ಕಾರ್ಕಳ: ಕರ್ನಾಟಕ ಕರಾವಳಿಯ ಕಾರ್ಕಳ ತಾಲೂಕು ಇಲ್ಲಿ ರೆಂಜಾಳದಲ್ಲಿ ಮಾ೨8 ರಂದು ಭಾನುವಾರ ಸಂಜೆ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಯಿಂದಾಗಿ ಮನೆಯೊಂದರ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದು ಲಕ್ಷಾಂತರ ನಷ್ಟ ಸಂಭವಿಸಿದೆ.
ರೆಂಜಾಳದ ಮಹಾಲಕ್ಷ್ಮಿ ನಗರದ ಗೀತಾ ನಿವಾಸದ ನಾರಾಯಣ ವಿ.ಶೆಟ್ಟಿ ಅವರ ಮನೆಯಿಂದ ದೂರದಲ್ಲಿದ್ದ ಬೃಹತ್ ಮರವೊಂದು ಸುಳಿಗಾಳಿಗೆ ಸಿಕ್ಕಿ ಮನೆಯ ಮೇಲ್ಚಾವಣಿ ಮೇಲಕ್ಕೆ ಬಂದು ಬಿದ್ದಿದ್ದು ಮನೆಯ ಅಡುಗೆ ಕೋಣೆ ಸಂಪೂರ್ಣವಾಗಿ ಧ್ವಂಸಗೊಂಡಿದೆ.
ಘಟನೆ ನಡೆದ ಸಂದರ್ಭದಲ್ಲಿ ನಾರಾಯಣ ಶೆಟ್ಟಿ, ಇಬ್ಬರು ಸಣ್ಣ ಮಕ್ಕಳು ಸೇರಿದಂತೆ ನಾಲ್ವರು ಮನೆಯಲ್ಲಿದ್ದು ಅದೃಷ್ಟವಶಾತ್ ಜೀವಾಪಾಯದಿಂದ ಪಾರಾಗಿದ್ದು ಭಾರಿ ದುರಂತವೊಂದು ತಪ್ಪಿದಂತಾಗಿದೆ.
ಇಷ್ಟೊಂದು ಬೃಹತ್ ಮರವನ್ನು ಗಾಳಿ ಹೊತ್ತುಕೊಂಡು ಬಂದಿರುವುದನ್ನು ಕಂಡ ಸ್ಥಾನೀಯ ಜನತೆ ಆಶ್ಚರ್ಯ ಪಟ್ಟಿದ್ದಾರೆ. ಮನೆಯ ಮೇಲ್ಚಾವಣಿಯ ಒಂದು ಭಾಗ ಕುಸಿದು ಹಾನಿಯಾಗಿದ್ದು ಕಂಪೌಂಡ್ ಸಂಪೂರ್ಣವಾಗಿ ಧರೆಗುರುಳಿದೆ. ಬಿರುಗಾಳಿಗೆ ಸಿಲುಕಿ ಸುಮಾರು ಹತ್ತಕ್ಕಿಂತಲೂ ಅಧಿಕ ಅಡಿಕೆ ಮರಗಳು ಧರಾಶಯಗೊಂಡಿವೆ.
