ಬಂಟ್ವಾಳ: ಇಲ್ಲಿನ ಬಂಟ್ವಾಳ ಪೇಟೆ ನಂದನಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನದಲ್ಲಿ ಏ.೧ರಿಂದ ೩ರತನಕ ವಾರ್ಷಿಕ ನೇಮೋತ್ಸವ ನಡೆಯಲಿದೆ. ಏ.೧ರಂದು ಬೆಳಿಗ್ಗೆ ೧೦ ಗಂಟೆಗೆ ಗಣಹೋಮ, ನಾಗತಂಬಿಲ, ನವಕ ಕಲಶಾಭಿಷೇಕ ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ೧೦ ಗಂಟೆಗೆ ಅರಸು ದೈವಕ್ಕೆ ನೇಮೋತ್ಸವ, ಏ.೨ರಂದು ರಾತ್ರಿ ೧೦ ಗಂಟೆಗೆ ಜುಮಾದಿ ಬಂಟ ದೈವಗಳಿಗೆ ನೇಮೋತ್ಸವ, ಏ.೩ರಂದು ರಾತ್ರಿ ೧೦ ಗಂಟೆಗೆ ವೈದ್ಯನಾಥ ದೈವಕ್ಕೆ ನೇಮೋತ್ಸವ ಮತ್ತು ಕಂಚಿಲ ಸೇವೆ ನಡೆಯಲಿದೆ. ಏ.೪ರಂದು ರಾತ್ರಿ ೯ಗಂಟೆಗೆ ವೈದ್ಯನಾಥ ದೈವಕ್ಕೆ ಹರಕೆ ನೇಮೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
