ಮುಂಬಯಿ : ಉಡುಪಿ ಕುಂದಾಪುರ ಇಲ್ಲಿನ ನಾವುಂದ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಆವರಣದಲ್ಲಿ ಸರಕಾರದ ಅನುದಾನ ಮತ್ತು ದಾನಿಗಳ ನೆರವು ಪಡೆದು ನಿರ್ಮಿಸಲ್ಪಡುವ ವಿಶಾಲವಾದ ಸುಸಜ್ಜಿತವಾದ ಸಮುದಾಯ ಭವನ ಕುರಿತು ಕಳೆದ ಶನಿವಾರ ಆನ್‌ಲೈನ್ ವರ್ಚುವಲ್ ವೆಬ್‌ನಾರ್ (ಝೂಮ್) ಮೂಲಕ ಗರಡಿಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುತ್ತ ಬಿಲ್ಲವ ಕುದ್ರು ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

2 N.K Billava (2)

ಟ್ರಸ್ಟ್ನ ಮುಂಬಯಿ ಸಮಿತಿ ಅಧ್ಯಕ್ಷ ಡಾ| ಎನ್.ಕೆ ಬಿಲ್ಲವ ಪ್ರಾಸ್ತಾವಿಕವಾಗಿ ಮಾತನಾಡಿ  ಸಮುದಾಯ ಭವನದ ರೂಪುರೇಷೆಗಳನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಆನಂದ ಶೆಟ್ಟಿ, ವಿಶ್ವನಾಥ ಶೆಟ್ಟಿ, ಶೀನ ಪೂಜಾರಿ, ಜಗದೀಶ ಪೂಜಾರಿ ಹಕ್ಕಾಡಿ ಮುಂತಾದವರು ತಮ್ಮ ಸಲಹೆಗಳನ್ನು ನೀಡುವುದರ ಜೊತೆಗೆ ಯೋಜನೆಗೆ ಸಹಮತ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಸಮುದಾಯ ಭವನ ನಿರ್ಮಾಣ ಸಮಿತಿಗೆ ಸದಸ್ಯರ ಆಯ್ಕೆಯನ್ನು ಮಾಡಲಾಯಿತು.

 ಆನಂದ ಶೆಟ್ಟಿ (ಗೌರವ ಅಧ್ಯಕ್ಷರು), ಡಾ|| ಎನ್ ಕೆ ಬಿಲ್ಲವ (ಅಧ್ಯಕ್ಷರು),  ಜಗದೀಶ ಪೂಜಾರಿ ಹಕ್ಕಾಡಿ (ಉಪಾಧ್ಯಕ್ಷರು),  ವಿಶ್ವನಾಥ ಶೆಟ್ಟಿ (ಉಪಾಧ್ಯಕ್ಷರು),  ಶೀನ ಪೂಜಾರಿ (ಉಪಾಧ್ಯಕ್ಷರು),  ಶೇಖರ ಪೂಜಾರಿ (ಪ್ರಧಾನ ಕಾರ್ಯದರ್ಶಿ)  ಪರಮೇಶ್ವರ ಪೂಜಾರಿ ಮತ್ತು  ರಾಮಕೃಷ್ಣ ಬಿಲ್ಲವ (ಉಪ ಕಾರ್ಯದರ್ಶಿ),  ಮುತ್ತ ಬಿಲ್ಲವ ಕುದ್ರು(ಖಜಾಂಚಿ) ಹಾಗೂ  ಚಂದ್ರಶೇಖರ ಶೆಟ್ಟಿ (ಉಪಖಜಾಂಚಿ).
ಸಮಿತಿಯ ಸದಸ್ಯರಾಗಿ ಕುಶಾಲ್ ಶೆಟ್ಟಿ, ರಾಜೀವ ಶೆಟ್ಟಿ, ಸಂಜು ಪೂಜಾರಿ ಮಾವಿನಕೆರೆ, ಸೀತಾರಾಮ ಬಿಲ್ಲವ, ರಘು ಪೂಜಾರಿ ಬಿಇಎಸ್‌ಟಿ ಹಾಗೂ ನಾಗೇಶ ಪೂಜಾರಿ ಗರಡಿ ಮನೆ, ರಾಘವೇಂದ್ರ ಪೂಜಾರಿ, ವಸಂತ ಪೂಜಾರಿ, ಸತ್ಯವತಿ ಬಿಲ್ಲವ, ಬೇಬಿ ಪೂಜಾರಿ, ಸುರೇಶ ಪೂಜಾರಿ, ಸತೀಶ್ ಪೂಜಾರಿ ಆಯ್ಕೆ ಗೊಂಡರು.
ಗೌರವ ಸಲಹೆಗಾರರಾಗಿ ವೇ| ಮೂ| ರಾಘವೇಂದ್ರ ಕಾರಂತ್, ಬಾಬು ಬಿಲ್ಲವ, ಕೆ.ಪುಂಡಲೀಕ ನಾಯಕ್, ವಾಸ್ತು ಸಲಹೆಗಾರರನ್ನಾಗಿ ಪಂಡಿತ್ ನವೀನ್‌ಚಂದ್ರ ಆರ್.ಸನೀಲ್ ಅವರನ್ನು ಆಯ್ಕೆ ಮಾಡಲಾಯಿತು.

By suddi9

Leave a Reply

Your email address will not be published. Required fields are marked *