ಮುಂಬಯಿ:   ವೈದ್ಯರ ದಿನವಾದ ಜು.೦೧ ರಂದು ಗುರುವಾರ  ಜೈನ ಕಾಶಿ ಮೂಡುಬಿದಿರೆ ಇಲ್ಲಿನ ಮಠದಲ್ಲಿ ಜಗದ್ಗುರು ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಅವರು ವೈದ್ಯೋ ನಾರಾಯಣೋ ಹರಿ ಎಂದು ನಾಡಿನ ಸಮಸ್ತ ವೈದ್ಯರಿಗೆ ಶುಭಾಶಯ ಕೋರಿದರು.Jaina Swamiji DOCTORS Day 2ವೈದ್ಯರು ಉತ್ತಮ ಚಿಕಿತ್ಸೆ ನೀಡಿ ರೋಗಿಗಳಲ್ಲಿ ಆತ್ಮಸ್ಥೈರ್ಯ ನೀಡುವ ಕೆಲಸ ಮಾಡಿದ್ದು ಸಂಕಷ್ಟ ಪರಿಸ್ಥಿತಿಯಲ್ಲಿ ಕಳೆದ ಹಲವು ವಾರ ಸುಮಾರು ೩೦ಕ್ಕೂ ಅಧಿಕ ಆಳ್ವಾಸ್ ಅರೋಗ್ಯ ಕೇಂದ್ರದ ವೈದ್ಯರು ಸ್ಥಳೀಯ, ಸುತ್ತಮುತ್ತಲ ಗ್ರಾಮಸ್ಥರಿಗೆ ಉಚಿತ ಔಷಧಿ ವಿತರಣೆ ಮಾಡಿ ಮಾದರಿ ಸೇವೆ ಸಲ್ಲಿಸಿದ್ದಾರೆ. ಅಂತೆಯೇ ಕನ್ನಡ ಸ್ಕೌಟ್ ಗೈಡ್ ಭವನದಲ್ಲಿ ಉಚಿತ ಸೇವೆ ನೀಡಿದ ಡಾ| ಎಂ.ಮೋಹನ್ ಆಳ್ವಾ ಅವರ ವೈದ್ಯಕೀಯ ಸಂಸ್ಥೆಯ ವೈದ್ಯರ ತಂಡದ ಕಾರ್ಯ ಪ್ರಶಂಶನಿಯ ಎಂದರು.

By suddi9

Leave a Reply

Your email address will not be published. Required fields are marked *