ಸುದ್ದಿ9 ಕೈಕಂಬ: ದೀಪಾವಳಿ ದೀಪಗಳ ಹಬ್ಬ. ಮನಸ್ಸಲ್ಲಿ ಆವರಿಸಿದ್ದ ತಮಸ್ಸನ್ನು ಹೋಗಲಾಡಿಸಿ ಜ್ಞಾನವೆಂಬ ದೀಪವನ್ನು ಬೆಳಗಿಸುವ ಹಬ್ಬವಿದು. ಈ ಹಬ್ಬದಂದು ಗೋಪೂಜೆ, ಲಕ್ಷ್ಮೀಪೂಜೆ, ಬಲಿಯೇಂದ್ರಪೂಜೆ, ಅಂಗಡಿಪೂಜೆ ಈಗೆ ಹಲವು ವಿಧದಲ್ಲಿ ತುಳುನಾಡಿನ ಸಾಂಪ್ರದಾಯದಂತೆ ಪೂಜೆ ಮಾಡುತ್ತಾರೆ. ಆದರೆ ಗುರುಪುರ ಕೈಕಂಬದ ಹೋಟೆಲ್ ನ ಉದ್ಯಮಿಯೋರ್ವರು ವಿಶಿಷ್ಠವಾಗಿ ಅಂಗಡಿಪೂಜೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಕೈಕಂಬದ ಸ್ವಾಗತ್ ಹೋಟೆಲ್ ನಲ್ಲಿ ಮಾಲಕ ಜಗದೀಶ್ ಅವರು ಈ ವಿಶಿಷ್ಠ ಆಚರಣೆಗೆ ಮುನ್ನುಡಿ ಬರೆದವರು.
ಬೆಳಿಗ್ಗೆ ಗಣಹೋಮ ಮಾಡಿ ದೇವಸ್ಥಾನದಲ್ಲಿ ಸಾತ್ವಿಕ ಲಹರಿಯನ್ನುಂಟುಮಾಡಲಾಯ್ತು. ಆಮೇಲೆ ಊರಿನ ಪ್ರಸಿದ್ಧ ಭಜನಾ ತಂಡವಾದ ಮಟ್ಟಿ ಕಾಳಬೈರವೇಶ್ವರ ಭಜನಾ ಮಂಡಳಿ ಇದರ ಸದಸ್ಯರು ಶುಶ್ರಾವ್ಯವಾಗಿ ಭಜನೆ ಮಾಡುವ ಮೂಲಕ ದೇವರನ್ನು ಭಕ್ತಿಯಿಂದ ಭಜಿಸಿದರು. ದೇವಲೋಕ ವಿಶ್ವರೂಪಸೌದದ ಮಾಲಕ ವಿಶ್ವನಾಥ ಚೌಟ ಅವರು ದೇವರಿಗೆ ದೀಪ್ ಪ್ರಜ್ವಲಿಸಿ ಒಂದೆರಡು ಭಜನೆ ಹಾಡುವ ಮೂಲಕ ನೆರೆದ ಜನರಿಗೆ ತರುಣರಿಗೆ ತನ್ನ ಮುಪ್ಪಿನ ಸಮಯದಲ್ಲೂ ಉತ್ಷಹವ ಭರಿತವಾಗಿ ಹಾಡಿ ನಾಂದಿಯಾಡಿದರು. ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದರು.


ಈ ಕಾರ್ಯಕ್ರಮಕ್ಕೆ ಪ್ರವೀಣ್, ಪ್ರೇಮನಾಥ್ ಶೆಟ್ಟಿ ಪೊಳಲಿ, ಹರೀಶ್ ಮಟ್ಟಿ ಹಾಗೂ ಹಲವು ಭಜನಾಪ್ರೀಯರು ಭಾಗವಹಿಸಿದ್ದರು ಹಾಗೂ ನೂರಾರು ಹೋಟೆಲ್ ಗ್ರಾಹಕರು ಭಾಗವಹಿಸಿದ್ದರು










