ಮೂಡುಬಿದಿರೆ: ಉತ್ತರ ಪ್ರದೇಶ ಮೂಲದ ಯುವಕನೋರ್ವ ಆಲಂಗಾರು ಆಶ್ರಮದಿಂದ ಕಾಣೆಯಾಗಿದ್ದು ಆತನ ಪತ್ತೆಗಾಗಿ ಮೂಡುಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.

60e1f67a-1856-46c3-8b7b-d4a2f04f632fಕಲ್ಲಮುಂಡ್ಕೂರು ಪೇಟೆಯಲ್ಲಿ ಮಾನಸಿಕ ಅಸ್ವಸ್ಥನಂತೆ ಓಡಾಡಿಕೊಂಡಿದ್ದ ಅಮನ್ ಕುಮಾರ್ ರಾಯ್(22) ಅವರನ್ನು ಕಳೆದ ಮೇ 19ರಂದು ಹೆದ್ದಾರಿ ಗಸ್ತು ಸಿಬಂದಿಗಳು ವಿಚಾರಿಸಿದ್ದು ಹೆತ್ತವರ ಮೂಲ ತಿಳಿದು ಅವರಿಗೆ ಮಾಹಿತಿ ಮುಟ್ಟಿಸಿದ್ದರು. ಹೆತ್ತವರು ಬಂದು ಕರೆದೊಯ್ಯುವವರೆಗೂ ಆತನನ್ನು ಆಲಂಗಾರಿನ ಆಶ್ರಮದಲ್ಲಿರಿಸಲಾಗಿತ್ತು.

ಆದರೆ ಕಳೆದ ಮೇ.25ರಂದು ಬೆಳಗ್ಗೆ ಈತ ಆಶ್ರಮದಿಂದ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಸುಮಾರು 5.4 ಅಡಿ ಎತ್ತರ, ಗೋಧಿ ಮೈ ಬಣ್ಣ, ದೃಢಕಾಯದ ಶರೀರ ಹೊಂದಿರುವ ಈತ ಉದ್ದ ತೋಳಿನ ಬೂದು ವರ್ಣದ ಶರ್ಟ್, ನೇರಳೆ ಪ್ಯಾಂಟ್, ತಲೆಗೆ ಟೊಪ್ಪಿ ಧರಿಸಿದ್ದು ಹಿಂದಿ ಭಾಷೆ ಬಲ್ಲವನಾಗಿದ್ದಾನೆ.ಈತನ ಬಗ್ಗೆ ಸುಳಿವು ಸಿಕ್ಕವರು ದ.ಕ ಜಿಲ್ಲಾ ಪೋಲೀಸ್ ಆಯುಕ್ತರು/ ಮೂಡುಬಿದಿರೆ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.

By suddi9

Leave a Reply

Your email address will not be published. Required fields are marked *