ಸುದ್ದಿ9 ಮೂಡಬಿದ್ರೆ; ದೀಪಾವಳಿ ಹಬ್ಬ ಬಂದೇ ಬಿಟ್ಟಿದೆ. ಹಬ್ಬದಂದು ಬಲಿಯೇಂದ್ರನನ್ನು ಕರೆಯುವ ಸಂಪ್ರದಾಯ ನಮ್ಮದು. ಆದರೆ ಬಲಿ ಚಕ್ರವರ್ತಿ ಯನ್ನು ಪಾತಾಳಕ್ಕೆ ತಳ್ಳಿದ ಸಕ್ಷಾತ್ ವಾಮನ ಮೂತರ್ಿಯೇ ಈ ಬಾರಿ ಹಬ್ಬಕ್ಕೆ ಕರೆಯದೆ ಅಥಿತಿಯಾಗಿ ಬಂದಿದ್ದಾನಂತೆ, ಅದೂ ಕೂಡ ಲಕ್ಷೀ ದೇವಿಗೆ ಮನೆಯೊಂದರಲ್ಲಿ ಬೆಳಗಿಸಿದ ದೀಪದ ಮೂಲಕ.
ಮುಂಡ್ಕೂರಿನ ಸಂಕಲಕರಿಯ ಎಂಬಲ್ಲಿರುವ ಕಿನ್ನಿಗೋಳಿಯ ಉದ್ಯಮಿಯೊಬ್ಬರ ಮನೆಯಲ್ಲಿ ಈ ಪವಾಡ ನರಕ ಚತುರ್ಧಶಿಯಾದ ನಿನ್ನೆಯ ದಿನ ನಡೆದಿದೆಯಂತೆ. ಸುದ್ದಿ ತಿಳಿಯುತ್ತಿದ್ದಂತೆ ಜನ ಕೂಡ ಕೈ ಮುಗಿಯುತ್ತಾ ಇವರ ಮನೆಗೆ ಓಡೋಡಿ ವಾಮನ ದರ್ಶನ ಪಡೆದಿದ್ದಾರಂತೆ. ವಾಮನನ ಪವಾಡದ ಬಗ್ಗೆ ಮಾದ್ಯಮಗಳಿಗೆ ವೀಡಿಯೋ ನೀಡಿರುವ ಅವರು ತಮಗಾದ ಅನುಭವವನ್ನು ವಿವರಿಸಿದ್ದಾರೆ.
ಆಗಿದಿಷ್ಟು; ಸಂಕಲಕರಿಯ ನಿವಾಸಿ ಅಶೋಕ್ ಪೂಜಾರಿ ಕಿನ್ನಿಗೋಳಿಯ ಹೂವಿನ ವ್ಯಾಪಾರಿಯಾಗಿದ್ದು, ದೈವ ಭಕ್ತರೂ ಕೂಡ. ನಿನ್ನೆ ದೀಪಾವಳಿಯ ಪ್ರಾರಂಭದ ದಿನವಾದ್ದರಿಂದ ಎಣ್ಣೆ ಸ್ನಾನಮಾಡಿ ಮಂತ್ರ ಪಟನದೊಂದಿಗೆ ದೇವರ ಕೋಣೆಯಲ್ಲಿ ದೇವರಿಗೆ ದೀಪ ಬೆಳಗಿಸಿ ಕೈ ಮುಗಿದು ಹಿಂತಿರುಗಿದ್ದರು. ಒಂದೆರಡು ನಿಮಿಷದಲ್ಲೇ ಮತ್ತೆ ದೇವರ ಕೋಣೆಗೆ ತೆರಳಿದಾಗ ಪವಾಡವೊಂದು ಕಾಣಿಸಿದೆಯಂತೆ. ದೇವರಿಗೆ ಇಟ್ಟ ದೀಪದಲ್ಲಿ ಕಪ್ಪು ಬಣ್ಣದ ಕೊಡೆ(ಛತ್ರಿ) ಕಾಣಿಸಿಕೊಂಡು, ಬಳಿಕ ದೀಪ ಸೂರ್ಯ ಮತ್ತು ಚಂದ್ರನ ಆಕಾರಕ್ಕೆ ತಿರುಗಿದೆ. ದೀಪದ ಪಕ್ಕ ಕೊಡೆ ಕಾಣಿಸಿಕೊಂಡ ಬೆನ್ನಲ್ಲೇ ದೀಪವೇ ಮಾನವನ ಆಕಾರಕ್ಕೆ ತಿರುಗಿದ್ದು, ಕೊಡೆ ಕಾಣಿಸಿಕೊಂಡು ಈ ಬೆಳವಣಿಗೆ ನಡೆದ ಹಿನ್ನಲೆಯಲ್ಲಿ ಸಾಕ್ಷಾತ್ ವಾಮನ ಮೂತರ್ಿಯೇ ಬಂದಿರಬೇಕು ಎನ್ನುತ್ತಾರೆ ಅಶೋಕ್. ದೀಪವೂ ಕೂಡ ಪವಾಡ ರೀತಿಯಲ್ಲಿ ಬೆಳಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಅಕ್ಕ ಪಕ್ಕದ ಮನೆಯವರು ಓಡೋಡಿ ಬಂದು ಪವಾಡ ಕಂಡಿದ್ದಾರಂತೆ. ಸಾಲದ್ದೆಂಬದಕ್ಕೆ ನಿನ್ನೆ ಅಶೋಕ್ ರವರಿಗೆ ಸಾವಿರಾರು ರೂಪಾಯಿ ಲಾಭವೂ ಆಗಿದೆಯಂತೆ. ತಮಗಾದ ಲಾಭವನ್ನು ಅಶೋಕ್ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದು, ಕಥೆ ಕೇಳಿದ ಮಂದಿ ವಾಮನ ಮಹಿಮೆಯನ್ನು ತಿಳಿಯುವ ತವಕದಲ್ಲಿದ್ದಾರೆ.


