ಸುದ್ದಿ9ಬಂಟ್ವಾಳ: ಮಾತೃ ಸ್ವರೂಪಿಯಾದ ಗೋಮಾತೆಯ ರಕ್ಷಣೆಯನ್ನು ಮಾಡುತ್ತೇವೆ. ಆ ಮೂಲಕ ಗೋ ಸಂತತಿಯನ್ನು ಉಳಿಸುತ್ತೇವೆ ಎನ್ನುವ ದೀಕ್ಷೆಯನ್ನು ಎಲ್ಲರೂ ಕೈಗೊಂಡಾಗ ಮಾತ್ರ ಗೋಪೂಜೆ ಆಚರಣೆ ಅರ್ಥಪೂರ್ಣವಾಗಲು ಸಾಧ್ಯ ಎಂದು ವಿಶ್ವ ಹಿಂದೂ ಪರಿಷತ್ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿ ಹೇಳಿದರು.
ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಬಂಟ್ವಾಳ ತಾಲೂಕು ಸಮಿತಿಯ ಆಶ್ರಯದಲ್ಲಿ ರಾಮಲ್ಕಟ್ಟೆಯಲ್ಲಿ ಶುಕ್ರವಾರ ಸಂಜೆ ನಡೆದ ಗೋಪೂಜನಾ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಚಾಲನೆಗೊಳಿಸಿ ಮಾತನಾಡಿದರು. ದೇವರ ಮತ್ತೊಂದು ಸ್ವರೂಪವೇ ಗೋವು. ಅಂತಹ ಗೋವನ್ನು ಶ್ರದ್ದಾ ಭಕ್ತಿಯಿಂದ ಪೂಜಿಸಿದರೆ ಆ ಮನೆ ದೇವಲೋಕವಾಗುವುದರಲ್ಲಿ ಎರಡು ಮಾತಿಲ್ಲ ಎಂದರು. ಅಕ್ರಮ ಗೋಸಾಗಾಟಕಾರರು, ಗೋಕಳ್ಳರಿಂದ ಗೋವುಗಳನ್ನು ರಕ್ಷಿಸಲು ಧರ್ಮಜಾಗೃತಿಯ ಪರಶು ಹಿಡಿಯ ಬೇಕಾದ ಅನಿವಾರ್ಯತೆ ಒದಗಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ, ನ್ಯಾಯಾವಾದಿ ಪ್ರಸಾದ್ ಕುಮಾರ್ ದಿಕ್ಸೂಚಿ ಭಾಷಣ ಮಾಡಿ ಬದುಕುವ ಸಂಸ್ಕೃತಿಯನ್ನು ಜಗತ್ತಿಗೆ ತಿಳಿಸಿದ ಧರ್ಮ ಹಿಂದೂ ಧರ್ಮ. ಲಕ್ಷಾಂತರ ವರ್ಷಗಳ ಇತಹಾಸವನ್ನು ಭಾರತ ದೇಶ ಹೊಂದಿದೆ ಎಂದರು.
ಬಜರಂಗ ದಳದ ಬಂಟ್ವಾಳ ಪ್ರಖಂಡ ಸಂಚಾಲಕ ಗುರುರಾಜ್, ಗೋರಕ್ಷ ಪ್ರಮುಖ್ ಭರತ್ ವೇದಿಕೆಯಲ್ಲಿದ್ದರು. ವಿ.ಹಿಂ.ಪ.ಕಾರ್ಯದಶರ್ಿ ವಿಜೇತ್ ತುಂಬೆ ಸ್ವಾಗತಿಸಿ ನಿರೂಪಿಸಿದರು. ಉಮೇಶ್ ರೆಂಜೋಡಿ ಪ್ರಸ್ತಾವಿಸಿದರು. ತನ್ನ ಮನೆಯಲ್ಲಿ ಈಗಲೂ 16 ಗೋವುಗಳನ್ನು ಸಾಕಣೆ ಮಾಡುತ್ತಿರುವ ಕೃಷಿಕ ಪದ್ಮನಾಭ ಸಾಲ್ಯಾನ್ ಕಲ್ಲಗುಡ್ಡೆ ಅವರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಸಭಾ ಕಾರ್ಯಕ್ರಮಕ್ಕಿಂತ ಮುಂಚಿತವಾಗಿ ಗೋವುಗಳಿಗೆ ತುಳಸಿ ಹಾರ ತೊಡಿಸಿ, ಆರತಿ ಬೆಳಗಿ ಗೋಪೂಜೆ ನಡೆಸಲಾಯಿತು.



BTW_OCT25_1B

1 (5)

2 (3)

BTW_OCT25_1A

By Suddi9

Leave a Reply

Your email address will not be published. Required fields are marked *