ಮುಂಬಯಿ : ಜಲ್ಗಾಂವ್ ಇಲ್ಲಿನ ಕವಾಯಿತ್ರಿ ಬಹಿನಾಬಾಯಿ ಚೌಧರಿ ಉತ್ತರ ಮಹಾರಾಷ್ಟ್ರ ವಿಶ್ವವಿದ್ಯಾಲಯದ ೨೯ನೇ ಸಮಾವೇಶ ಕಳೆದ ಸೋಮವಾರ ಆನ್‌ಲೈನ್ (ಝೂಮ್ ಮೀಟಿಂಗ್) ಮೂಲಕ ನಡೆಸಲಾಗಿದ್ದು ಮಹಾರಾಷ್ಟ್ರ ವಿಶ್ವವಿದ್ಯಾಲಯಗಳ ಕುಲಪತಿಯೂ, ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯಪಾಲರು ಉಪಸ್ಥಿತ ಪದವೀಧರರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಕೊರೋನಾ ವೈರಸ್ ರೋಗ ತಪ್ಪಿಸಲು ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಲು ವಿಶ್ವವಿದ್ಯಾಲಯಗಳು ಮತ್ತು ವಿದ್ಯಾರ್ಥಿಗಳನ್ನು ಸಂಕಲ್ಪಿಸಿದರು. ಕೊರೋನಾ-೧೯ ರೋಗವು ಇದ್ದಕ್ಕಿದ್ದಂತೆ ಹೋಗುವ ಸಾಧ್ಯತೆಯಿಲ್ಲ ಎಂದು ಪ್ರಸ್ತಾಪಿಸಿದ ರಾಜ್ಯಪಾಲರು, ಮಾರಕ ತರಂಗವನ್ನು ತಡೆಯಲು ಪ್ರತಿಯೊಬ್ಬ ವ್ಯಕ್ತಿಯ ಪಾಲ್ಗೊಳ್ಳುವಿಕೆಯ ಅಗತ್ಯವಿದೆ ಎಂದರು. ಈ ಪರೀಕ್ಷಾ ಕಾಲದಲ್ಲಿ ಸಮಾಜದ ಮತ್ತು ಅದರ ಅಗತ್ಯವಿರುವ ಜನರ ಸುಧಾರಣೆಗಾಗಿ ಕೆಲಸ ಮಾಡಿದರೆ ಮಾತ್ರ ವಿಶ್ವವಿದ್ಯಾಲಯದಿಂದ ಪಡೆದ ಪದವಿಗಳು ಯಶಸ್ವಿಯಾಗುತ್ತವೆ ಎಂದು ರಾಜ್ಯಪಾಲರು ವಿದ್ಯಾರ್ಥಿಗಳಿಗೆ ನೆನಪಿಸಿದರು.
ಸಾಹಿತ್ಯ ಮತ್ತು ಸಂಸ್ಕ್ರತಿಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಪ್ರತಿ ವಿಶ್ವವಿದ್ಯಾಲಯದಿಂದ ವಾರ್ಷಿಕ ಸಾಹಿತ್ಯೋತ್ಸವವನ್ನು ಆಯೋಜಿಸಬೇಕೆಂದು ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್ ಸಮಂತ್ ಕರೆ ನೀಡಿದರು. ಎಲ್ಲಾ ವಿಶ್ವವಿದ್ಯಾಲಯ ಕ್ಯಾಂಪಸ್‌ಗಳನ್ನು ತಂಬಾಕು ಮುಕ್ತ, ವ್ಯಸನ ಮುಕ್ತ ಮತ್ತು ಕಿರುಕುಳದಿಂದ ಮುಕ್ತಗೊಳಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸುಮಾರು ೪೯೭೫೩ ಪದವೀಧರರಿಗೆ ಪದವಿಗಳನ್ನು ಪ್ರದಾನಿಸಲಾಗುವುದು. ೨೬೧ ವಿದ್ಯಾರ್ಥಿಗಳಿಗೆ ಪಿಎಚ್‌ಡಿ ನೀಡಲಾಗುತ್ತಿದೆ ಎಂದು ಅಧಿಕೃತ ಉಪಕುಲಪತಿ ಡಾ| ಇ. ವಾಯುನಂದನ್ ತಿಳಿಸಿದರು. ಅವಿನಾಶ್ ಪಾಟೀಲ್ ಅವರಿಗೆ ಕುಲಪತಿಗಳ ಸ್ವರ್ಣ ಪದಕ ಮತ್ತು ಅಡ್ನಾನ್ ಅಹ್ಮದ್ ಶೇಖ್ ಮತ್ತು ಗಾಯತ್ರಿ ಸಂಜಯ್ ಬ್ಯಾರಿ ಅವರಿಗೆ ಇತರ ಸ್ವರ್ಣ ಪದಕಗಳನ್ನು ಪ್ರದಾನಿಸಲಾಯಿತು.
