ಸುದ್ದಿ9ಮೂಡುಬಿದಿರೆ:ಕಡಲಕೆರೆ ನಿಸರ್ಗಧಾಮದಲ್ಲಿ ದೀಪಾವಳಿಯ ದಿನವಾದ ಗುರುವಾರ ವೈದ್ಯ ಜೋಡಿಯೊಂದು ಪತ್ತೆಯಾದ ಹಿನ್ನೆಲೆಯಲ್ಲಿ ಉಂಟಾದ ವಿವಾದ ವಿವಾದಕ್ಕೇರಿ ಕಾಂಗ್ರೆಸ್ ಕಾರ್ಯಕರ್ತ ಮತ್ತು ಪೊಲೀಸ್ ಮಧ್ಯೆ ಮಾತಿನ ಚಕಮಕಿ, ತಳ್ಳಾಟ ನಡೆದ ಘಟನೆ ಸಂಭವಿಸಿದೆ ಎನ್ನಲಾಗಿದೆ.
ಘಟನೆ ಹಿನ್ನೆಲೆ:ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ ವಿಭಿನ್ನ ಸಮುದಾಯದ ವೈದ್ಯ ಮತ್ತು ವೈದ್ಯೆ ಕಡಲಕೆರೆಯಲ್ಲಿ ನಿಮರ್ಾಣ ಹಂತದಲ್ಲಿರುವ ಫ್ಯಾಕ್ಟರಿ ಕಟ್ಟಡದಲ್ಲಿದ್ದಾರೆಂಬ ಸುದ್ದಿ ತಿಳಿದು ಬಜರಂಗದಳ ಕಾರ್ಯಕರ್ತರು ಜಮಾಯಿಸಿದರು. ಈ ಕಟ್ಟಡ ಕಾಂಗ್ರೆಸ್ ಕಾರ್ಯಕರ್ತ ಚಂದ್ರಹಾಸ್ ಸನಿಲ್ ಎಂಬವರಿಗೆ ಸೇರಿದ್ದಾಗಿತ್ತು. ಅಲ್ಲಿ ಸಾರ್ವಜನಿಕರು ಸೇರಿದ ವಿಷಯ ತಿಳಿದು ತನ್ನ ವಾಹನದಲ್ಲಿ ಅವರು ಸ್ಥಳಕ್ಕಾಗಮಿಸಿದರು. ವಿವಾದ ಉಲ್ಬಣವಾಗುವುದು ಬೇಡ ಎಂದು ತಿಳಿದು ಜೋಡಿಯನ್ನು ಪೊಲೀಸ್ಠಾಣೆಗೆ ತರಲು ತನ್ನ ಕಾರಲ್ಲಿ ಕುಳ್ಳಿರಿಸಿದಾಗ ಬಜರಂಗದಳದವರು ಕಾರಿಗೆ ತಡೆಯೊಡ್ಡಿದ್ದರಿಂದ ವಿವಾದ ಉಂಟಾಗಿ ಎರಡು ಕಡೆಯವರ ಮಧ್ಯೆ ಮಾತಿನ ಚಕಮಕಿ ನಡೆದು ಸವಾಲಿಗೆ ಪ್ರತಯಿಸವಾಲು ಹಾಕಿಕೊಂಡರೆನ್ನಲಾಗಿದೆ.
ಅದೇ ಹೊತ್ತಿಗೆ ಪೊಲೀಸರು ಸ್ಥಳಕ್ಕಾಗಮಿಸಿದರು. ಕಾರಿನಲ್ಲಿದ್ದ ಜೋಡಿಯನ್ನು ತಮ್ಮ ವಶಕ್ಕೆ ನೀಡುವಂತೆ ಸನಿಲ್ಗೆ ಸೂಚಿಸಿದಾಗ ಸನಿಲ್ ಅದಕ್ಕೆ ಒಪ್ಪಲಿಲ್ಲ ಎನ್ನಲಾಗಿದೆ. ಅಲ್ಲಿದ್ದ ಪೊಲೀಸರಿಗು ಸನಿಲ್ ಬಗ್ಗೆ ಸರಿಯಾದ ಪರಿಚಯ ಇರಲಿಲ್ಲ ಎನ್ನಲಾಗಿದ್ದು ಇದರಿಂದ ಪೊಲೀಸರು ಮತ್ತು ಚಂದ್ರಹಾಸ್ ಸನಿಲ್ ಮಧ್ಯೆ ಮಾತು ಬೆಳೆದು ಪರಸ್ಪರ ತಳ್ಳಾಟ ಕೂಡ ನಡೆಯಿತ್ತೆಂದು ವರದಿಯಾಗಿದೆ. ಕೊನೆಗೆ ಸನಿಲ್ ಅವರ ವಾಹನದಲ್ಲೆ ಜೋಡಿಯನ್ನು ಪೊಲೀಸ್ಠಾಣೆಗೆ ತರಲಾಯಿತ್ತೆನ್ನಲಾಗಿದೆ.
ಪೊಲೀಸ್ಠಾಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರೋರ್ವರು ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲೆ ಪೊಲೀಸರ ಜತೆ ಉದ್ಧಟತನದಿಂದ ವತರ್ಿಸಿದ ಘಟನೆ ಪೊಲೀಸ್ ಅಧಿಕಾರಿಗಳ ಅಸಮಧಾನಕ್ಕೆ ಕಾರಣವಾಗಿದ್ದು ನಂತರ ಆತನನ್ನು ಅಲ್ಲಿಂದ ಹೊರಕಳಿಹಿಸಲಾಯಿತು. ಪಣಂಬೂರು ಎಸಿಪಿ ರವಿಕುಮಾರ್ ಪೊಲೀಸ್ಠಾಣೆಗೆ ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆನ್ನಲಾಗಿದೆ.

ya

 

By suddi9

Leave a Reply

Your email address will not be published. Required fields are marked *