. ಈ ವರೆಗೆ ಇದು ಈ ಶತಮಾನದ  ಮುನಿಗಳ ೩ನೇ ಚಾತುರ್ಮಸವಾಗಿದೆ. ಈ ಹಿಂದೆ ೨೦೦೫ರಲ್ಲಿ ಆಚಾರ್ಯ ವಿರಾಗ ಸಾಗರ ೨೦೧೭ರಲ್ಲಿ ಗಿರಿನಾರ್ ಸಾಗರರ. ಇದೀಗ ೧೦೮ ದಿವ್ಯ ಸಾಗರರ ಚಾತುರ್ಮಾಸ್ಯ ನಡೆಯುತ್ತಿದೆ. ಇಂತಹ ಧಾರ್ಮಿಕ ಪುಣ್ಯಾಧಿ ಕಾರ್ಯಕ್ರಮಗಳು ನಾಡಿನ ಎಲ್ಲರಿಗೂ ಧರ್ಮ ಲಾಭವಾಗಲಿ ಎಂದು ಮಂಗಳ ಶುಭ ನುಡಿಯನ್ನಾಡಿದರು.Jaina Swamiji Chaturmasya 2ಚಾರುಕೀರ್ತಿ ಪಂಡಿತಾಚಾರ್ಯರು ಚಾತುರ್ಮಾಸ ಕಲಶಸ್ಥಾಪನೆಗೈದು ಮಂಗಲ ಶುಭಹಾರೈಕೆ ಮಾಡಿ ಪ್ರತಿ ಕ್ರಮಣ ಆಚಾರ್ಯ ಭಕ್ತಿ ಶಾಂತಿ ಭಕ್ತಿ, ಸಿದ್ದ ಭಕ್ತಿ, ದಿಶಾ ವಂದನಾ ದಿಗ್ ಬಂಧನ ನಿಯಮಗಳನ್ನು ಮೊದಲಾದ ಆಗಮೋಕ್ತ ಕ್ರಿಯಾ ಕಲಾಪ ನೆರವೇರಿಸಿದರು. ನಂತರ ಅರಿಹಂತರ ಪೂಜೆ ಸಿದ್ದರ ಅರ್ಗ್ಯ, ಮೂಲ ಸ್ವಾಮಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಪೂಜೆ,  ಗಣಧರ ಪೂಜೆ ನೆರವೇರಿಸಿದರು. ಪಟ್ಣಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್ ಮೊಕ್ತೇಸರರು, ಶಂಭವ್ ಕುಮಾರ್ ಶಾಸ್ತ್ರದಾನ ಮಾಡಿದರು.Jaina Swamiji Chaturmasya 3ಮಾಜಿ ಸಚಿವ, ಚಾತುರ್ಮಾಸ್ಯಸಮಿತಿ ಕಾರ್ಯಧ್ಯಕ್ಷ ಕೆ.ಅಭಯಚಂದ್ರ ಜೈನ್ ಮಾತನಾಡಿ ಮುನಿಗಳ, ಸ್ವಾಮೀಜಿಯವರ ಚಾತುರ್ಮಾಸ ಸಂಧರ್ಭ ಧರ್ಮಲಾಭ ಪ್ರತೀಯೊಬ್ಬರು ಪಡೆಯುವಂತಾಗಲಿ.  ಮೂಡುಬಿದಿರೆ ಜೈನ ಮಠದಲ್ಲಿ ನಮಗೆಲ್ಲರಿಗೂ ಸ್ವಾಮಿಜಿ ನೀಡಿದ ಜವಾಬ್ದಾರಿ ಉತ್ತಮವಾಗಿ ನಿರ್ವಹಿಸೋಣ ಎಲ್ಲರ ಸಹಕಾರ ಇರಲಿ ಎಂದರು ಹಾಗೂ ಮುನಿ ೧೦೮ ದಿವ್ಯ ಸಾಗರ ಮಹಾರಾಜರ ಪಾದಪೂಜೆ ನೆರವೇರಿಸಿದರು. ಅರ್ಘ್ಯ ಪಟ್ಟದ ಪುರೋಹಿತರು ಮೂಡುಬಿದಿರೆ ಶ್ರೀಗಳ ಪಾದಪೂಜೆ ನೆರವೇರಿಸಿದರು.Jaina Swamiji Chaturmasya 4ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವತಿಯಿಂದ ಆಗಮಿಸಿದ್ದ ಪ್ರತಿನಿಧಿಗಳಿಗೆ, ಉತ್ತಮ ಭಕ್ತಿಗೀತೆ ಹಾಡಿದ ಸಂಗೀತಗಾರ್ತಿ ನಮಿತಾ ಜೈನ್ ಬೆಳಗಾಂನ ಇವರಿಗೆ  ಮತ್ತು ಹಿರಿಯ ಸಾಹಿತಿ ಕಲಾವಿದ ರವಿರಾಜ ಜೈನ್, ಕೀ ಬೋರ್ಡ್, ತಬಲಾದೊಂದಿಗೆ ಸಹಕರಿದವರಿಗೆ ಕಲಾವಿದರಿಗೆ ಶ್ರೀಮಠದ ಪರವಾಗಿ ಚಾರುಕೀರ್ತಿ ಶ್ರೀಗಳು ಅಭಿವಂದಿಸಿ ಆಶೀರ್ವದಿಸಿದರು.Jaina Swamiji Chaturmasya 5ಶೈಲೇ೦ದ್ರ ಜೈನ್, ಯುವರಾಜ್ ಜೈನ್, ಪ್ರವೀಣ್‌ಚಂದ್ರ ಎಸ್., ಪಿ.ವಿದ್ಯಾ ಕುಮಾರ್, ಧನಕೀರ್ತಿ ಬಲಿಪ, ಸಂಜಯಂಥ ಕುಮಾರ್, ಡಾ| ಕೆ.ಪ್ರಭಚಂದ್ರ, ಬಾಹುಬಲಿ ಪ್ರಸಾದ್, ಶ್ರೀಪತಿ ಭಟ್, ಅಡ್ವಕೇಟ್ ಶ್ವೇತಾ ಜೈನ್, ಎಂಸಿಸಿ ಬ್ಯಾಂಕ್‌ನ ಎಸ್. ಚಂದ್ರಶೇಖರ್, ಶ್ರವಕಿಯರಾದ ವೃ೦ದ, ವೀಣಾ, ಮಂಜುಳಾ, ವಿನಂತಿ ಸರೋಜಮ್ಮ, ಶಕುಂತಲಾ, ಮೋಹಿನಿ ವಿಮಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.Jaina Swamiji Chaturmasya 6

By suddi9

Leave a Reply

Your email address will not be published. Required fields are marked *