ಮುಂಬಯಿ : ಗಲ್ಫ್ ರಾಷ್ಟ್ರ ಅಬುಧಾಬಿ ಇಲ್ಲಿನ ಯುವ ಸಂಘಟಕ ಅಬ್ದುಲ್ಲ ಮಾದುಮೂಲೆ ಇವರು ಎಸ್‌ಡಿಎಂ ಕಾಲೇಜ್ ಉಜಿರೆ ಇದರ ಜಾಗತಿಕ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.Abdulla Abhudhabhi Ujire (A)ಎಸ್‌ಡಿಎಂ ಕಾಲೇಜ್ ಉಜಿರೆ ಇದರ ಜಾಗತಿಕ ಹಳೆ ವಿದ್ಯಾರ್ಥಿ ಸಂಘದ  ಪದಾಧಿಕಾರಿಗಳ ವಿವರ ಹೀಗಿದ್ದು, ಡಾ| ಡಿ.ವಿರೇಂದ್ರ ಹೆಗ್ಗಡೆ (ರಕ್ಷಾಧಿಕಾರಿ), ಡಾ| ಬಿ.ಯಶೋವರ್ಮ ಉಜಿರೆ (ಗೌರವಾಧ್ಯಕ್ಷ), ಅಬ್ದುಲ್ಲ ಮಾದುಮೂಲೆ ಅಬುಧಾಬಿ (ಅಧ್ಯಕ್ಷರು), ದಿನೇಶ್ ಹೆಗ್ಡೆ ಯುಎಸ್‌ಎ (ಉಪಾಧ್ಯಕ್ಷರು), ರಾಜೇಶ್ ಬೆಂಗ್ರೋಡಿ ದುಬಾಯಿ (ಪ್ರಧಾನ ಕಾರ್ಯದರ್ಶಿ), ರೋಶನ್ ಪಿಂಟೋ ದುಬಾಯಿ (ಕೋಶಾಧಿಕಾರಿ), ಕಿರಣ್ ಕುಮಾರ್ ಮಲೇಷಿಯಾ (ಕಾರ್ಯದರ್ಶಿ), ಶರತ್ ಪಲಿಗಿ ಜರ್ಮನಿ (ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿ), ಅಬ್ದುಲ್ ರಸಾಕ್ ಉಜಿರೆ-ದುಬಾಯಿ (ಮಾಧ್ಯಮ ಸಂಪರ್ಕ ಸಂಚಾಲಕರು), ಮಹಮ್ಮದ್ ಕುತುಬುದ್ದೀನ್ ದುಬಾಯಿ, ಲಕ್ಷ್ಮೀಕಾಂತ್ ಓಮನ್, ಶ್ರುತಿ ಆಸ್ಟ್ರೇಲಿಯ (ಕಾರ್ಯಕಾರಿ ಸದಸ್ಯರು) ಆಗಿರುವರು.Dr. B.Yashovarma (A)

ಶೈಕ್ಷಣಿಕ ಸೇವೆಯ ಮೂಲಕ ಇಂದು ವಿಶ್ವದೆಲ್ಲೆಡೆಯೂ ತನ್ನ ಹಳೆ ವಿದ್ಯಾರ್ಥಿಗಳ ಕೊಡುಗೆಯನ್ನು ನೀಡುತ್ತಿರುವ ಉಜಿರೆಯ ಪ್ರತಿಷ್ಠಿತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಜಾಗತಿಕ ಹಳೆಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ ತಂದಿದ್ದು ಈ ಮೂಲಕ ತನ್ನ ಕಾರ್ಯನಿರ್ವಾಹಣೆಯನ್ನು ವಿಶ್ವದಾದ್ಯಂತ ವಿವಿದೆಡೆಗೆ ಪಸರಿಸಿದೆ. ಅಧ್ಯಕ್ಷರಾಗಿ ಅಬುಧಾಬಿ ಇಲ್ಲಿನ ಝಯೆದ್ ಫೌಂಡೇಶನ್‌ನ ಹಿರಿಯ ಆರ್ಥಿಕ ನಿಯಂತ್ರಕ ಆಗಿ ಶ್ರಮಿಸುತ್ತಿರುವ ಯುವ ಸಂಘಟಕ, ಕೊಡುಗೈದಾನಿ ಅಬ್ದುಲ್ಲಾ ಮಾದುಮೂಲೆ ಅವರನ್ನು ಆರಿಸಲಾಗಿದೆ.Dr. Veerendra Heggadeಡಾ| ಸತೀಶ್ಚಂದ್ರ (ಪ್ರಾಂಶುಪಾಲರು, ಎಸ್‌ಡಿಎಂಸಿ), ಡಾ| ಉದಯಚಂದ್ರ (ಡೀನ್, ವಾಣಿಜ್ಯ ವಿಭಾಗ ಎಸ್‌ಡಿಎಂಸಿ), ಡಾ| ಜಯಕುಮಾರ್ ಶೆಟ್ಟಿ (ಡೀನ್,ಕಲಾ ವಿಭಾಗ ಎಸ್‌ಡಿಎಂಸಿ), ಶಶಿಶೇಖರ ಎನ್.ಕಕಾತ್ಕ್ (ಡೀನ್, ವಿಜ್ಞಾನ ವಿಭಾಗ ಎಸ್‌ಡಿಎಂಸಿ) ಸಲಹೆಗಾರರು ಆಗಿರುತ್ತಾರೆ.

ಕಾಲೇಜ್‌ನ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಔದ್ಯೋಗಿಕ ಮಾಹಿತಿ, ತಂತ್ರಜ್ಞಾನ ಸ್ವ ಕೌಶಲ್ಯ ಅಭಿವೃದ್ಧಿ, ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ವಿವಿದೆಡೆಯಲ್ಲಿರುವ ಸಾಧಕರಾದ ಹಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ಏರ್ಪಡಿಸಿ ಜೀವನ ಮೌಲ್ಯ ನಿರ್ಣಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಸೋಶಿಯೇಶನ್ ತೀರ್ಮಾನಿಸಿದೆ ಎಂದು ವಿಜಯಕುಮಾರ್ ಶೆಟ್ಟಿ ಮಜಿಬೈಲ್  ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *