Published On: Wed, Jul 21st, 2021

ಬಡವರ ಕಣ್ಣೋರೆಸುವ ಕಾರ್ಯವೇ ನಮ್ಮ  ಮುಖ್ಯ  ಧ್ಯೇಯ : ಹರೀಶ್ ಜಿ. ಅಮೀನ್.

ಮುಂಬೈ : ಬಿಲ್ಲವರ  ಎಸೋಸಿಯೇಶನ್ ನ ನೂತನ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ರವರ ನೇತೃತ್ವದಲ್ಲಿ ಸಮಾಜ  ದಾನಿಗಳ  ಸಂಪೂರ್ಣ  ಸಹಕಾರ ದಿ0ದ ಎಸೋಸಿಯೇಶಿನಿನ 22 ಸ್ಥಳೀಯ ಕಚೇರಿಯಲ್ಲಿ ಸಮಾಜದ ಅಸಹಾಯಕ ಕುಟುಂಬದವರಿಗೆ ಅಹಾರ ಕಿಟ್ ನೀಡುವ ಕ್ರಮವನ್ನು ಹಮ್ಮಿಕೊಂಡಿದ್ದು ಜುಲೈ 18ರಂದು ಬಿಲ್ಲವರ  ಎಸೋಸಿಯೇಶನ್ ಕಾ0ದಿವಲಿಯ ಸ್ಥಳೀಯ ಕಚೇರಿಯಲ್ಲಿ ಸಮಾಜ ಬಾ0ಧವರಿಗೆ ಆಹಾರ  ಕಿಟ್ ವಿತರಣೆ ಕಾರ್ಯಕ್ರಮವು  ಅಧ್ಯಕ್ಷರಾದ  ಹರೀಶ್ ಜಿ ಅಮೀನ್ ರವರ  ಗಣ ಅಧ್ಯಕ್ಷತೆಯಲ್ಲಿ ಜರಗಿತು.IMG-20210720-WA0013ಸಮಾಜದ ಅರ್ಹ ಕುಟುಂಬಸ್ತರಿಗೆ  ಆಹಾರ  ಕಿಟ್ ವಿವರಿಸುತ್ತಾ ಮಾತನಾಡಿದ  ಅಧ್ಯಕ್ಷರಾದ  ಹರೀಶ್ ಜಿ ಅಮೀನ್ ರವರು ಬಿಲ್ಲವರ  ಎಸೋಸಿಯೇಶನ್ ಕೊರೋನ  ಮಹಾಮಾರಿಯಿ0ದ ತೊ0ಧರೆಗೀಡಾದ ಕುಟುಂಬದವರಿಗೆ ಆರಂಭದಿಂದಲೂ ವಿವಿಧ ರೂಪದಲ್ಲಿ ಸಹಕರಿಸಿದೆ .ಹಾಗೂ ಇಷ್ಟರ ತನಕ 900 ಜನರಿಗೆ  ಆಹಾರ ಕಿಟ್ ನೀಡಿದ್ದೇವೆ  .ಈ ಕಾರ್ಯಕ್ರಮಗಳಿಗೆ  ಎಲ್ಲಾ ದಾನಿಗಳ  ಅಪಾರ  ಸಹಕಾರ  ದೊರಕಿದೆ. ಹಾಗೂ ಎಸೋಸಿಯೇಶನಿನ 89 ವರ್ಷಗಳ ಇತಿಹಾಸದಲ್ಲಿ ಜನಪರ ಸೇವೆಯಲ್ಲಿ ಲಕ್ಷಾಂತರ  ಜನರಿಗೆ ದಾರಿ ದೀಪವಾಗಿದೆ.IMG-20210720-WA0014ಸಂದರ್ಭ ವದಗಿದಾಗ ಎಸೋಸಿಯೇಶನಿನ  ಪಧಾಧಿಕಾರಿಯವರು ಜನರ ಸಮಸ್ಯೆಗೆ ಕಡಿತಕ್ಕಾಗಿ ಕಾರ್ಯವೆಸಗಿದ್ದಾರೆ. ದಿವಂಗತ  ಜಯ ಸಿ ಸುವರ್ಣ ರವರು ನಮಗೆ ಸ್ಫೂರ್ತಿ ದಾಯಕರಾಗಿದ್ದು ಅವರ ಮಾರ್ಗದರ್ಶನ  ನಮಗೆ ಸಮಾಜ  ಸೇವೆಗೆ ಉತ್ತೇಜನ  ನೀಡಿದೆ .ಬಡವರ ಕಣ್ಣೋರೆಸುವ ಕಾರ್ಯವೇ ನಮ್ಮ  ಮುಖ್ಯ  ಧ್ಯೇಯ .ಇ0ದು ನೀಡುವ ಆಹಾರ  ಧಾನ್ಯ  ನಿಮಗೆ  ಭ್ರಮ್ಮ ಶ್ರೀ ನಾರಾಯಣ  ಗುರುದೇವರ  ಪ್ರಸಾದ  ಎ0ದು ಸ್ವೀಕರಿಸಬೇಕು. ನಿಮ್ಮ  ಸಹಕಾರ  ನಮಗೆ ಸದಾ ಸಿಗುತ್ತಿರಲಿ ನನ್ನ ಕೋರಿಕೆ. ಇನ್ನು ಮುಂದಕ್ಕೆ ಕೂಡಾ ನಮ್ಮಿಂದ  ಸಾಧ್ಯವಾದಷ್ಟು ಸಹಕಾರ  ನೀಡುವೆವು. ಅದಲ್ಲದೆ ಇದೇ ಬರುವ ಜುಲೈ 24 ಶನಿವಾರ  ದಿವಸ   ಬಿಲ್ಲವ ಭವನದಲ್ಲಿ ರಕ್ತದಾನ  ಶಿಬಿರ  ಜರಗಲಿದೆ  ಇದಕ್ಕೆ ತಾವೆಲ್ಲರೂ ಸಹಕಾರ ನೀಡಬೇಕೆಂದು ವಿನಂತಿಸಿ ಕೊಂಡರು.IMG-20210720-WA0015
ಅತಿಥಿಯಾಗಿ ಪಾಲ್ಗೊಂಡಿದ್ದ ಬಿಲ್ಲವರ  ಎಸೋಸಿಯೇಶನಿನ  ಕಾ0ದಿವಲಿಯ  ಸ್ಥಳೀಯ  ಕಚೇರಿಯ  ಪ್ರತಿನಿಧಿಯಾದ ಹರೀಶ್ ಪೂಜಾರಿಯವರು ಮಾತನಾಡುತ್ತಾ ದಿವಂಗತ  ಜಯ ಸಿ ಸುವರ್ಣ ರವರ ಮಾರ್ಗದರ್ಶನದಂತೆ ಮುನ್ನಡೆಯುವ  ಯುವ  ಅಧ್ಯಕ್ಷರು ನಮ್ಮ  ಸಮಾಜಕ್ಕೆ ದೊರಕಿದ್ದಾರೆ .ಅವರಿಗೆ ನಾವು ಸಂಪೂರ್ಣ  ಸಹಕಾರ ನೀಡಬೇಕೆಂದು  ಹೇಳಿದರು.IMG-20210720-WA0016
ಸ್ಥಳೀಯ ಕಚೇರಿಯ ಕಾರ್ಯಧ್ಯಕ್ಸರಾದ ಯೋಗೇಶ್ ಕೆ ಹೆಜ್ಮಾಡಿಯವರು ಮಾತನಾಡುತ್ತಾ ನನಗೆ ಇವತ್ತಿನ ಕಾರ್ಯಕ್ರಮ  ನೋಡಿ ಬಹಳ  ಸಂತೋಷ ವಾಗಿದೆ ಕಾರಣ ನಮ್ಮ ಸ್ಥಳೀಯ ಕಚೇರಿಯ  ರೇಶನ್ ಕಿಟ್ ಬ್ಯಾಗ್  ವಿತರಣೆಯ ಕಾರ್ಯಕ್ರಮಕ್ಕೆ  ನೂತನ ಅಧ್ಯಕ್ಷರಾದ  ಹರೀಶ್ ಜಿ ಅಮೀನ್  ನಮ್ಮ  ಮಾರ್ಗದರ್ಶಕರು  ಸ್ವರ್ಗೀಯ  ಜಯ ಸಿ.ಸುವರ್ಣ ರವರ  ಸೊಸೆ  ನಿಶಿತಾ ಎಸ್ ಸುವರ್ಣ ಹಾಗೂ ಸುಪುತ್ರ  ಸೂರ್ಯಕಾ0ತ್  ಜಯ .ಸುವರ್ಣ ರವರನ್ನು ಸನ್ಮಾನಿಸುವ ಭಾಗ್ಯ  ಕಾ0ದಿವಲಿ ಸ್ಥಳೀಯ ಕಚೇರಿಯ  ಸಿಕ್ಕಿತಲ್ಲಾ ಎ0ದು ಸಂತೋಷ. ಇದು ಎಲ್ಲಾ ಗುರುದೇವರ  ಅನುಗ್ರಹ ಅದಲ್ಲದೆ ನೂತನ ಅಧ್ಯಕ್ಷರಾದ  ಹರೀಶ್ ಜಿ ಅಮೀನ್ ರವರು ಎಲ್ಲರನ್ನು ಒಗ್ಗೂಡಿಕೊ0ಡು ದಾನಿಗಳ  ಸಂಪೂರ್ಣ ಸಹಕಾರ, ಸ್ವರ್ಗೀಯ  ಜಯ ಸಿ ಸುವರ್ಣ ರವರ ಮಾರ್ಗದರ್ಶನದಂತೆ ಮುನ್ನಡೆಯುವ ನವ ತರುಣ  ಹರೀಶ್ ಜಿ ಅಮೀನ್ ರವರು ದೊರಕಿದ್ದಾರೆ ಇದು ಸಮಾಜದ ಭಾಗ್ಯ. ಅವರು ಗುರುದೇವರ  ಅನುಗ್ರಹದಿ0ದ ಉತ್ತಮ  ಸಮಾಜಪರ ಸೇವೆ ಮಾಡುವುದಕ್ಕೆ ಸಮಾಜ  ಬಾ0ಧವರ ಸರ್ಕಾರವು ದೊರಕುತ್ತಿದೆ ಅವರಿಗೆ ನಮ್ಮ  ಕಾ0ದಿವಲಿಯ ಸ್ಥಳೀಯ  ಕಚೇರಿಯ  ಸರ್ವ  ಸದಸ್ಯರೆಲ್ಲರ ಸಂಪೂರ್ಣ  ಸಹಕಾರ  ಇದೆ ಎಂದು  ಅಭಿನಂದಿಸಿದರು. IMG-20210720-WA0017
ಕಾರ್ಯಕ್ರಮದ  ಅರಂಬದಲ್ಲಿ ಕಾರ್ಯಾಧ್ಯಕ್ಷರು ಎಲ್ಲರನ್ನೂ ಸ್ವಾಗತಿಸಿ ತದನಂತರ  ಗುರು ಪ್ರಾರ್ಥನೆ  ಆರತಿ ನೆರವೇರಿತು.  ಸ್ಥಳೀಯ ಕಚೇರಿಯ ಮಾಜಿ ಕಾರ್ಯಧ್ಯಕ್ಸ ಭಾರತ್ ಕೋಪರೇಟ್ ಬ್ಯಾಂಕಿನ ನಿರ್ದೇಶಕರಾದ ಗಂಗಾಧರ  ಜೆ ಪೂಜಾರಿಯವರು ನೂತನ ಅಧ್ಯಕ್ಷರಾದ ಹರೀಶ್ ಜಿ ಅಮೀನ್ ರವರನ್ನು ಪುಷ್ಪ ಗುಚ್ಛ, ಪ್ರಸಾದ , ಸಾಲು ಹೊದಿಸಿ ಅಭಿನಂದಿಸಿದರು. ಹಾಗೂ ಮಹಾರಾಷ್ಟ್ರ ದ ಜನಪ್ರಿಯ ಸುದ್ದಿ ಮಾಧ್ಯಮದವರು ಮಹಿಳಾ ಸಾಧಕಿಯರಿಗೆ ಕೊಡಮಾಡುವ  Lokamath woman Achievers of Mumbai.. 2021  ಶ್ರೀಮತಿ ನಿಶಿತಾ ಎಸ್ ಸುವರ್ಣ  ಹಾಗೂ ಅವರ ಪತಿ ಸೂರ್ಯಕಾ0ತ್ ಜಯ.ಸುವರ್ಣ ರವರಿಗೆ  ಸ್ಥಳೀಯ ಕಚೇರಿಯ ಜೊತೆ ಕಾರ್ಯಧರ್ಶಿಯವರಾದ  ಸಬಿತಾ  ಜಿ ಪೂಜಾರಿ, ಕಾರ್ಯಕರ್ತರಾದ ವಾರಿಜ  ಶೇಖರ್ ಕರ್ಕೇರ, , ಹರೀಶ್ ಜಿ ಅಮೀನ್, ಪುಷ್ಪಗುಚ್ಛ,  ಗುರುದೇವರ  ಪ್ರಸಾದ, ಸಾಲು ಹೊದಿಸಿ  ಅಭಿನಂದಿಸಿದರು.IMG-20210720-WA0018
ಕಾರ್ಯಕ್ರಮ ವೇದಿಕೆಯಲ್ಲಿ ಉಪಸ್ತಿತರಿದ್ದ  ಬಿಲ್ಲವರ ಎಸೋಸಿಯೇಶನಿನ     ಉಪಾಧ್ಯಕ್ಷರಾದ ಶಂಕರ್ ಡಿ ಪೂಜಾರಿ, ಜೊತೆ ಕಾರ್ಯಧರ್ಶಿಯವರಾದ  ಹರೀಶ್ ಜಿ ಸಾಲಿಯಾನ್, ಕೇಶವ ಕೆ ಕೋಟ್ಯಾನ್. ಕಾ0ದಿವಲಿಯ ಸ್ಥಳೀಯ ಕಚೇರಿಯ ಪ್ರತಿನಿಧಿಯಾದ  ಹರೀಶ್ ಪೂಜಾರಿ, ಮಾಜಿ ಗೌರವ ಪ್ರಧಾನ ಕಾರ್ಯಧರ್ಶಿಯವರಾದ  ಧರ್ಮಪಾಲ್ ಅಂಚನ್,  ಯುವಕ ವಿಭಾಗದ ಮಾಜಿ ಕಾರ್ಯಧ್ಯಕ್ಸರಾದ ನೀಲೇಶ್ ಪಲಿಮಾರ್ , ಅತಿಥಿಯವರಾದ ದೀಪಕ್ ಶೆಟ್ಟಿಯವರನ್ನು  ಅಧ್ಯಕ್ಷರು ಕಾರ್ಯಧ್ಯಕ್ಸರು, ಗೌರವ  ಕಾರ್ಯಾಧ್ಯಕ್ಷರಾದ ಭಾಸ್ಕರ  ಎಮ್ ಪೂಜಾರಿಯವರು, ಮಾಜಿ ಕಾರ್ಯಾಧ್ಯಕ್ಷರು ಗಂಗಾಧರ  ಜೆ ಪೂಜಾರಿಯವರು, ಕಾರ್ಯಧರ್ಶಿಯವರಾದ ಉಮೇಶ್ ಸುರತ್ಕಲ್, ಗೌರವ  ಕೋಶಾಧಿಕಾರಿಯವರಾದ ರಮೇಶ  ಬಂಗೇರ್ . ರವರು ಗುಲಾಬಿ ಪುಷ್ಪ ವನ್ನೀಡಿ ಗೌರವಿಸಿದರು. IMG-20210720-WA0019
ಅದಲ್ಲದೆ  S.S.C ಯಲ್ಲಿ ಉತ್ತೀರ್ಣ ರಾದ ಮಕ್ಕಳಿಗೆ  ಅಧ್ಯಕ್ಷರು ಸಾಲು ಹೊದಿಸಿ ಗುಲಾಬಿ ಪುಷ್ಪವನ್ನೀಡಿ ಶುಭಾಶಯ  ನೀಡಿದರು. ಕಾರ್ಯಕ್ರಮದಲ್ಲಿ  ಕಾ0ದಿವಲಿಯ ಸ್ಥಳೀಯ ಕಚೇರಿಯ  ಗೌರವ  ಕಾರ್ಯಧ್ಯಕ್ಸ ಭಾಸ್ಕರ್ ಎಮ್ ಪೂಜಾರಿ, ಕೋಶಾಧಿಕಾರಿಯವರಾದ ರಮೇಶ ಬಂಗೇರ, ಕಾರ್ಯಕರ್ತರಾದ ವಿಲಾಸ ಪೂಜಾರಿ, ಶೈಲೇಶ್ ಪೂಜಾರಿ, ಯಮುನ  ಸಾಲಿಯಾನ್ ,ಸುಜಾತ  ಪೂಜಾರಿ. ಜಯರಾಮ್ ಪೂಜಾರಿ, ವಿದ್ಯಾ  ಆರ್ ಅಮೀನ್, ಅನಿತಾ ಪೂಜಾರಿ, ಮತ್ತಿತರರು ಕಾರ್ಯಕ್ರಮಕ್ಕೆ
ಸಂಪೂರ್ಣ ಸಹಕಾರ ನೀಡಿ ಸಹಕರಿಸಿದರು .  ಗೌರವ  ಕಾರ್ಯಧರ್ಶಿಯವರಾದ  ಉಮೇಶ್ ಸುರತ್ಕಲ್ ಧನ್ಯವಾದ ನೀಡಿದರು, ಪಾಲ್ಗೊಂಡ ಎಲ್ಲರಿಗೂ ಲಘುಫಲಾಹಾರ ವ್ಯವಸ್ಥೆ ಮಾಡಲಾಗಿತ್ತು. ಸಮಾಜ ಬಾಂಧವರ ಆಶೀರ್ವಾದದಿಂದ ಪ್ರಶಸ್ತಿ ದೊರಕಿದೆ:. ಶ್ರೀಮತಿ ನಿಶಿತಾ ಎಸ್ ಸುವರ್ಣ ಸ್ಥಳೀಯ ಕಚೇರಿಯ   ಪಧಾಧಿಕಾರಿಯವರು ಕಾರ್ಯಕರ್ತರು  ಪ್ರಥಮತ  ಸನ್ಮಾನಿಸಿದಿರಿ .ಈ ಸನ್ಮಾನ ಸಮಯದಲ್ಲಿ  ನನ್ನ ಸ್ವರ್ಗೀಯ ಮಾವನವರು  ಇದ್ದಿದ್ದರೆ ಅವರಿಗೆ ಬಹಳ  ಸಂತೋಷ  ವಾಗುತಿತ್ತು. ಇದು ಎಲ್ಲಾ ನನ್ನ  ಮಾವನವರ ಆಶೀರ್ವಾದ, ಹಾಗೂ ನಿಮ್ಮೆಲ್ಲರ  ಪ್ರೋತ್ಸಾಹ  ಸಹಕಾರ ಸಾಧ್ಯವಾಗಿದೆ. ನೀವು ಪ್ರೀತಿಯಿಂದ  ನೀಡಿದಂತ ಗುರುದೇವರ  ಪ್ರಸಾದ  , ಸನ್ಮಾನಕ್ಕೆ ನನ್ನ  ಕ್ರತಜ್ಣತೆ  ಹಾಗೂ ನನ್ನ  ಮನಪೂರ್ವಕ  ಧನ್ಯವಾದ ಎಂದು ಸನ್ಮಾನಿತರಾದ ಶ್ರೀಮತಿ. ನಿಶಿತಾ ಎಸ್ ಸುವರ್ಣ ರವರು ನುಡಿದರು

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter