Published On: Fri, May 7th, 2021

ಯುವಜನರಿಗೆ ಮಾದರಿ ಈ ನ್ಯಾಯ ಸಜ್ಜನ ಕೃಷಿ ಆಸಕ್ತಿ ಮೈಗೂಡಿಸಿಕೊಂಡ ವಕೀಲ-ದೈವ ಪಾತ್ರಿ ಚಂದ್ರಹಾಸ ಕೌಡೂರು

ವೃತ್ತಿಯಲ್ಲಿ ವಕೀಲ, ಪ್ರವೃತ್ತಿಯಲ್ಲಿ ಕೃಷಿಕ. ಬಾಲ್ಯದಲ್ಲಿ ತನ್ನ ಅಜ್ಜನಿಂದ ಕೃಷಿ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಚಂದ್ರಹಾಸ ಪೂಜಾರಿ ಕೌಡೂರು, ಈಗ ವೃತ್ತಿಯೊಂದಿಗೆ ಪ್ರವೃತ್ತಿಗೆ ಮಹತ್ವ ನೀಡುವ ಕಾಲ ಎಂದು ವಿಶ್ಲೇಷಿಸಿದ್ದಾರೆ.gur-may-7-krishi-2

ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದಲ್ಲಿ ವೈದ್ಯನಾಥ ಪಾತ್ರಿಯೂ ಆಗಿರುವ ಚಂದ್ರಹಾಸರು ಕಳೆದ ವರ್ಷ ಹಾಗೂ ಈ ವರ್ಷದ ಲಾಕ್‌ಡೌನ್ ಬಿಡುವಿನ ಅವಧಿಯಲ್ಲಿ ಕೃಷಿಗೆ ಅದರಲ್ಲೂ ಮುಖ್ಯವಾಗಿ ಕಂಗು, ತೆಂಗು, ಬಾಳೆ ತೋಟಗಾರಿಕೆಗೆ ಆದ್ಯತೆ ನೀಡಿದ್ದಾರೆ. ದೈವಸ್ಥಾನ ಮತ್ತು ಭಂಡಾರದಮನೆಯ ಸುತ್ತಲಿರುವ ತಮ್ಮ ಭತ್ತದ ಕೃಷಿ ಪ್ರದೇಶಕ್ಕೆ ಹೊಂದಿಕೊAಡಿರುವ ಖಾಲಿ ಜಾಗದಲ್ಲಿ ಸುಮಾರು ೨೫೦ ಕಂಗಿನ ಗಿಡ ನೆಟ್ಟಿರುವ ಇವರು, ಭವಿಷ್ಯದಲ್ಲಿ ಗದ್ದೆಯ ಬದುಗಳ ಎರಡೂ ಪಾರ್ಶ್ವದಲ್ಲಿ ಇನ್ನೂ ೩೦೦-೪೦೦ ಅಡಕೆ ಗಿಡ ನೆಡಲು ನಿರ್ಧರಿಸಿದ್ದಾರೆ.

ಇಲ್ಲಿ `ವಿಜಯ’ ತಳಿಯ ಕಂಗಿನ ತೋಟದಲ್ಲಿ ಉಪಬೆಳೆಯಾಗಿ ಬಾಳೆಗಿಡ ನಳನಳಿಸುತ್ತಿದೆ. ಬಾಳೆಗಿಡ ಫಲ ನೀಡುವ ಹಂತಕ್ಕೆ ಬಂದಿದೆ. ವೃತ್ತಿಯ ಸಂದರ್ಭದಲ್ಲೂ ಪ್ರತಿದಿನ ತೋಟ ಸುತ್ತಾಡಿ ತೆಂಗು, ಕಂಗು ಮತ್ತು ಬಾಳೆ ಗಿಡಗಳತ್ತ ಗಮನಹರಿಸುತ್ತಿದ್ದ ಇವರು, ಖುದ್ದಾಗಿ ಗಿಡಗಳಿಗೆ ನೀರು ಎರೆಯುತ್ತಾರೆ, ಕೆಸರಲ್ಲಿ ಖುಷಿ ಪಡುತ್ತಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಇವರ ತೋಟದಲ್ಲಿ ಬೆಳೆಯಲಾದ ಕಂಗು ಫಲ ನೀಡಲಿದೆ. ತೋಟ ಚಿಕ್ಕದಾದರೂ ಚೊಕ್ಕದಾಗಿದ್ದು, ಅನುಕರಣೆಗೆ ಯೋಗ್ಯವಾಗಿದೆ.

ಯುವಜನರು ಕೆಲಸವಿಲ್ಲವೆಂದು ಹೇಳುವ ಬದಲಾಗಿ ತಮ್ಮಲ್ಲಿರಬಹುದಾದ ಸಣ್ಣ ಜಾಗದಲ್ಲಿ ಒಂದಷ್ಟು ಕೃಷಿಗೆ ಆದ್ಯತೆ ನೀಡಬೇಕು. ಕೃಷಿಯ ಖುಷಿಯ ಜೊತೆಗೆ ಆದಾಯವೂ ಇದೆ. ಲಾಕ್‌ಡೌನ್ ಅವಧಿ ಅಥವಾ ಬಿಡುವಿನ ಸಮಯವನ್ನು ಇಂತಹ ಉಪಯುಕ್ತ ಕೆಲಸಗಳಿಗೆ ಮೀಸಲಿಟ್ಟರೆ ಬಹುತೇಕ ಯುವಜನರ ಜೀವನದಲ್ಲಿ ಹೊಸ ತಿರುವು, ಆಶಾಕಿರಣ ಮೂಡಲಿದೆ. ಜೊತೆಗೆ ಇತರರಿಗೆ ಮಾದರಿಯಾಗಲಿದ್ದಾರೆ ಎನ್ನುವ ಚಂದ್ರಹಾಸ ಕೌಡೂರು, “ನನ್ನದು ಕೆಲಸವಿಲ್ಲದ ಸಮಯದಲ್ಲಿ ಮಾತ್ರ ತೋಟಗಾರಿಕೆಯಲ್ಲ. ಭತ್ತದ ಬೇಸಾಯವೂ ಇದೆ. ಇದು ನನ್ನಜ್ಜ ಬದಿನಮನೆ ತಿಮ್ಮ ಪೂಜಾರಿಯವರ ವರ ಎಂದರೂ ತಪ್ಪಲ್ಲ. ನನ್ನವರ ಸಹಕಾರವಿದೆ. ನಿತ್ಯದ ವಕೀಲಿ ವೃತ್ತಿಯ ಒತ್ತಡಲ್ಲೂ ಪ್ರತಿನಿತ್ಯ ತೋಟದ ಆಗುಹೋಗುಗಳತ್ತ ಗಮನಹರಿಸುತ್ತೇನೆ. ವಕೀಲ ವೃತ್ತಿಯಂತೆ ಕೃಷಿ, ತೋಟಗಾರಿಕೆಯಲ್ಲೂ ಖುಷಿ ಇದೆ. ತೋಟಕ್ಕೆ ಸಾವಯವ ಗೊಬ್ಬರ ಬಳಸುತ್ತಿದ್ದೇನೆ. ಗುರುಪುರ ಮಠದಿಂದ ಹಟ್ಟಿ ಗೊಬ್ಬರ ಆಮದು ಮಾಡಿಕೊಂಡು, ಪ್ರತಿಯಾಗಿ ಮಠಕ್ಕೆ ಬೈಹುಲ್ಲು ಪೂರೈಸಲಾಗುತ್ತದೆ. ನಮ್ಮ ಸುತ್ತಮುತ್ತಲು ಖಾಲಿ ಬಿದ್ದಿರುವ ಸಣ್ಣ ಜಾಗದಲ್ಲಿ ೧೦ರಿಂದ ೨೦ ಕಂಗು ಅಥವಾ ತೆಂಗು, ಬಾಳೆಗಿಡ ನೆಟ್ಟು ಅಲ್ಪಾವಧಿಯಲ್ಲಿ ಆದಾಯ ಪಡೆಯಲು ಸಾಧ್ಯವಿದೆ” ಎಂದು ಚಂದ್ರಹಾಸ ಕೌಡೂರು ಹೇಳಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter