ಬಂಟ್ವಾಳ: ಹ್ಯೂಮಾನಿಟಿ ಚಾರಿಟೇಬಲ್ ಟ್ರಸ್ಟ್ (ರಿ.) ಬೋಳಂತೂರು ಪರಿಸರದಲ್ಲಿ, ಸೇವಾ ರಂಗದಲ್ಲಿ ತನ್ನ ಚಾಪನ್ನು ಮೂಡಿಸಿ, ಬಡ,ನಿರ್ಗತಿಕ,ಅನಾಥ ಕುಟುಂಬಗಳಿಗೆ ಆಸರೆಯಾಗಿ ಬಹಳಷ್ಟು ಕಾರುಣ್ಯ ಸೇವೆಯೊಂದಿಗೆ ಮುನ್ನುಗ್ಗುತ್ತಿದ್ದು,484e630b-68c9-43ba-884f-dfa65d0e3af4

ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾಗಿರುವ ಬೋಳಂತೂರು ವ್ಯಾಪ್ತಿಯ ಸುಮಾರು 100 ಕ್ಕೂ ಅಧಿಕ ಕುಟುಂಬ ಗಳಿಗೆ ಹ್ಯೂಮಾನಿಟಿ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಹಿಂದೂ ಮುಸ್ಲಿಮರೆಂಬ ಭೇಧಭಾವವಿಲ್ಲದ ಟ್ರಸ್ಟ್ ನ ಸೇವಾಕಾರ್ಯವು ಸರ್ವ ಜನರಿಂದ ಪ್ರಶಂಸೆಗೆ ಪಾತ್ರವಾಗಿದೆ.88b1a5b7-e3c6-49da-bdea-1d3337e444d0

ಈ ಸಂದರ್ಭದಲ್ಲಿ ಟ್ರಸಿನ ಅಧ್ಯಕ್ಷ ಶೆರೀಫ್ ಎನ್.ಸಿ.ರೋಡ್, ಉಪಾಧ್ಯಕ್ಷ ಸಿದ್ಧೀಕ್ ಕುಡುಂಬಕೋಡಿ, ಕಾರ್ಯದರ್ಶಿ ಖಾದರ್, ಖಜಾಂಜಿ ಶೆರೀಫ್ ಸರಪಾಡಿ, ಹಾರಿಸ್ ನಾರಂಕೋಡಿ, ರಫೀಕ್ ನಾರಂಕೋಡಿ, ಅಮೀರ್ ಮಜಲುಕೋಡಿ, ಕಬೀರ್ ಎನ್.ಸಿ.ರೋಡ್, ಬಶೀರ್ ಶಿವಮೊಗ್ಗ, ಕಲಂದರ್ ಶಾ ಮೊದಲಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *