ಕೈಕಂಬ:ಮುಲ್ಕಿ ವಲಯ ಪತ್ರಕರ್ತರ ಸಂಘದ ಸಕ್ರಿಯ ಸದಸ್ಯ ಯಶವಂತ ಐಕಳ(50) ಅನಾರೋಗ್ಯದಿಂದ ಬುಧವಾರ ನಿಧನರಾದರು. ಅವರು ಪತ್ನಿಯನ್ನು ಅಗಲಿದ್ದಾರೆ. ಹತ್ತು ಹದಿನೈದು ದಿನದ ಮುಂಚೆ ಅವರ ತಾಯಿಯನ್ನು ಕಳೆದುಕೊಂಡ ಯಶೂ ಅವರ ಕುಟುಂಬಕ್ಕೆ ತುಂಬಲಾರದ ನಷ್ಟ.
ಅವರು ಮುಲ್ಕಿ ವಲಯ ಪತ್ರಕರ್ತರ ಸಂಘದ ಸಕ್ರಿಯ ಸದಸ್ಯರಾಗಿ,ಕಳೆದ ಹಲವಾರು ವರ್ಷಗಳಿಂದ ಕಿನ್ನಿಗೋಳಿಯಿಂದ ಪ್ರಕಟವಾಗುತ್ತಿದ್ದ “ನಮ್ಮಕಿನ್ನಿಗೋಳಿ ಡಾಟ್ ಕಾಮ್”. ವೆಬ್ಸೈಟ್ ನ ಮುಖ್ಯಸ್ಥರಾಗಿದ್ದರು . ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ಕಿನ್ನಿಗೋಳಿಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷರಾಗಿ, ಮುಲ್ಕಿ ಒಂಬತ್ತು ಮಾಗಣೆಯ ಮುಂಡಾಲ ಸಮಾಜದ ಅಧ್ಯಕ್ಷರಾಗಿ, ಕಿನ್ನಿಗೋಳಿ ಗಣೇಶೋತ್ಸವ ಸಮಿತಿಯ ಸಕ್ರಿಯ ಸದಸ್ಯರಾಗಿ, ಮೂರುಕಾವೇರಿ ಯಕ್ಷಗಾನ ಬಯಲಾಟ ಸಮಿತಿಯ ಸದಸ್ಯರಾಗಿ, ಕೆಮ್ಮಡೆ ವೈದ್ಯನಾಥ ದೈವಸ್ಥಾನ ಸಮಿತಿಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದರು.
ಅವರ ನಿಧನಕ್ಕೆ ಹಲಾಚಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
