ಶ್ರೀನಿವಾಸಪುರ : ಶಿಕ್ಷಕರು ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಗಮನ ನೀಡಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು . ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸರ್ಕಾರಿ ಶಾಲಾ ಕಾಲೇಜುಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿ , ಶಾಲಾ ಮುಖ್ಯಸ್ಥರು ಯಾವುದೇ ಕಾರಣಕ್ಕೂ ಮಕ್ಕಳು ಮೂಲ ಸೌಕರ್ಯದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು . ಶಾಲೆಯಲ್ಲಿ ಶುದ್ಧ ಕುಡಿಯುವ ನೀರು , ಶೌಚಾಲಯ , ಗ್ರಂಥಾಲಯ , ಪ್ರಯೋಗಾಲಯ , ತರಗತಿ ಕೊಠಟಿ ಹಾಗೂ ಶಿಕ್ಷಕರ ಕೊಠಡಿ ಹೊಂದಿರಬೇಕು ಎಂದು ಹೇಳಿದರು.

WhatsApp Image 2021-04-04 at 8.31.52 AM

ಖಾಸಗಿ ಶಾಲೆಗೆ ಸೇರಿಸಲಾಗದ ಬಡ ಕುಟುಂಬಗಳ ವಿದ್ಯಾರ್ಥಿಗಳು ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ . ಖಾಸಗಿ ಶಾಲೆಯಲ್ಲಿ ಕಲಿಯುತ್ತಿ ರುವ ಮಕ್ಕಳನ್ನು ಕಂಡು ಕೀಳರಿಮೆ ಹೊಂದಂತೆ ಶೈಕ್ಷಣಿಕವಾಗಿ ಮುಂದೆ ತರಬೇಕು . ಮಕ್ಕಳು , ತಾವು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೆಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಅವರ ಕಲಿಕೆ ಹಾಗೂ ಫಲಿತಾಂಶ ಇರಬೇಕು ಎಂದು ಹೇಳಿದರು .

ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಉಮಾದೇವಿ , ಬಿಆರ್‌ಸಿ ಕೆ.ಸಿ.ವಸಂತ , ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್ , ನಿರ್ದೇ ಶಕರಾದ ಎಂ.ಬೈರೇಗೌಡ , ಸಿ.ಎನ್.ಚಂದ್ರಪ್ಪ , ಅಶೋಕ್ , ಸಿ.ಎಂ.ವೆಂಕಟರವಣಪ್ಪ , ಕಲಾಶಂಕರ್ , ಜಿ.ಎಂ.ಗೋವಿಂದರೆಡ್ಡಿ ಇದ್ದರು .

By Suddi9

Leave a Reply

Your email address will not be published. Required fields are marked *