ಕೈಕಂಬ: ಮರೋಳಿ ಕತ್ತಲ್ ಸಾರ್ ಪಡುಪೆರಾರ ನಿವಾಸಿ ದಿ. ಶೀನ ಶೆಟ್ಟಿ ಅವರ ಧರ್ಮಪತ್ನಿ ಸೂಲಗಿತ್ತಿ ಶ್ರೀಮತಿ ಸುಂದರಿ ಶೆಟ್ಟಿ (88) ಅವರು ಮೇ 21ರಂದು ಶುಕ್ರವಾರ ತನ್ನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಉದ್ಯಮಿ ಕೃಷ್ಣ ಶೆಟ್ಟಿ ಶ್ರೀ ದ್ವಾರ ಬೈಕಂಪಾಡಿ ಸಹಿತ ಇಬ್ಬರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
ಜಾತಿ ಮತ ಭೇದ ಮರೆತು ಹಗಲು ರಾತ್ರಿ ಎನ್ನದೆ ಪಡುಪೆರಾರ ಗ್ರಾಮದ ಸುತ್ತಮುತ್ತಲ ಪರಿಸರದಲ್ಲಿ ಯಾರಿಗಾದರೂ ಹೆರಿಗೆ ನೋವು ಬಂದರೆ ಯಾವುದೇ ಹೊತ್ತಿನಲ್ಲಾದರೂ ತನ್ನೆಲ್ಲಾ ಕೆಲಸಗಳನ್ನು ಬದಿಗಿಟ್ಟು ಅವರ ನೋವಿಗೆ ಸ್ಪಂದಿಸಿ ಹೆರಿಗೆಯನ್ನು ಸುಸೂತ್ರವಾಗಿ ಮಾಡಿ ಅವರ ಹಾರೈಕೆ ಮಾಡುತ್ತಿದ್ದರು. ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತಿದ್ದ ಇವರ ಸೇವೆಯನ್ನು ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.
