Published On: Sat, Apr 17th, 2021

ಕಕ್ಯಪದವು ಡಾ.ಬಿ.ಆರ್.ಅಂಬೇಡ್ಕರ್  ಜಯಂತಿ ಆಚರಣೆ,ರಸ್ತೆ ಉದ್ಘಾಟನೆ

ಬಂಟ್ವಾಳ :  ಬಂಟ್ವಾಳ ತಾಲೂಕಿನ ಉಳಿ ಗ್ರಾ.ಪಂ.ನ ಕಕ್ಯಪದವು   ಡಾ.ಬಿ ಆರ್. ಅಂಬೇಡ್ಕರ್ ಯುವಕ ಸಂಘ ಇದರ ವತಿಯಿಂದ  ಡಾ.ಬಿ.ಆರ್.ಅಂಬೇಡ್ಕರ್ ಅವರ ೧೩೦ನೇ ಜನ್ಮದಿನಾಚರಣೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್  ರಸ್ತೆ ಉದ್ಘಾಟನೆ ಕಾರ್ಯಕ್ರಮ ಎ.೧೪ರಂದು ಜರಗಿತು. ಕಕ್ಯಪದವು ರಿಕ್ಷಾ ಪಾರ್ಕಿಂಗ್ ಬಳಿ ಸಾರ್ವಜನಿಕವಾಗಿ ಡಾ.ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.  ಡಾ. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಲಾಯಿತು. ಉಳಿ ಗ್ರಾ.ಪಂ. ಅಧ್ಯಕ್ಷ ಸುರೇಶ್ ಮೈರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಡಾ. ಅಂಬೇಡ್ಕರ್ ಅವರು ಓರ್ವ ದೇಶಭಕ್ತ ವಕೀಲರಾಗಿದ್ದು, ಪತ್ನಿ ತೀರಿಕೊಂಡ ವಿಷಯ ತಿಳಿದೂ ಗಲ್ಲು ಶಿಕ್ಷೆಗೆ ಒಳಗಾಗಬೇಕಾಗಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ರಕ್ಷಿಸಿದ ಕೀರ್ತಿ  ಅವರದ್ದು ಎಂದು ಹೇಳಿದರು.IMG-20210416-WA0026ಕಕ್ಯಪದವು ಜುಮ್ಮಾ ಮಸೀದಿಯ ಧರ್ಮಗುರು ಅಬೂಬಕ್ಕರ್ ಸಅದಿ   ಅವರು ಮಾತನಾಡಿ,  ಡಾ.ಅಂಬೇಡ್ಕರ್ ಅವರು ಎಲ್ಲರಿಗೂ ಸಮಾನ ಅವಕಾಶವನ್ನು ಸಂವಿಧಾನದ ಮೂಲಕ ಮಾಡಿಕೊಟ್ಟ ನಿಜವಾದ ಸಾಮಾಜಿಕ ನ್ಯಾಯದ ಹರಿಕಾರ ಎಂದು ಹೇಳಿದರು. ಕಕ್ಯಪದವು ಶ್ರೀ ಬ್ರಹ್ಮ ಬದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲ್ಯಾನ್,  ತಾ.ಪಂ. ಸದಸ್ಯೆ ಬೇಬಿ ಕೃಷ್ಣಪ್ಪ, ಗ್ರಾ.ಪಂ. ಸದಸ್ಯರಾದ ವಸಂತ ರಾಮನಗರ, ರಕ್ಷಿತಾ, ಭೂನ್ಯಾಯ ಮಂಡಳಿಯ ಮಾಜಿ ಸದಸ್ಯ ಪರಮೇಶ್ವರ ನಾಯಕ್ ಗಿಳಿಂಗಾಜೆ,ಜುಮ್ಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್, ಸಂಘದ ಗೌರವಾಧ್ಯಕ್ಷ ಅಣ್ಣು ಖಂಡಿಗ, ಕಜೆಕಾರು ಸೇ.ಸ.ಸಂಘದ ನಿರ್ದೇಶಕ ಅಣ್ಣಿ ಕರ್ಲ,ಸಂಘದ ಅಧ್ಯಕ್ಷ ರಾಜೀವ್ ಕಕ್ಯಪದವು, ಸಂಘದ ಪದಾಽಕಾರಿಗಳು, ರಿಕ್ಷಾ ಚಾಲಕರು,  ಗ್ರಾಮಸ್ಥ್ಥರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಉಳಿ ಗ್ರಾ.ಪಂ.ನ ೨೦೧೫-೨೦ ಸಾಲಿನ ನಿರ್ಣಯದಂತೆ ನಿರ್ಮಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯನ್ನು ಗ್ರಾ.ಪಂ.ಅಧ್ಯಕ್ಷ ಸುರೇಶ್ ಮೈರ ಅವರು ಉದ್ಘಾಟಿಸಿದರು.  ಡಾ. ಬಿ.ಆರ್. ಅಂಬೇಡ್ಕರ್ ರಸ್ತೆಯನ್ನು ಗ್ರಾ.ಪಂ.ಅಧ್ಯಕ್ಷ ಸುರೇಶ್ ಮೈರ ಅವರು ಉದ್ಘಾಟಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter