ಕುಂದಾಪುರ: ಬೆಂಗಳೂರಿನಿಂದ ಊರಿಗೆ ಹೊರಟಿದ್ದ ಬಾಲಕ ನಾಪತ್ತೆಯಾಗಿರುವ ಬಗ್ಗೆ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ. ಗುಜ್ಜಾಡಿ ನಿವಾಸಿ ಶಾಂತಿ ಖಾವರ್ಿ ಎಂಬವರ ಪುತ್ರ ಕಿರಣ್(19) ನಾಪತ್ತೆಯಾದವನು. ಈತ ಸುಮಾರು ಎಂಟು ತಿಂಗಳಿಂದ ಬೆಂಗಳೂರಿನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದು ಕಳೆದ ಅಕ್ಟೋಬರ್ 21ರಂದು ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಊರಿಗೆ ಹೊರಟಿದ್ದು ಬಳಿಕ ನಾಪತ್ತೆಯಾಗಿದ್ದಾನೆ ಎಂದು ದೂರಲಾಗಿದೆ. ಕುಂದಾಪುರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 
