ಸುದ್ದಿ9ಮಂಗಳೂರು: `ಹಿಂದೂ ಯುವಕ ಮತ್ತು ಕ್ರೈಸ್ತ ಯುವತಿ ಪರಸ್ಪರ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದು ಒಪ್ಪಿಯೇ ಮದುವೆಯಾಗಿದ್ದಾರೆ. ಇದರಲ್ಲಿ ನಾನು ಹುಡುಗಿಯ ಮನೆಮಂದಿಯನ್ನು ಬೆದರಿಸಿದ್ದೇನೆ ಎಂಬ ಮಾತು ಸತ್ಯಕ್ಕೆ ದೂರವಾದುದು. ಇಲ್ಲಿ ನಾನು ಯಾರನ್ನೂ ಒತ್ತಾಯ ಪಡಿಸಿಲ್ಲ’ ಎಂದು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಜಗದೀಶ್ ಶೇಣವ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಆರ್ಯಸಮಾಜದಲ್ಲಿ ನಡೆದಿದ್ದ ರೋಶನ್ ಶೆಟ್ಟಿ ಹಾಗೂ ವಿವಿಟಾ ಡಿಸೋಜ ಮದುವೆಗೆ ಸಂಬಂಧಿಸಿ ಹುಡುಗಿಯ ಸಂಬಂಧಿಕರು ಕೊಣಾಜೆ ಠಾಣೆಯಲ್ಲಿ ಬಲತ್ಕಾರದ ಮದುವೆ ಹಾಗೂ ಜೀವ ಬೆದರಿಕೆ ಒಡ್ಡಿದ್ದಾಗಿ ಆರೋಪಿಸಿ ಜಗದೀಶ್ ಶೇಣವ ವಿರುದ್ಧ ದೂರು ನೀಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಗದೀಶ್ ಶೇಣವ ಅವರು, `ರೋಶನ್ ಮತ್ತು ವಿವಿಟಾ ಪ್ರೇಮಿಗಳು, ವಿವಿಟಾ ಮನೆಯಲ್ಲಿ ಮದುವೆಗೆ ವಿರೋಧ ಇದೆ ಎಂದು ಜೋಡಿ ನನ್ನ ಬಳಿ ಬಂದಿದ್ದರಿಂದ ಅವರಲ್ಲಿ ಚಚರ್ಿಸಿ ಆರ್ಯ ಸಮಾಜದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಕಾರ್ಯ ನಡೆಸಿದ್ದೇನೆ. ಇದರಲ್ಲಿ ಯಾವುದೇ ಒತ್ತಡವಿರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ರೋಶನ್ ಹಾಗೂ ವಿವಿಟಾ ಮದುವೆ ಅಕ್ಟೋಬರ್ 16ರಂದು ಆರ್ಯಸಮಾಜದಲ್ಲಿ ನಡೆದಿತ್ತು. ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಸಂಘಟನೆಯ ಕಾರ್ಯಕರ್ತರು ಮದುವೆ ನಡೆಸಿದ್ದರು. ಆದರೆ ನಂತರ ಪ್ರಕರಣ ತಿರುವು ಪಡೆದು ಯುವತಿಯ ಮನೆಮಂದಿ ಬೆದರಿಕೆ ದೂರು ನೀಡಿದ್ದರು.

001p

By Suddi9

Leave a Reply

Your email address will not be published. Required fields are marked *