ಸುದ್ದಿ9ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಅಕ್ಟೋಬರ್ 31 ರಂದು ನಡೆಯಲಿರುವ ವಿದ್ಯಾ ರ್ಥಿ ಸಾಹಿತ್ಯ ಸಂಸ್ಕೃತಿ ಸಮ್ಮೇಳನವನ್ನು ಗಿನ್ನೆಸ್ ದಾಖಲೆ ಮಾಡಿದ ನಿರ್ದೆಶಕ , ನಟ ಮಾಸ್ಟರ್ ಕಿಶನ್ ಎಸ್.ಎಸ್ ಉದ್ಘಾಟಿಸಲಿದ್ದಾರೆ. ಮಕ್ಕಳ ಸಾಹಿತಿ ಡಾ.ಎಚ್.ಎಸ್ ವೆಂಕಟೇಶ ಮೂತರ್ಿ ಸಮಾರೋಪ ಭಾಷಣ ಮಾಡಲಿದ್ದಾರೆ.
ಕಾಸರಗೋಡು ಪೈವಳಿಕೆ ಸಕರ್ಾರಿ ಪ್ರೌಢಶಾಲೆಯ ವಿದ್ಯಾ ರ್ಥಿ ಶ್ರದ್ಧಾ ಎನ್ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, 30ರಿಂದ ಉದ್ಘಾಟನ ಸಮಾರಂಭ ನಡೆಯಲಿದ್ದು ಮಂಗಳೂರಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿದ್ಯಾಂಗ ಉಪನಿದರ್ೇಶಕ ವಾಲ್ಟರ್ ಡಿಮೆಲ್ಲೊ, ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದ ಮಡಿವಾಳ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ವಿದ್ಯಾ ರ್ಥಿ ಪ್ರತಿಭೆಗಳಾದ ಅಕ್ಷಯ್ ಹೆಗಡೆ ಒಳಕಾಡು, ಅಯನಾ ವಿ ರಮಣ್ ಮತ್ತು ಗೀತಾಲಕ್ಷ್ಮಿ.ಕೆ. ಇವರಿಗೆ ಆಳ್ವಾಸ್ ವಿದ್ಯಾಥರ್ಿ ಪ್ರತಿಭಾ ಪುರಸ್ಕಾರ 2014 ನೀಡಿ ಗೌರವಿಸಲಾಗುವುದು.

ಸಮ್ಮೇಳನದಲ್ಲಿ ನಾಲ್ಕುವಿದ್ಯಾ ರ್ಥಿ ಉಪನ್ಯಾಸಗಳಿದ್ದು ಇದರಲ್ಲಿ ಅಕ್ಷಯ್ ಹೆಗಡೆ ವಳಕಾಡು ಉಡುಪಿ, ಉತ್ಪಲ ಬಿ.ಎಂ, ಮಂಗಳೂರು, ದೀಪ್ತಿ ರಾವ್, ಉಜಿರೆ, ಮಹಾಲಕ್ಷ್ಮಿ ಉಪ್ಪಿನಕುದ್ರು ಇವರು ಉಪನ್ಯಾಸ ನೀಡಲಿದ್ದಾರೆ. ಎರಡು ಹಿರಿಯರಿಂದ ಉಪನ್ಯಾಸ ನಡೆಯಲಿದ್ದು ಇದರಲ್ಲಿ ಪುತ್ತೂರಿನ ಡಾ.ಶ್ರೀಶಕುಮಾರ್ ಮತ್ತು ತಾರಾನಾಥ ಬಲ್ಯಾಯ ವಕರ್ಾಡಿ ಇವರು ಮಾತನಾಡಲಿದ್ದಾರೆ.
ಬಂಟ್ವಾಳ ಮಾಣಿಲ ಸರಕಾರಿ ಪ್ರೌಢಶಾಲೆಯ ವಿದ್ಯಾಥರ್ಿ ಅನನ್ಯಾ ಬಳಂತಿಮೊಗರು ಅಧ್ಯಕ್ಷತೆಯಲ್ಲಿ ನಡೆಯುವ ವಿದ್ಯಾ ರ್ಥಿ ಕವಿಗೋಷ್ಠಿಯಲ್ಲಿ ಚಿತ್ತರಂಜನ್ ಶೆಟ್ಟಿ ಕಟೀಲು, ಗೀತಾಲಕ್ಷ್ಮಿ. ಕೆ ಮೂಡುಬಿದರೆ, ಅಕಾಂಕ್ಷ ಕಜೆಗದ್ದೆ, ಕನಕಮಜಲು ಸುಳ್ಯ, ಸಂಧ್ಯಾ ಎಂ.ಉಜಿರೆ, ಭವಾನಿ, ಮೂಡುಬಿದಿರೆ, ವೃಂದಾ ಉಪಾಧ್ಯ ಕೋಟ ಇವರು ಕವಿತೆ ವಾಚಿಸಲಿದ್ದಾರೆ. ಪ್ರಾಥಮಿಕ ಶಾಲಾ ವಿದ್ಯಾಥರ್ಿಗಳಿಂದ ಅಭಿನಯ ಗೀತೆ ಗೀಷ್ಠಿ ನಡೆಯಲಿದ್ದು ಅದರಲ್ಲಿ ಕೀರ್ತನ್.ಪಿ ಶೆಟ್ಟಿ, ಮನುಜ ನೇಹಿಗ, ಶರಣ್ಯ, ಹಷರ್ಿತಾ ಶಿರೂರು, ಶರಧಿ ರೈ, ಮನಸ್ವಿ ಡಿ, ಸಾನ್ವಿ ಭಟ್, ನಿತ್ಯಾ ಎನ್ ಭಾಗವಹಿಸಲಿದ್ದಾರೆ.
ಸಮ್ಮೇಳನದ ನಡು ನಡುವೆ ವಿವಿಧ ಸಾಂಸ್ಕೃತಿಕ ಮತ್ತು ವಿದ್ಯಾ ರ್ಥಿ ಪ್ರತಿಭಾ ಪ್ರದರ್ಶನಗಳಿದ್ದು ಇದರಲ್ಲಿ ಅಯನಾ ವಿ ರಮಣ್, ಆದಿ ಸ್ವರೂಪ ಮಣ್ಣಗುಡ್ಡೆ, ಸುನಾದ ಕೃಷ್ಣ ಅಮೈ, ಸಾತ್ವಿಕ್ ನಾಯಕ್ ಪುತ್ತೂರು ಮತ್ತು ಆಳ್ವಾಸ್ ವಿದ್ಯಾಥರ್ಿಗಳ ತಂಡಗಳು ಭಾಗವಹಿಸಲಿವೆ.ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಐವರು ಸಾಧಕರಿಗೆ ‘ಆಳ್ವಾಸ್ ಮಕ್ಕಳ ಸಾಹಿತ್ಯ ಪುರಸ್ಕಾರ- 2014’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿ.ವಿ ಕಾರಂತರ ನಿದರ್ೇಶನದ ರಂಗಗೀತೆಗಳು, ಜೀವನ್ ರಾಂ ಸುಳ್ಯ ನಿದರ್ೇಶನದ ಮಧ್ಯಮ ವ್ಯಾಯೋಗ ನಾಟಕ, ಸದಾಶಿವ ಶೆಟ್ಟಿಗಾರ್ ನಿದರ್ೇಶನದ ತೆಂಕುತಿಟ್ಟು ಯಕ್ಷಗಾನ ತರಣಿಸೇನ ಕಾಳಗ ಇವುಗಳನ್ನು ಆಳ್ವಾಸ್ನ ವಿದ್ಯಾಥರ್ಿಗಳು ಪ್ರಸ್ತುತ ಪಡಿಸಲಿದ್ದಾರೆ. ಅನಂತರ ಶ್ರೀಧರ ಹಂದೆ ಮತ್ತು ಸುಜಯೀಂದ್ರ ಹಂದೆ ನಿದರ್ೆಶನದ ಸಾಲಿಗ್ರಾಮ ಮಕ್ಕಳ ಮೇಳದಿಂದ ವೀರ ವೃಷಸೇನ ಎಂಬ ಯಕ್ಷಗಾನ ನಡೆಯಲಿದೆ.ಆಸಕ್ತ ವಿದ್ಯಾಥರ್ಿಗಳು ಮತ್ತು ಸಾರ್ವಜನಿಕರು ಇದರಲ್ಲಿ ಭಾಗವಹಿಸಬೇಕೆಂದು ಡಾ.ಎಂ ಮೋಹನ ಆಳ್ವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಐವರು ಸಾಧಕರಿಗೆ ಮಕ್ಕಳ ಸಾಹಿತ್ಯ ಪುರಸ್ಕಾರ
ವಿದ್ಯಾಥರ್ಿಸಿರಿ ಸಮ್ಮೇಳನದಲ್ಲಿ ಮಕ್ಕಳ ಸಾಹಿತ್ಯ ಸಂಸ್ಕೃತಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆಆಳ್ವಾಸ್ ಮಕ್ಕಳ ಸಾಹಿತ್ಯ ಸಿರಿ ಪುರಸ್ಕಾರ ನೀಡಿ ಗೌರವಿಸಲಾಗುವುದು. ಈ ಬಾರಿ ವಿಠಲ ಬೇಲಾಡಿ ಕಾಂತಾವರ, ಜೀವನ್ ರಾಂ ಸುಳ್ಯ, ಶ್ರೀರಾಮ ಭಟ್ಟ ಸಜಂಗದ್ದೆ ಉಡುಪಿ, ವೆಂಕಿ ಫಲಿಮಾರ್ ( ವೆಂಕಟ್ರಮಣ ಕಾಮತ್) ಹಾಗೂ ಸಾಲಿಗ್ರಾಮ ಮಕ್ಕಳ ಮೇಳ, ಕೋಟ ಇವರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ
…………..

