Published On: Mon, Apr 19th, 2021

ಯೋಗ ಶಿಕ್ಷಣ ತರಬೇತಿಯ ಸಮಾರೋಪ, ಮಾತೃವಂದನ ಮತ್ತು ಮಾತೃ ಭೋಜನ ಕಾರ್ಯಕ್ರಮ

ಬಂಟ್ವಾಳ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ ಹಾಗೂ ರಕ್ತೇಶ್ವರಿ ದೇವಿ ದೇವಸ್ಥಾನ ಬಿ.ಸಿ.ರೋಡು ಇವರ ಸಂಯುಕ್ತ ಆಶ್ರಯದಲ್ಲಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಹಾಲ್ ನಲ್ಲಿ 48 ದಿನಗಳ ಕಾಲ ನಡೆದ ಯೋಗ ಶಿಕ್ಷಣ ತರಬೇತಿಯ ಸಮಾರೋಪ ಹಾಗೂ ಮಾತೃವಂದನ ಮತ್ತು ಮಾತೃ ಭೋಜನ ಕಾರ್ಯಕ್ರಮ 18 ರಂದು ಆದಿತ್ಯವಾರ ಸಂಜೆ ನಡೆಯಿತು.1
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಇದರ ಕಾವೂರು ನಗರ ಸಂಚಾಲಕಿ ಕನಕ ಅವರು ಮಾತನಾಡಿ ಯೋಗದಿಂದ ನಮ್ಮ ಮಾನಸಿಕ ಆರೋಗ್ಯದ ಜೊತೆಗೆ ಸಂಸ್ಕಾರಯುತ ಜೀವನದ ಬಗ್ಗೆ ಮಾಹಿತಿ ಪಡೆಯಲು ಸಾಧ್ಯ ಎಂದು ಅವರು ಹೇಳಿದರು. ಗುರು ಹಿರಿಯರ ಪೂಜ್ಯನೀಯ ಭಾವನಾತ್ಮಕ ಸಂಬಂಧವನ್ನು ಅವರು ಈ ಸಂದರ್ಭದಲ್ಲಿ ತಿಳಿಸಿದರು. ಯಾವುದೇ ಶಿಕ್ಷಣ ಗಳು ಜೀವನ ಶೈಲಿಯನ್ನು ರೂಪಿಸಿಕೊಳ್ಳಲು ಸಹಾಯ ಮಾಡುತ್ತವೆ ಎಂದು ಅವರು ಹೇಳಿದರು. ಶೃದ್ದೆಯಿಂದ ಅಳವಡಿಸಿಕೊಂಡು ಹೋಗುವುದು ನಮ್ಮ ಜವಬ್ದಾರಿ  ಎಂದು ಅವರು ಹೇಳಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಇದರ ಸೇವಾ ವಿಭಾಗದ ಪ್ರಾಂತ ಸಂಚಾಲಕ ರವೀಶ್ ಕುಮಾರ್ ಮಾತೃವಂದನಾ ವಿಷಯದ ಬಗ್ಗೆ ಭೌಧ್ದಿಕ್ ನೀಡದ ಅವರು  ತಂದೆ ತಾಯಿಯನ್ನು ಪ್ರೀತಿಯಿಂದ ,ಕಾಳಜಿಯಿಂದ ಗೌರವಯುತ ವಾಗಿ ನಿರಂತರವಾಗಿ ನೋಡಿಕೊಳ್ಳಿ ಅದುವೇ ನೈಜವಾದ ಜೀವನ ಎಂದರು.ಮಕ್ಕಳಲ್ಲಿ ಸಂಸ್ಕಾರ ಬೆಳೆಯಬೇಕಾದರೆ ಹಿರಿಯರು ಮೊದಲಿಗೆ ಅಂತಹ ಜೀವನದಲ್ಲಿ ಸಾಗಬೇಕು ಎಂದರು. ಮನೆ ಮನಸ್ಸು ಸದಾ ಸಂತೋಷವಾಗಿರುವಂತಹ ಸಮಾಜ ನಿರ್ಮಾಣ ವಾದರೆ ಮಾತ್ರ ಆರೋಗ್ಯ ವಂತ ಸಮಾಜ ನಿರ್ಮಾಣ ಸಾಧ್ಯ ಎಂದರು.
ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಕಾರ್ಯದರ್ಶಿ ಶಿವಶಂಕರ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಮನಸ್ಸು, ಉಸಿರುನ್ನು  ಯೋಗದ ಅಂಶಗಳನ್ನು  ಜೊತೆಯಲ್ಲಿ ಸೇರಿಸಿ ಮಾಡುವ ಕ್ರಿಯೆಯನ್ನು ಸಮಿತಿ ಮೂಲಕ  ಸಿಕ್ಕಿರುವುದು ಸಂತಸದ ವಿಚಾರ ಎಂದರು. ತರಬೇತಿ ಯ ಜೊತೆ ಜೀವನದ ಮಹತ್ವದ ಅನುಭವವಾಗಿದೆ ಎಂದರು.  ಜಿಲ್ಲಾ ವ್ಯವಸ್ಥಪನಾ ಪ್ರಮುಖ್ ಲಕ್ಮೀನಾರಾಯಣ ಅವರು ಮಾತೃ ಪೂಜನಾ ಕಾರ್ಯ ಕ್ರಮ ನಡೆಸಿಕೊಟ್ಟರು. ಸೃಷ್ಟಿ ಸ್ವಾಗತಿಸಿ ನಯನ ವಂದಿಸಿದರು. ರಮ್ಯ ಕಾರ್ಯಕ್ರಮ ನಿರೂಪಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter